ಉದ್ದೇಶಿತ ಆಶಯಗಳೊಂದಿಗೆ ಸಂಸ್ಥೆಯು ಉತ್ತರೋತ್ತರವಾಗಿ ಬೆಳೆಯಲಿ : ಶರಣಪ್ಪ ಬಾಚಲಾಪುರ

ಕೊಪ್ಪಳ: ಸರಕಾರದ ಯೋಜನೆಗಳ ಜೊತೆಜೊತೆಗೆ ಸಂಘ ಸಂಸ್ಥೆಯ ಕಾರ್ಯವೂ ಬಹುಮುಖ್ಯವಾಗಿದೆ. ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಶ್ರೀವಾಣಿ ಶಿಕ್ಷಣ, ಸಂಗೀತ, ಸಾಂಸ್ಕೃತಿಕ, ಕಲಾ ಹಾಗೂ ಗ್ರಾಮೀಣಾಭಿವೃದ್ಧಿ ಕಲ್ಯಾಣ ಸಂಸ್ಥೆಯೂ ಸಹ ಉದ್ದೇಶಿತ ಆಶಯಗಳೊಂದಿಗೆ ಸಂಸ್ಥೆಯು ಉತ್ತರೋತ್ತರವಾಗಿ ಬೆಳೆಯಲಿ ಎಂದು ಹಿರಿಯ ಪತ್ರಕರ್ತ ಶರಣಪ್ಪ ಬಾಚಲಾಪುರ ಆಶಿಸಿದರು.
ಕೊಪ್ಪಳ ತಾಲೂಕಿನ ಯತ್ನಟ್ಟಿ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದ ಶ್ರೀವಾಣಿ ಶಿಕ್ಷಣ, ಸಂಗೀತ, ಸಾಂಸ್ಕೃತಿಕ, ಕಲಾ ಹಾಗೂ ಗ್ರಾಮೀಣಾಭಿವೃದ್ಧಿ ಕಲ್ಯಾಣ ಸಂಸ್ಥೆಯ ಉದ್ಘಾಟನಾ ಸರಳ ಕಾರ್ಯಕ್ರಮ ದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಗರ ಪ್ರದೇಶಗಳಲ್ಲಿ ಇರುವ ಸೌಲಭ್ಯಗಳನ್ನು, ಸಂಪನ್ಮೂಲಗಳನ್ನು ಬಳಸಿಕೊಂಡು ಸಂಸ್ಥೆಗಳು ಬೆಳೆದಂತೆ ಗ್ರಾಮೀಣ ಪ್ರದೇಶದಲ್ಲಿ ಸಂಘ ಸಂಸ್ಥೆಗಳು ಅಭಿವೃದ್ಧಿ ಹೊಂದುವುದು ಅಷ್ಟು ಸುಲಭವಲ್ಲ. ಸಂಘದ ಸದಸ್ಯರು, ಪದಾಧಿಕಾರಿಗಳ ಪರಿಶ್ರಮ ಸಾಕಷ್ಟು ಬೇಕಾಗುತ್ತದೆ. ಗ್ರಾಮೀಣ ಪ್ರದೇಶವಾಗಿರುವ ಯತ್ನಟ್ಟಿ ಗ್ರಾಮದಲ್ಲಿ ಈ ಸಂಸ್ಥೆಯನ್ನು ಹುಟ್ಟು ಹಾಕಲಾಗಿದೆ. ಸಂಸ್ಥೆಯ ಧ್ಯೇಯೋಧದೇಶಗಳು ಅತ್ಯಂತ ಉತ್ತಮವಾಗಿದ್ದು ಶಿಕ್ಷಣ, ಸಂಗೀತ ಮಹತ್ವಾಕಾಂಕ್ಷೆಯನ್ನು ಹೊಂದಲಾಗಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಜ್ಞಾನ ಪಸರಿಸುವ ಉದ್ದೇಶ ನಿಜಕ್ಕೂ ಮೆಚ್ಚುವಂತಹದ್ದು. ಈ ಉದ್ದೇಶ ಈಡೇರಿಕೆಗಾಗಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಸಾಕಷ್ಟು ಶ್ರಮಿಸಬೇಕು. ಅಂದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ. ಉದ್ದೇಶಿತ ಆಶಯಗಳೊಂದಿಗೆ ಸಂಸ್ಥೆಯು ಉತ್ತರೋತ್ತರವಾಗಿ ಬೆಳೆಯಲಿ ಎಂದು ಅವರು ಹಾರೈಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪದ್ಮಾ ಬಸವರಾಜ ಅವರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮಹಿಳೆಯ ಸಬಲೀಕರಕಣ ಸೇರಿದಂತೆ ಸಾಮಾಜಿಕ, ಅರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವವರ ಪರವಾಗಿ ಸಂಸ್ಥೆಯು ಕೆಲಸ ಮಾಡಲಿದೆ. ಗ್ರಾಮೀಣ ಭಾಗದಲ್ಲಿನ ಮಕ್ಕಳಿಗೆ ಗುಣಮಟ್ಟದ ಹಾಗೂ ಸಂಸ್ಕಾರಯುತ ಶಿಕ್ಷಣ ನೀಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ಇರುವ ಸಂಪನ್ಮೂಲದ ಇತಿಮಿತಿಯಲ್ಲಿಯೇ ಮಕ್ಕಳಿಗೆ ಸಂಗೀತದ ಜ್ಞಾನ ಹಾಗೂ ಶಿಕ್ಷಣವನ್ನು ನೀಡುವುದು ನಮ್ಮ ಧ್ಯೇಯವಾಗಿದೆ. ನಮ್ಮ ಈ ಆಶಯಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ಶ್ರೀವಾಣಿ ಶಿಕ್ಷಣ, ಸಂಗೀತ, ಸಾಂಸ್ಕೃತಿಕ, ಕಲಾ ಹಾಗೂ ಗ್ರಾಮೀಣಾಭಿವೃದ್ಧಿ ಕಲ್ಯಾಣ ಸಂಸ್ಥೆಯ ಅಧ್ಯಕ್ಷೆ ಶ್ರೀದೇವಿ ಪತ್ತಾರ, ಸಂಸ್ಥೆಯ ಹಿತೈಷಿ ಪ್ರಶಾಂತ ಮಂಗಳೂರು ಮಾತನಾಡಿದರು. ಸಂಸ್ಥೆಯ ಉಪಾಧ್ಯಕ್ಷ ಚಂದ್ರಪ್ಪ ಬಡಿಗೇರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಜನಾ ಕಾರ್ಯಕ್ರಮ ನಿರೂಪಿಸಿದರು.
Comments are closed.