ಚೆನ್ನಮ್ಮನವರ ನಿಧನ ತುಂಬಲಾರದ ನಷ್ಟ : ಭೂಮರಡ್ಡಿ 

0

Get real time updates directly on you device, subscribe now.

ಕೊಪ್ಪಳ: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಧರ್ಮಪತ್ನಿ ಹಾಗೂ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ತಾಯಿಯವರಾದ ಶ್ರೀಮತಿ ಚೆನ್ನಮ್ಮ ದೇವೇಗೌಡ ಅವರ ಅಗಲಿಕೆ ತುಂಬಲಾರದ ನಷ್ಟ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ್ ಭೂಮರಡ್ಡಿ  ಕಂಬನಿ ಮಿಡಿದಿದ್ದಾರೆ.

ಚೆನ್ನಮ್ಮ ಅವರು ಆದರ್ಶ ಗೃಹಿಣಿಯಾಗಿ, ಸರಳತೆಯ ಸಾಕಾರ ಮೂರ್ತಿಯಾಗಿದ್ದರು. ದೇವೇಗೌಡರ ಕುಟುಂಬ ಮಾತ್ರವಲ್ಲ, ನಾಡಿಗೆ ಒಂದು ದೊಡ್ಡ ಶಕ್ತಿಯಾಗಿದ್ದರು. ದೇಶದ ಅತ್ಯುನ್ನತ ರಾಜಕೀಯ ಕುಟುಂಬದ ಭಾಗವಾಗಿದ್ದರೂ ಅವರ ನಮ್ರತೆ ಮತ್ತು ಮಮತಾಮಯಿ, ಮಾತೃಹೃದಯದ ವ್ಯಕ್ತಿತ್ವ ಸರ್ವರಿಗೂ ಮಾದರಿಯಾಗಿತ್ತು.

ಚೆನ್ನಮ್ಮ ಅವರ ಅಗಲಿಕೆಯಿಂದ  ದೇವೇಗೌಡರ ಕುಟುಂಬ ಹಾಗೂ ಅಭಿಮಾನಿ ಬಳಗಕ್ಕೆ ಮಹಿಳಾ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ಭಗವಂತ ಮೃತರ ಆತ್ಮಕ್ಕೆ ಸದ್ಗತಿ ಕರುಣಿಸಲಿ. ಗೌರವಾನ್ವಿತ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು, ಮತ್ತವರ ಪುತ್ರರೂ ಆಗಿರುವ ಕೆಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಸೇರಿದಂತೆ ಅವರ ಒಟ್ಟು ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಚೆನ್ನಮ್ಮನವರ ನಿಧನ: ಸಿವಿಸಿ ಸಂತಾಪ

ಕೊಪ್ಪಳ: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಪತ್ನಿ ಹಾಗೂ ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಅವರ ಮಾತ್ರೋಶ್ರೀ ಚೆನ್ನಮ್ಮ ದೇವೇಗೌಡ ಅವರ ನಿಧನಕ್ಕೆ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಚೆನ್ನಮ್ಮನವರ ಒಡನಾಟದ ಮಾತೃ ಹೃದಯವನ್ನು ಅನುಭವಿಸಿದವರಲ್ಲಿ ನಾನೂ ಒಬ್ಬ. ಗೃಹಣಿಯಾಗಿ, ಪತ್ನಿಯಾಗಿ ಹಾಗೂ ತಾಯಿಯಾಗಿ ಅವರು ಭಾರತೀಯ ನಾರಿ ಪರಂಪರೆಯ ಸಂಕೇತದಂತೆ ಇದ್ದರು. ಅಪಾರ ದೈವಿ ಭಕ್ತರಾಗಿದ್ದ ಅವರು ಅತಿಥಿ ಸತ್ಕಾರರ ಪರಂಪರೆಗೆ ಅರ್ಥ ತುಂಬಿದ್ದರು. ಸುಮಾರು 25 ವರ್ಷಗಳ ಹಿಂದೆ ಅವರ ಮೇಲೆ ನಡೆದ ತೀವ್ರ ದಾಳಿಯಿಂದ ಅವರು ಬದುಕಿ ಮತ್ತೆ ಅರ್ಥಪೂರ್ಣ ಜೀವನ ಸಾಗಿಸಿದ್ದು ಅವರು ನಂಬಿದ್ದ ದೈವಬಲ ಸರಳತೆ ಮತ್ತು ಮೌಲ್ಯಗಳಿಂದ. ಅವರು ಕನ್ನಡ ನಾಡಿನ ಒಂದು ಕಾಲಘಟ್ಟದ ಪ್ರತಿನಿಧಿಯಂತೆ ಬದುಕಿದರು. ಅವರ ಅಗಲಿಕೆ
ತೀವ್ರ ದುಃಖ ತರಿಸಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Leave A Reply

Your email address will not be published.

error: Content is protected !!