ಶಿಕ್ಷಕ ಅಲ್ತಾಫ್ ಹುಸೇನ್ ಮಕಾನದಾರ ಅವರಿಗೆ ಪಿಎಚ್.ಡಿ ಪದವಿ ಪ್ರದಾನ

Get real time updates directly on you device, subscribe now.


ಕೊಪ್ಪಳ : ೨೪, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಂಡೂರಿನ ಶಿಕ್ಷಕ, ಕೊಪ್ಪಳದ ಅಲ್ತಾಫ್ ಹುಸೇನ್ ಮಕಾನದಾರ ಅವರಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಲಭಿಸಿದೆ.

ವಿಶ್ವವಿದ್ಯಾಲಯದ ಭೌತಶಾಸ್ತç ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ಪ್ರೊ. ಸಂಜೀವ್ ಆರ್. ಇನಾಮದಾರ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ’Photophysical Characterization of Nanoparticle Fluorophore Systems” . ಎಂಬ ವಿಷಯದ ಕುರಿತು ನಡೆಸಿದ ಸಂಶೋಧನಾ ಮಹಾ ಪ್ರಬಂಧಕ್ಕೆ ವಿಶ್ವವಿದ್ಯಾಲಯದ ಗಾಂಧಿ ಭವನದಲ್ಲಿ ನಿನ್ನೆ ನಡೆದ ೭೫ನೇ ವಾರ್ಷಿಕ ಘಟಿಕೋತ್ಸವದಲ್ಲಿ ಕರ್ನಾಟಕದ ರಾಜ್ಯಪಾಲರಾದ ಮಾನ್ಯ
ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಪಿಎಚ್.ಡಿ ಪದವಿಯನ್ನು ವಿತರಿಸಿದರು.

ಡಾಕ್ಟರೇಟ್ ಪದವಿ ಪಡೆದ ಅಲ್ತಾಫ್ ಹುಸೇನ್ ಮಕಾನದಾರ ಅವರನ್ನು ಕುಟುಂಬದವರು, ಶಿಕ್ಷಕ ಮಿತ್ರರು, ಸ್ನೇಹಿತರು ಅಭಿನಂದಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!