ಅಗ್ನಿವೀರ ಬಸವರಾಜ್ ಗೋನಾಳ್‌ಗೆ ಸನ್ಮಾನ
.
ಕೊಪ್ಪಳ,೧೮. ಮಾದಿನೂರಿನ ಯುವಕ ಬಸವರೆಡ್ಡಿ ಎಂ. ಗೋನಾಳ್ ಇವರು ಅಗ್ನಿವೀರ ನೇಮಕಾತಿ ಪಡೆದುಕೊಂಡಿದ್ದು ಇತ್ತೀಚಿಗೆ ಬೆಂಗಳೂರಿನಲ್ಲಿ ತರಬೇತಿಯನ್ನು ಪಡೆದು ಈಗ ಭಾರತೀಯ ಸೇನೆಯಲ್ಲಿ ಸೇವೆಗಾಗಿ ಭೂಪಾಲಗೆ ತೆರಳಲಿದ್ದು ಅವರನ್ನು ಗ್ರಾಮದ ಹಿರಿಯರು ಯುವಕರು ಸೇರಿಕೊಂಡು ಸನ್ಮಾನಿಸಿ ಬಿಳ್ಕೊಟ್ಟರು,
ಈ ಸಂದರ್ಭದಲ್ಲಿ ಅಪ್ಪಣ್ಣ ಆಚಾರ್ ಪೂಜಾರ್ ರವರು ಮಾತನಾಡಿ, ಬಸವರಾಜ್ ಗೋನಾಳ ಅವರು ದೇಶ ಸೇವೆಗಾಗಿ ಹೊರಡಲಿದ್ದು ಅವರ ದೇಶ ಸೇವೆಯು ಸಾರ್ಥಕ ಮತ್ತು ಅತ್ಯಮೂಲ್ಯವಾದದ್ದು ಅದಕ್ಕೆ ಅವರಿಗೆ ಭಗವಂತನು ಮತ್ತು ಭಾರತ ಮಾತೆಯ ಶ್ರೀರಕ್ಷೆ ಅವರಿಗೆ ಇರಲಿ ಎಂದು ಆಶಿಸಿ ಶುಭ ಕೋರಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಸವರಾಜ್‌ರೆಡ್ಡಿ ಗೋನಾಳ್ `ಗ್ರಾಮದ ಜನರ ಆಶೀರ್ವಾದ ಹಾರೈಕೆ ಸನ್ಮಾನಕ್ಕೆ ನಾನೆಂದಿಗೂ ಚಿರಋಣಿ ನಿಮ್ಮ ಹಾರೈಕೆ ಸದಾ ನನ್ನ ಮೇಲೆ ಇರಲಿ, ದೇಶ ಸೇವೆಗಾಗಿ ನಾನು ಹಗಲಿರಳು ಶ್ರಮಿಸುತ್ತೇನೆ ಹೆತ್ತ ತಂದೆ ತಾಯಿಗೆ ಜನ್ಮಕೊಟ್ಟ ಭೂಮಿ ತಾಯಿಗೆ ಸೇವೆಯನ್ನು ಮಾಡುವ ಸೌಭಾಗ್ಯ ನನಗೆ ಒದಗಿ ಬಂದಿದ್ದು ಒಳ್ಳೆಯ ಹೆಸರು ಮತ್ತು ಕೀರ್ತಿಯನ್ನು ಮಾದಿನೂರು ಗ್ರಾಮಕ್ಕೆ ತರುತ್ತೇನೆ’. ಎಂದರು.
ಗ್ರಾಮದ ಯುವಕರು ಭಾರತ್ ಮಾತಾ ಕಿ ಜೈ ಎಂಬ ಜೈಕಾರವನ್ನು ಹೇಳುತ್ತಾ ಬಸವರಾಜ್ ರೆಡ್ಡಿ ಗೋನಾಳ್ ಅವರನ್ನು ಅಭಿಮಾನದಿಂದ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಮಾದಿನೂರು ಗ್ರಾಮದ ಗಣ್ಯರಾದ ಅಪ್ಪಣ್ಣ ಆಚಾರ ಪೂಜಾರ. ಸಂತೋಷ್ ಪಾಟೀಲ್, ಮುತ್ತಣ್ಣ ತಳಕಲ, ಹನುಮರೆಡ್ಡಿ ಆಡೂರು, ಮಹಾಂತೇಶ ಗೋನಾಳ, ಬಸವರಾಜ ಗೋನಾಳ, ನಾಗರಾಜ್ ಬೃಂಗಿ, ಭರತೇಶ ತುಂಬಳ, ಹರ್ಷ ಪಾಟೀಲ್, ಶಿವು ನಂದಾಪುರು, ರಾಜು ಪಾಟೀಲ್, ಮಂಜುನಾಥ್ ಪಾಟೀಲ್, ಶಿವು ಬೃಂಗಿ, ಸಾಗರ ತುಂಬಳ, ನಾಗರೆಡ್ಡಿ ನರಸಿಮ್ಮನವರ, ಮನು ಶಿವಶಿಂಪರ, ಅಯ್ಯಪ್ಪ ಗೋನಾಳ ಇತರರು ಉಪಸ್ಥಿತರಿದ್ದರು.