ದೇವರ ಸ್ಮರಣೆಯಿಂದ ಮನಸ್ಸಿನ ಕಲ್ಮಶ ಕಳೆದುಕೊಳ್ಳಬಹುದು – ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ

Get real time updates directly on you device, subscribe now.

ಮುಂಡರಗಿ :  ಪುಣ್ಯ ಕ್ಷೇತ್ರಗಳಿಗೆ ಯಾತ್ರೆ ಮೂಲಕ ತೆರಳಿ ಅಲ್ಲಿ ಭಗವಂತನ ದರ್ಶನಾಶೀರ್ವಾದ ಪಡೆದು ಜೀವನದಲ್ಲಿ ತಿಳಿದು, ತಿಳಿಯದೇ ಮಾಡಿದ ಪಾಪ ಕಳೆದುಕೊಳ್ಳಬೇಕು. ದೇವರ ಸ್ಮರಣೆಯಿಂದ ಮನಸ್ಸಿನ ಕಲ್ಮಶ ಕಳೆದುಕೊಳ್ಳಬಹುದು. ತೀರ್ಥಯಾತ್ರೆ ಧರ್ಮ ಸಾಧನೆಯಾಗಬೇಕು ಎಂದು ಮೈನಹಳ್ಳಿಯ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಹೇಳಿದರು.

ಮೈನಹಳ್ಳಿ ಗ್ರಾಮದ ರೇಣುಕಾಚಾರ್ಯ  ದೇವಸ್ಥಾನದಲ್ಲಿ ಹಿಂದೂರಾಷ್ಟç ಸಂಕಲ್ಪ ಸಮಿತಿಯ ಕಾರ್ಯಕರ್ತರು ಶ್ರೀ ಸ್ವಾಮಿ ವಿವೇಕಾನಂದ ಜಯಂತಿ ನಿಮಿತ್ತ ಮುಂಡರಗಿ ಪಟ್ಟಣದಿಂದ ಅಂಜನಾದ್ರಿ ಬೆಟ್ಟಕ್ಕೆ ಹಮ್ಮಿಕೊಂಡಿದ್ದ ೩ನೇ ವರ್ಷದ ಪಾದಯಾತ್ರೆಗೆ ಪತ್ರಿಗಿಡ ನೆಟ್ಟು ಚಾಲನೆ ನೀಡಿ ಅವರು ಮಾತನಾಡಿದರು.

ಅಂಜನಾದ್ರಿ ಬೆಟ್ಟಕ್ಕೆ ಪಾದಯಾತ್ರೆ ತೆರಳುವುದು ಸುರಕ್ಷತೆ ಬಗ್ಗೆ ಕಾಳಜಿ ವಹಿಸಬೇಕು. ಜ.೨೨ರಂದು ಶ್ರೀರಾಮಮಂದಿರದಲ್ಲಿ ರಾಮಮೂರ್ತಿ ಪ್ರತಿಷ್ಠಾಪನೆ ದಿನವಾಗಿದೆ. ಪಾದಯಾತ್ರೆಯಿಂದ ದೇಶಕ್ಕೆ ಒಳ್ಳೆಯದಾಗಲಿ. ಬರುವ ದಿನದಲ್ಲಿ ಕುಟುಂಬದವರೆಲ್ಲ ಸೇರಿ ಯಾತ್ರಾ ಕಾರ್ಯ ಮಾಡುವಂತಾಗಬೇಕು ಎಂದು ತಿಳಿಸಿದರು.

ಹಿAದೂರಾಷ್ಟç ಸಂಕಲ್ಪ ಸಮಿತಿ ಸಂಚಾಲಕ ದೇವಪ್ಪ ಇಟಗಿ ಮಾತನಾಡಿ, ೩ವರ್ಷದಿಂದ ಅಂಜನಾದ್ರಿ ಬೆಟ್ಟಕ್ಕೆ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಪಾದಯಾತ್ರೆ ಜೊತೆಗೆ ಅಲ್ಲಲ್ಲಿ ಜನ ಜಾಗೃತಿ ಮತ್ತು ಪರಿಸರ ಕಾಳಜಿ ದೃಷ್ಠಿಯಿಂದ ಪತ್ರಿಗಿಡ ನೆಡಲಾಗುವುದು. ಅಯೋಧ್ಯೆ ರಾಮಮಂದಿರದಲ್ಲಿ ರಾಮಮೂರ್ತಿ ಪ್ರತಿಷ್ಠಾನೆಗೊಂಡ ಹಿನ್ನೆಲೆ ಮತ್ತು ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ ಪಾದಯಾತ್ರೆ ನಡೆಸಿಕೊಂಡು ಬರಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪ್ರಮುಖರಾದ ನಾಗರಾಜ ಮುರಡಿ,   ಕುರುವತ್ತೆಪ್ಪ ಅರಿಷಿನದ, ಉಮೇಶ ತೆಂಗಿನಕಾಯಿ, ಚಂದ್ರಹಾಸ ಬಂಡೆಣ್ಣವರ, ಚನ್ನಪ್ಪ ಹೂಗಾರ, ಕನಕಪ್ಪ ಕಾತರಕಿ, ಹಾಲಪ್ಪ ಜೋಳದ, ರಾಮಣ್ಣ ಉಳ್ಳಾಗಡ್ಡಿ, ಹುಚ್ಚಿರಪ್ಪ ಮನ್ನೂರ,  ರಾಮಣ್ಣ ದಾಸಕನಕಪ್ಪನವರ, ರಾಮಣ್ಣ ಮಾದಣ್ಣವರ, ಪ್ರಕಾಶ ಲೇಂಡ್ವೆ, ಜಗದೀಶ ಸಾವಂತ, ರಾಜಪ್ಲ ಕುರಿ, ಮಾರುತಿ ಭಜಂತ್ರಿ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!