ಶಾಂತರಸ -೧೦೦  ಶತಮಾನೋತ್ಸವ ಆಚರಣೆ

0

Get real time updates directly on you device, subscribe now.

ಕೊಪ್ಪಳ : ನಾಡಿನ ಖ್ಯಾತ ಕವಿ,  ಬರಹಗಾರ, ಕನ್ನಡದ ಮೊಟ್ಟ  ಮೊದಲ ಗಝಲ್ ಕವಿ, ನಾಡಿನ ಸಾಕ್ಷಿ ಪ್ರಜ್ಞೆ ಶಾಂತರಸ ಅವರ 100ನೇ ಜನ್ಮದಿನದ ನಿಮಿತ್ತ ಶಾಂತರಸ 100-  ಶತಮಾನೋತ್ಸವ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕವಿ ಸಮೂಹ ಕೊಪ್ಪಳ , ಬಹುತ್ವ ಬಳಗ ಕೊಪ್ಪಳ,  ಸಂಸ ಥಿಯೇಟರ್ ಬೆಂಗಳೂರು ಹಾಗೂ ಕನ್ನಡ ವಿಭಾಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್  ಕೊಪ್ಪಳ ಇವರ ಸಹಯೋಗದಲ್ಲಿ ದಿ. 7-5-2025 ರಂದು ಸೋಮವಾರ ಬೆಳಿಗ್ಗೆ ಹತ್ತು ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು   ಡಾ. ಸುರೇಶ ಜಿ. ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೊಪ್ಪಳ ಇವರು  ನೆರವೇರಿಸುವರು.  ಶಾಂತರಸರ ಬದುಕು ಬರಹ  ಕುರಿತು  ಬರಹಗಾರ  ಅಕ್ಬರ್ ಕಾಲಿ ಮಿರ್ಚಿ  ಹಾಗೂ   ಗಾಯತ್ರಿ ಭಾವಿಕಟ್ಟಿ   ಮುಖ್ಯಸ್ಥರು, ಕನ್ನಡ ವಿಭಾಗ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಉಪನ್ಯಾಸ ನೀಡಲಿದ್ದಾರೆ.
ಡಾ.ಭಾಗ್ಯಜ್ಯೋತಿ  ಸಹ ಪ್ರಾಧ್ಯಾಪಕರು , ಹಾಗೂ ಗ್ಯಾನೇಶ್ ಹ್ಯಾಟಿ  ಅಧ್ಯಕ್ಷರು ಬ್ಯಾಡ್ಮಿಂಟನ್ ಅಸೋಸಿಯೇಷನ್  ವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದು ಕಾಲೇಜಿನ ವಿದ್ಯಾರ್ಥಿಗಳಿಂದ  ಗಜಲ್ ವಾಚನ ನಡೆಯಲಿದೆ.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಡಿ.ಎಚ್. ನಾಯ್ಕ ಪ್ರಾಂಶುಪಾಲರು ವಹಿಸಿಕೊಳ್ಳಲಿದ್ದಾರೆ.  ಈ ಕಾರ್ಯಕ್ರಮದಲ್ಲಿ ಆಸಕ್ತರು ಭಾಗವಹಿಸಲು ಸಂಘಟಕ ಸಿರಾಜ್ ಬಿಸರಳ್ಳಿ  ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ : 98802574888, 99458 73626, 9448183708 ಸಂಪರ್ಕಿಸಬಹುದು.

Get real time updates directly on you device, subscribe now.

Leave A Reply

Your email address will not be published.

error: Content is protected !!