ನಾನಾ ಕ್ಷೇತ್ರದ ಐವ್ವರು ಸಾಧಕರಿಗೆ ಗೌರವ ಸನ್ಮಾನ೩೧ರಂದು ಕೆಎಲ್‌ಇ ಕಾಲೇಜಿನಲ್ಲಿ ದತ್ತಿ ಉಪನ್ಯಾಸ

ಗಂಗಾವತಿ:
ತಾಲ್ಲೂಕಿನ ವಡ್ಡರಹಟ್ಟಿಯಲ್ಲಿರುವ ಕರ್ನಾಟಕ ಲಿಂಗಾಯತ್ ಶಿಕ್ಷಣ ಸಂಸ್ಥೆಯ ಕೆಎಲ್‌ಇ ಕಾಲೇಜಿನಲ್ಲಿ ಮಾರ್ಚ್ ೩೧ರಂದು ದತ್ತಿ ಉಪನ್ಯಾಸ ಆಯೋಜಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್, ತಾಲ್ಲೂಕು ಅಧ್ಯಕ್ಷ ರುದ್ರೇಶ ರ‍್ಹಾಳ ತಿಳಿಸಿದ್ದಾರೆ.
ಮಾ.೩೧ರಂದು ಬೆಳಗ್ಗೆ ೧೦.೩೦ಕ್ಕೆ ಆರಂಭವಾಗಲಿರುವ ಕಾರ್ಯಕ್ರಮಕ್ಕೆ ಮಾಜಿಶಾಸಕ ಪರಣ್ಣ ಮುನವಳ್ಳಿ ಉದ್ಘಾಟಿಸಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದು, ಕೆಎಲ್‌ಇ ಕಾಲೇಜಿನ ಸ್ಥಳೀಯ ಆಡಳಿತ ಮಂಡಳಿ ಅಧ್ಯಕ್ಷ ಹೊಸಕೇರಿ ಗಿರಿಯಪ್ಪ, ಪ್ರಾಂಶುಪಾಲೆ ಡಾ. ಮಾನಸ ಡಿ.ಎ ಭಾಗಿಯಾಗಲಿದ್ದಾರೆ.
ರಾಜಶೇಖರಪ್ಪ ಹೊಸಕೇರಿ, ಚನ್ನಬಸಮ್ಮ ಈಶ್ವರಪ್ಪ ಮುನವಳ್ಳಿ, ಬಸವರಾಜ ಕೋಟೆ, ಡಿ.ಗೋವರ್ಧನ ರಾಮಚಂದ್ರಪ್ಪ ದರೋಜಿ ಸ್ಮರಣಾರ್ಥ ದತ್ತಿ ಉಪನ್ಯಾಸ ನಡೆಯಲಿದೆ. ಇದೇ ವೇದಿಕೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಮಾಡಿದ ಐವ್ವರು ಸಾಧಕರನ್ನು ಸನ್ಮಾನಿಸಲಾಗುತ್ತಿದೆ.
ದತ್ತಿ ದಾನಿಗಳಾದ ಸುಬ್ರಹ್ಮಣ ದರೋಜಿ, ಸಂಗಮೇಶ ಕೋಟೆ, ಕಸಾಪದ ಅಧ್ಯಕ್ಷ ರುದ್ರೇಶ ರ‍್ಹಾಳ, ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ ಅಂಗಡಿ, ವೆಂಕಟಗಿರಿ ಹೋಬಳಿ ಘಟಕದ ಅಧ್ಯಕ್ಷ ನಿಂಗಪ್ಪ ಗುಂಡೂರು ಅತಿಥಿಗಳಾಗಿ ಭಾಗಿಯಾಗಲಿದ್ದಾರೆ.
ವಚನ ಸಾಹಿತ್ಯದಲ್ಲಿ ಸ್ತಿç ಸಂವೇದನೆ ಎಂಬ ವಿಷಯದ ಮೇಲೆ ಹಿರಿಯ ಸಾಹಿತಿ ಅರಳಿ ನಾಗಭೂಷಣ, ಶೋಷಣೆ ರಹಿತ ಸಮಾಜ ನಿರ್ಮಾಣದಲ್ಲಿ ಬಸವಣ್ಣನ ಪಾತ್ರ ಎಂಬ ವಿಷಯದ ಬಗ್ಗೆ ಹಿರಿಯ ಉಪನ್ಯಾಸಕ ಎ.ಕೆ. ಮಹೇಶ ಕುಮಾರ ಹಾಗೂ ಜಾನಪದ ಸಾಹಿತ್ಯದ ಬಗ್ಗೆ ಜಾನಪದ ಹಾಡುಗಾರ ಸುಖಮುನಿ ಉಪ್ಯನಾಸ ನೀಡಲಿದ್ದಾರೆ.
Comments are closed.