ಪ್ರತಿಯೊಬ್ಬರು ಹಕ್ಕುಗಳ ಬಗ್ಗೆ ತಿಳಿಯಬೇಕು ಮತ್ತು ನೀರನ್ನು ಉಳಿಸಿ ಬೇಕು
ಯಲಬುರ್ಗಾ,:ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನ ಮತ್ತು ವಿಶ್ವ ಜಲ ದಿನಾಚರಣೆಯು ಸಮಾಜದ ಜಾಗೃತಿ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ಅತ್ಯಂತ ಮಹತ್ವದ ದಿನಗಳಾಗಿವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಂಗಸ್ವಾಮಿ ಜೆ ಹೇಳಿದರು.

ಪಟ್ಟಣದ ತಹಸಿಲ್ದಾರ್ ಕಾರ್ಯಾಲಯದ ಕಂದಾಯ ಭವನದಲ್ಲಿ ಗುರುವಾರ ನಡೆದ ವಿಶ್ವ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಹಾಗೂ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ಸಿಹಿ ನೀರಿನ ಮಹತ್ವವನ್ನು ಎತ್ತಿಹಿಡಿಯುವುದು ಮತ್ತು ನೀರಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಯನ್ನು ಪ್ರತಿಪಾದಿಸುವುದು ಆಗಿದೆ. ಪ್ರತಿಯೊಬ್ಬರು ಪ್ರತಿ ಹನಿ ನೀರು ಉಳಿಸಿಬೇಕು.ಗ್ರಾಹಕರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಶೋಷಣೆಯ ವಿರುದ್ಧ ಹೋರಾಡಲು ಪ್ರೇರೇಪಿಸುವುದು.ಖರೀದಿಸುವಾಗ ಯಾವುದೇ ಅನ್ಯಾಯವಾದರೆ ಗ್ರಾಹಕಕರು ದೂರು ದಾಖಲಿಸಲು ಮುಂದಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ಸಂಜು ಕುಮಾರ ಪಚಪುರ ಮಾತನಾಡಿ,ಗ್ರಾಹಕರಿಗೆ ಮುಖ್ಯವಾಗಿ ಸುರಕ್ಷತಾ ಹಕ್ಕು, ಮಾಹಿತಿ ಪಡೆಯುವ ಹಕ್ಕು, ಆಯ್ಕೆ ಮಾಡುವ ಹಕ್ಕು, ಕೇಳಿಸಿಕೊಳ್ಳುವ ಹಕ್ಕು, ಪರಿಹಾರ ಪಡೆಯುವ ಹಕ್ಕು ಮತ್ತು ಗ್ರಾಹಕ ಶಿಕ್ಷಣ ಹಕ್ಕು ಪ್ರಮುಖವಾಗಿವೆ. ಇವುಗಳ ಮೂಲಕ ಗ್ರಾಹಕರು ಮೋಸ, ಕಳಪೆ ಗುಣಮಟ್ಟದ ವಸ್ತುಗಳು ಹಾಗೂ ಸೇವೆಗಳ ವಿರುದ್ಧ ಕಾನೂನುಬದ್ಧವಾಗಿ ಹೋರಾಡಲು ಅವಕಾಶ ದೊರಕುತ್ತದೆ. ಈ ಕಾಯ್ದೆಯ ಪ್ರಕಾರ, ಗ್ರಾಹಕರ ದೂರುಗಳನ್ನು ಶೀಘ್ರವಾಗಿ ಪರಿಹರಿಸಲು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಗ್ರಾಹಕ ವಿವಾದ ಪರಿಹಾರ ಆಯೋಗಗಳನ್ನು ಸ್ಥಾಪಿಸಲಾಗಿದೆ.ಪ್ರತಿಯೊಬ್ಬರು ನೀರಿನ ಬಳಕೆಯ ಬಗ್ಗೆ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ದೇಶಿಸಿ ತಹಸಿಲ್ದಾರ್ ಪ್ರಕಾಶ್ ನಾಶಿ ಮಾತನಾಡಿ,ಇತ್ತೀಚೆಗೆ ಆನ್‌ಲೈನ್ ವ್ಯಾಪಾರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಗ್ರಾಹಕರಿಗೆ ಪಾರದರ್ಶಕ ಮಾಹಿತಿ ನೀಡುವುದು ಕಡ್ಡಾಯವಾಗಿದೆ. ಸರ್ಕಾರವು ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಜನರು ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳುವಂತೆ ಕರೆ ನೀಡಿದರು.. ಗ್ರಾಹಕರು ಜಾಗೃತರಾಗಿದ್ದು, ಯಾವುದೇ ಅನ್ಯಾಯ ಎದುರಾದಲ್ಲಿ ತಕ್ಷಣ ದೂರು ಸಲ್ಲಿಸುವುದು ಹಾಗೂ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಗೀತಾ ಅಸೂಟಿ, ವಕೀಲರ ಸಂಘದ ಉಪಾಧ್ಯಕ್ಷ ಎಂ.ಎಸ್ ನಾಯ್ಕರ್, ಅಪರ ಸರ್ಕಾರಿ ವಕೀಲರಾದ ಮಲ್ಲನಗೌಡ ಪಾಟೀಲ, ಹಸನಸಾಬ್ ನದಾಫ್, ಆಹಾರ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನಯ್ಯ ಶಾಸ್ತ್ರಿಮಠ, ಹನುಮಗೌಡ, ಕೋರ್ಟ್ ಸಿಬ್ಬಂದಿಗಳ ರಾಘವೇಂದ್ರ ಕೋಳಿಹಾಳ್, ವಿನಾಯಕ್ ಪಾಪಳೆ ಸೇರಿದಂತೆ ಇತರರು ಇದ್ದರು.
Comments are closed.