ಪೈರಸಿ ತಡೆಗಟ್ಟಿ ಕನ್ನಡ ಚಿತ್ರರಂಗ ಬೆಳಸಿ-ಡಾ.ಮಹಾಂತೇಶ ಮಲ್ಲನಗೌಡರ

Get real time updates directly on you device, subscribe now.

Zaid Khan’s cult film has a grand opening

ಜೈದ್ ಖಾನ್ ಕಲ್ಟ್ ಚಲನಚಿತ್ರ ಅದ್ಧೂರಿ ಪ್ರಾರಂಭ

 

ಕೊಪ್ಪಳ: ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಚಿತ್ರಗಳಿಗೆ ಪೈರಸಿಯ ಕಾಟ ದೊಡ್ಡದಾಗಿ ಕಾಡುತ್ತಿದೆ. ಅದನ್ನು ತಡೆಗಟ್ಟುವ ಅಗತ್ಯತೆ ಇದೆ ಎಂದು ಹಿರಿಯ ಸಾಹಿತಿ  ಗೀತರಚನೆಕಾರ ಡಾ.ಮಹಾಂತೇಶ ಮಲ್ಲನಗೌಡರ ಹೇಳಿದರು

ಅವರು ಇಲ್ಲಿನ ಶಾರದಾ ಚಿತ್ರಮಂದಿರದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಜೈದ್ ಖಾನ್ ನಟನೆಯ ಕಲ್ಟ್ ಚಿತ್ರ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಒಂದು ಕಾಲಕ್ಕೆ ಕೊಪ್ಪಳದ ಖಾದ್ರಿ ಕುಟುಂಬದವರು ಚಲನಚಿತ್ರ ವಿತರಣೆಯಲ್ಲಿ  ಇಡೀ ರಾಜ್ಯದಲ್ಲಿಯೇ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ಚಿತ್ರದುರ್ಗದ ರೆಹಮಾನ ಸೇರಿದಂತೆ ಇತರರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಕಲ್ಟ್ ಚಿತ್ರ ಅಭೂತ ಪೂರ್ವ ಯಶಸ್ವಿ ಪಡೆಯಲಿ ಎಂದು ಹಾರೈಸಿದರು.

 


ಕಲ್ಟ್ ಚಿತ್ರವನ್ನು ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಜಾಂಜ್ ಮೇಳದೊಂದಿಗೆ ಆರಂಭ ಮಾಡಲಾಯಿತು. ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ,  , ಚಿತ್ರ ನಿರ್ದೇಶಕ ಬಸವರಾಜ ಕೊಪ್ಪಳ, ಮುಖಂಡರಾದ ನಾಗರಾಜ ಮೇಟಿ ಇತರರು ಇದ್ದರು. ನಂತರ ಮಾಜಿ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಅವರ ನೇತೃತ್ವದಲ್ಲಿ ನೂರಾರು ಜನರು ಚಲನಚಿತ್ರ ವೀಕ್ಷಿಸಿದರು. ಕಲ್ಟ್ ಚಿತ್ರ ಯುವ ನಟ ಜೈದ್ ಖಾನ್ ಅವರ ಎರಡನೇ ಚಿತ್ರವಾಗಿದ್ದು ಚಿತ್ರದಲ್ಲಿ ಖ್ಯಾತ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ವಿಶೇಷ ಪಾತ್ರದಲ್ಲಿ ನಟಿಸಿದ್ದು, ಮಲೈಕಾ ನಾಯಕಿಯಾಗಿ ನಟಿಸಿದ್ದಾರೆ. ಜನೇವರಿ ೨೩ ರಂದು ರಾಜ್ಯಾದ್ಯಂತ ಪ್ರದರ್ಶನ ಕಂಡಿತು.

Get real time updates directly on you device, subscribe now.

Comments are closed.

error: Content is protected !!