ಸುಖದೇವ ರಾಜ್ಯಕ್ಕೆ ಪ್ರಥಮ : ಶಾರದಾ ವಿದ್ಯಾ ಸಂಸ್ಥೆ ವತಿಯಿಂದ ಸನ್ಮಾನ

Get real time updates directly on you device, subscribe now.

ವಿದ್ಯಾರ್ಥಿಗಳು ಹಿರಿಯರಿಗೆ ಗೌರವ ಕೊಡುವುದು ಕಲಿಯಬೇಕು : ಎಸ್ ಪ್ರಸಾದ್
ಗಂಗಾವತಿ : ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಮಾನ್ವಿ ಪಟ್ಟಣದ ವಿದ್ಯಾರ್ಥಿ ಸುಖದೇವ ಇವರಿಗೆ ವಿದ್ಯಾನಗರ ಶಾರದಾ ವಿದ್ಯಾಸಂಸ್ಥೆಯಲ್ಲಿ  ಸನ್ಮಾನ ಸಮಾರಂಭ ಕಾರ್ಯಕ್ರಮ ಜರುಗಿತು.
ಈ ವೇಳೆ ಶಾರದಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಸ್ ಪ್ರಸಾದ್ ಮಾತನಾಡಿ
ಸುಖದೇವ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ. ಈ ಸಾಧನೆಯಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ರಾಜ್ಯಮಟ್ಟದಲ್ಲಿ ಕೀರ್ತಿ ಬಂದಿದೆ ಇದೇ ತರ ಪ್ರತಿಯೊಬ್ಬ ವಿದ್ಯಾರ್ಥಿಗಳು ಸಾಧನೆ  ಮಾಡಬೇಕು, ಪಾಲಕರಗೆ ಗುರುಹಿರಿಯರಿಗೆ  ಶಿಕ್ಷಕರಿಗೆ ವಿದ್ಯಾರ್ಥಿಗಳು ಗೌರವಿಸಬೇಕೆಂದು ವಿದ್ಯಾರ್ಥಿಗಳಿಗೆ ಹೇಳಿದರು.
ವಿದ್ಯಾರ್ಥಿ ಸುಖದೇವ ಮಾತನಾಡಿ ತಂದೆ-ತಾಯಿಯ ಬೆಂಬಲ, ಶಿಕ್ಷಕರ ಮಾರ್ಗದರ್ಶನದಿಂದಾಗಿ ನಿರೀಕ್ಷೆಗೂ ಮೀರಿದ ಫಲಿತಾಂಶ ಪಡೆಯಲು ಸಾಧ್ಯವಾಗಿದೆ. ಪ್ರತಿ ದಿನ ಕಡ್ಡಾಯವಾಗಿ ಮನೆಯಲ್ಲಿ 3-4 ತಾಸು ಓದುತ್ತಿದ್ದೆ’ ಎಂದು ಅವರು ತಿಳಿಸಿದರು.
ಜಾನಕಿ ರಾಮ ಕಲ್ಯಾಣ ವೈಜರ್ ಕಾಲೇಜ್ ಅಧ್ಯಕ್ಷರು ಮಾತನಾಡಿ
ವಿದ್ಯಾರ್ಥಿ ಸುಖದೇವ ಪರಿಶ್ರಮದಿಂದ ಓದಿ ಉನ್ನತ ಸಾಧನೆ ಮಾಡಿದ್ದಾರೆ. ಶಾರದಾ ವಿದ್ಯಾ ಸಂಸ್ಥೆಯ ಪ್ರತಿಯೊಬ್ಬ ವಿದ್ಯಾರ್ಥಿಗಳು ಪರಿಶ್ರಮದಿಂದ ಓದಬೇಕು, ಈಗಾಗಲೇ ವೈ ಜಿ ಆರ್ ಪಿಯು ಕಾಲೇಜ್ ರಾಜ್ಯದಲ್ಲಿ 10ನೇ ಟಾಪರ್ ಆಗಿದೆ, ಮುಂದಿನ ದಿನದಲ್ಲಿ ನಂಬರ್ 1 ಟಾಪರ್ ಆಗಬೇಕು, ಉತ್ತಮ ಶಿಕ್ಷಣ ವಿದ್ಯಾರ್ಥಿಗಳಿಗೆ ಬೇಕಾಗುವ ಎಲ್ಲಾ ಸೌಲಭ್ಯವನ್ನು ನಮ್ಮ ಶಾರದಾ ವಿದ್ಯಾ ಸಮಸ್ತೆ ಮಾಡಿಕೊಡುತ್ತದೆ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಪರಶುರಾಮ ಕಟ್ಟಿಮನಿ ಮಾತನಾಡಿ ‘ನಮ್ಮ ಮಗ ಹತ್ತನೇ ತರಗತಿಯ ಶೈಕ್ಷಣಿಕ ವರ್ಷದ ಆರಂಭದಿಂದಲೇ ಹೆಚ್ಚು ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದ. ಪರೀಕ್ಷೆಗಳು ಮುಗಿದ ನಂತರ ಹೆಚ್ಚು ಅಂಕಗಳನ್ನು ಗಳಿಸುವ ಬಗ್ಗೆ ಆತ್ಮವಿಶ್ವಾಸದಿಂದ ಹೇಳಿದ್ದನು. ಈಗ ಆತನ ಪರಿಶ್ರಮಕ್ಕೆ ತಕ್ಕ ಫಲ ದೊರೆತಿದೆ. ಮಗನ ಸಾಧನೆಯಿಂದ ಬಹಳ ಖುಷಿಯಾಗಿದೆ’ ಎಂದು ಹೇಳಿದರು.
ನಂತರ  ಸುಖದೇವ ಹಾಗೂ ತಂದೆ ಪರಶುರಾಮ ಕಟ್ಟಿಮನಿ ಇವರಿಗೆ ವಿದ್ಯಾನಗರ ಶಾರದಾ ವಿದ್ಯಾ ಸಂಸ್ಥೆಯ  ಅಧ್ಯಕ್ಷರು ಪದಾಧಿಕಾರಿಗಳು ಸರ್ವ ಸದಸ್ಯರು ಸನ್ಮಾನಿಸಿ ಗೌರವಿಸಿದರು.
 ಈ ಸಂದರ್ಭದಲ್ಲಿ ಆರ್ ರಾಜಶೇಖರ್ ಕಾರ್ಯದರ್ಶಿ, ಟಿವಿ ಸತ್ಯನಾರಾಯಣ ಡೈರೆಕ್ಟರ್, ವಿ ವಿಶ್ವನಾಥ್ ರಾಜು, ಟಿವಿ ಸುಬ್ಬರಾವ್, ಉಪನ್ಯಾಸಕ ವೃಂದ, ಸಿಬ್ಬಂದಿ ವರ್ಗ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!