ಗೊಂಡಬಾಳ ಶ್ರೀ ಬನಶಂಕರಿ ದೇವಿ ಜಾತ್ರಾ ಮಹೋತ್ಸವ: ಶೃದ್ಧಾ ಭಕ್ತಿಯಿಂದ ನಡೆದ ದೇವಿಯ ಮಹಾ ರಥೋತ್ಸವ
ಪ್ರಭು ಜಾಹಗೀರದಾರ
ಕೊಪ್ಪಳ.ಫೆ.12: ತಾಲೂಕಿನ ಗೊಂಡಬಾಳ ಗ್ರಾಮದ ಶ್ರೀ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಸಂಜೆ ಶೃದ್ಧಾ ಭಕ್ತಿಯಿಂದ ವಿಜೃಂಭಣೆಯಿಂದ ದೇವಿಯ ರಥೋತ್ಸವ ಜರುಗಿತು.
ಬೆಳಿಗ್ಗೆ ಶ್ರೀ ದೇವಿಯ ಸನ್ನಿಧಾನಲ್ಲಿ ಹೋಮ ಹವನಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು ನಂತರ ಮುತ್ತೈದೆಯರಿಗೆ ಊಡಿ ತುಂಬುವ ಕಾರ್ಯಕ್ರಮ ಜರುಗಿತು.
ಮಧ್ಯಾಹ್ನ ಕರಿಯಮ್ಮದೇವಿ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಮೈನಳ್ಳಿ ಬಿಕನಳ್ಳಿ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ವೇದಮೂರ್ತಿ ಸಿದ್ದಲಿಂಗಯ್ಯ ಹಿರೇಮಠ, ಅರ್ಚಕರು ವೀರಭದ್ರಪ್ಪ ಇಂದರಗಿ, ಭೋಜಪ್ಪ ಭೂತನ್ನವರ ದಿವ್ಯ ಸಾನಿಧ್ಯವಹಿಸಿದ್ದರು.
ಈ ಸಂದರ್ಭದಲ್ಲಿ ಶ್ರೀಬನಶಂಕರಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಗೀರಿಮಲ್ಲಯ್ಯ ಬಗನಾಳ, ಉಪಾಧ್ಯಕ್ಷ ವಿರೇಶ ಇಂದರಗಿ, ದೇವಪ್ಪ ಬಗನಾಳ, ಗೋಪಾಲಕೃಷ್ಣ ಜನಿವಾರದ, ಶರಣಪ್ಪ ಸಜ್ಜನ,
ಶ್ರೀಶೈಲಪ್ಪ ಹಳ್ಳಿಕೇರಿ, ಮಹೇಶ ಜಾಗೀರದಾರ, ನಾಗರಾಜ ಕೊಳ್ಳಿ, ರಮೇಶ ಕೊಟ್ಟೂರ, ಶಿಕ್ಷಕ ಬಸವನಗೌಡ ಪೋಲಿಸ್ ಪಾಟೀಲ್, ಮಂಜುನಾಥ ಜನಿವಾರದ, ಸಿದ್ದಯ್ಯ ವಸ್ತ್ರದ, ಹೊನ್ನಪ್ಪ ಮೆತಗಲ್, ಪ್ರಧಾನಪ್ಪ ಹಂಡಿ, ಭೀಮಜ್ಜ ಬನ್ನಿಗೋಳ, ಮಂಜುನಾಥ ಬನ್ನಿಗೋಳ, ಈಶಪ್ಪ ಹಲಗೇರಿ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಹಾಗೂ ಗುರು ಹಿರಿಯರು, ಯುವಕರು, ಮಹಿಳೆಯರು ಭಾಗವಹಿಸಿದ್ದರು.
ರಾತ್ರಿ ಶ್ರೀ ಕರಿಯಮ್ಮದೇವಿ ಬಯಲಾಟ ಸಂಘದವರಿಂದ ಶ್ರೀ ದೇವಿ ಮಹಾತ್ಮೆ ಅರ್ಥಾತ್ ಶುಂಭ ನಿಶುಂಥರ ವಧೆ ಬಯಲಾಟ ಪ್ರದರ್ಶನ ನಡೆಯಿತು.
ನಾಳೆ ಫೆ.13 ಗುರುವಾರ ಬೆಳಿಗ್ಗೆ ಮಂಜುನಾಥ ಬನ್ನಿಗೋಳ ದಂಪತಿಗಳಿಂದ ಶ್ರೀ ದೇವಿಗೆ ಶಾಕಾಂಬರಿ ಪೂಜೆ (ತರಕಾರಿ) ಸಂಜೆ 6;00 ಗಂಟೆಗೆ ಕಡುಬಿನ ಕಾಳಗ (ಛಟ್ಟು) ರಾತ್ರಿ 7:00 ಗಂಟೆಗೆ ಬಯಲು ರಂಗ ಮಂದಿರದಲ್ಲಿ ಮಕ್ಕಳ ಕಲಾಕುಂಚ ರಸಮಂಜರಿ ಕಾರ್ಯಕ್ರಮ ನಡೆಯುತ್ತದೆ.
ಕಲಾಕುಂಚ ರಸಮಂಜರಿ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಾಳು ತಂಡದವರಿಗೆ ಪ್ರಥಮ ಬಹುಮಾನ ಸೋಮಶೇಖರಯ್ಯ ಇನಾಮದಾರ, ದ್ವಿತೀಯ ಬಹುಮಾನ ದೇವೇಂದ್ರಪ್ಪ ಬಗನಾಳ, ತೃತೀಯ ಬಹುಮಾನ ಹೊನ್ನಪ್ಪ ಮೆತಗಲ್ ನೀಡುತ್ತಾರೆ.
ಫೆ.14 ಶುಕ್ರವಾರ ಶ್ರೀ ದೇವಿ ಓಕಳಿ ಹಾಗೂ ಅಭಿಷೇಕ ಕಾರ್ಯಕ್ರಮ ಜರುಗುತ್ತದೆ.
Comments are closed.