ದುರಾಡಳಿತದ ವಿರುದ್ಧ ಶೀಘ್ರದಲ್ಲಿ ಜನಾಂದೋಲನ: ಸಿವಿಸಿ

0

Get real time updates directly on you device, subscribe now.

ಕೊಪ್ಪಳ: ಹದಗೆಟ್ಟ ರಸ್ತೆಗಳು ಹಾಗೂ ಅಭಿವೃದ್ಧಿ ಕಡೆಗಿನ ನಿರ್ಲಕ್ಷದ ವಿರುದ್ಧ ಜೆ ಡಿ (ಎಸ್) ಪಕ್ಷ ಕೊಪ್ಪಳದಲ್ಲಿ ಜನಾಂದೋಲನ ಪ್ರಾರಂಭಿಸಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜಾಗಲಿದೆ ಎಂದು ಜೆ ಡಿ (ಎಸ್) ರಾಜ್ಯ ಕೋರ್ ಕಮಿಟಿ ಸದಸ್ಯರಾದ ಸಿ ವಿ ಚಂದ್ರಶೇಖರ್ ಹೇಳಿದರು.
ಅವರು ಮಂಗಳವಾರ ಕೊಪ್ಪಳ ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಕೊಪ್ಪಳ ಜಿಲ್ಲೆಯ ಪಕ್ಷದ ಪ್ರಮುಖರ ಸಭೆಯಲ್ಲಿ ಸದಸ್ಯತ್ವ ನೋಂದಣಿ, ಭೂತ್ ಮಟ್ಟದಲ್ಲಿ ಕಾರ್ಯಕರ್ತರ ಜೋಡಣೆ, ಪಕ್ಷದ ಬಲವರ್ಧನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಕೊಪ್ಪಳದಲ್ಲಿ ಬಾಣಂತಿಯರ ಸಾವು, ಹದಗೆಟ್ಟ ರಸ್ತೆಗಳು, ಧೂಳು ತುಂಬಿದ ವಾತಾವರಣ ಹಾಗೂ ಅಭಿವೃದ್ಧಿಯಲ್ಲಿ ಹಿನ್ನಡೆ ಕುರಿತ ವರದಿಗಳು ದಿನನಿತ್ಯ ಮಾಧ್ಯಮದಲ್ಲಿ ಬಿತ್ತರಗೊಳ್ಳುತ್ತಿವೆ. ದುರಾಡಳಿತ ಹಾಗೂ ಅಭಿವೃದ್ಧಿ ಬಗೆಗಿನ ನಿರ್ಲಕ್ಷದ ವಿರುದ್ಧ ನಾವೆಲ್ಲ ಒಗ್ಗಟ್ಟಿನಿಂದ ಹೋರಾಡಬೇಕಿದೆ. ಈ ನಿಟ್ಟಿನಲ್ಲಿ ಶೀಘ್ರದಲ್ಲಿ ನಾನು ವಿವಿಧ ಹೋಬಳಿಗಳಿಗೆ ಭೇಟಿ ನೀಡಿ, ಪಕ್ಷವನ್ನು ಸಂಘಟಿಸಿ ಜಿಲ್ಲೆಯಾದ್ಯಂತ ವ್ಯವಸ್ಥೆ ವಿರುದ್ಧ ಜನಾಂದೋಲನ ರೂಪಿಸುತ್ತೇನೆ. ಆ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ತ್ವರಿತ ಗತಿಯಲ್ಲಿ ಅನುಷ್ಠಾನಗೊಳಿಸಲು ಒತ್ತಡ ತರುತ್ತೇನೆ,” ಎಂದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ಯಾವ ಕ್ಷಣದಲ್ಲಾದರೂ ನಡೆಯಬಹುದು. ಅದಕ್ಕಾಗಿ ನಾವು ಸಿದ್ಧವಾಗಿರಬೇಕು. ಗ್ರಾಮೀಣ ಪ್ರದೇಶ, ಬೂತ್ ಮಟ್ಟ ಹಾಗೂ ಹೋಬಳಿ ಮಟ್ಟದಲ್ಲಿ ಸದಸ್ಯತ್ವವನ್ನು ವ್ಯಾಪಕವಾಗಿ ಮಾಡಬೇಕು. ಸಂಘಟನೆ ಹಾಗೂ ಸಮಾವೇಶಗಳನ್ನು ನಿರಂತರವಾಗಿ ನಡೆಸಬೇಕು. ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವುದು ಶತಸಿದ್ಧ,” ಎಂದರು.
ನಮ್ಮ ನಾಯಕರಾದ ಎಚ್ ಡಿ ಕುಮಾರಸ್ವಾಮಿ ಅವರು ಮತ್ತೊಮ್ಮೆ ಮುಖ್ಯಮಂತ್ರಿಗಳಾಗುವುದು ಸತ್ಯ. ಈ ನಿಟ್ಟಿನಲ್ಲಿ ಈಗಾಗಲೇ ಪ್ರಯತ್ನಗಳು ನಡೆದಿವೆ. ಇದಕ್ಕಾಗಿ ನಮ್ಮ ಭಾಗದಲ್ಲಿ ಪಕ್ಷ ಇನ್ನೂ ಬಲಗೊಳ್ಳಬೇಕು. ಕೊಪ್ಪಳ ಜಿಲ್ಲೆಯ ವಿವಿಧ ತಾಲೂಕುಗಳಿಂದ ಬೇರೆ ಬೇರೆ ಪಕ್ಷಗಳ ನಾಯಕರು ಪ್ರತಿನಿತ್ಯ ನನ್ನನ್ನು ಸಂಪರ್ಕಿಸಿ ನಮ್ಮ ಪಕ್ಷ ಸೇರುವ ಅಭಿಲಾಷೆ ವ್ಯಕ್ತಪಡಿಸುತ್ತಿದ್ದಾರೆ. ಶೀಘ್ರದಲ್ಲಿ ದೊಡ್ಡ ಸಂಖ್ಯೆಯ ನಾಯಕರು ನಮ್ಮ ಪಕ್ಷ ಸೇರಲಿದ್ದಾರೆ. ಇದು ಪಕ್ಷಕ್ಕೆ ಚೈತನ್ಯ ತುಂಬಲಿದೆ. ಈ ಹಿಂದೆ ಪಕ್ಷದಲ್ಲಿ ಸಕ್ರಿಯವಾಗಿದ್ದ ನಾಯಕರನ್ನು ಹಾಗೂ ಕಾರ್ಯಕರ್ತರನ್ನು ಸಂಪರ್ಕಿಸಿ ಅವರಿಗೆ ವಿವಿಧ ಹೊಣೆಗಾರಿಕೆ ನೀಡಬೇಕು. ಅವರ ಅನುಭವವನ್ನು ಪಕ್ಷದ ಸಂಘಟನೆಗೆ ಬೆಳೆಸಿಕೊಳ್ಳಬೇಕು ಎಂದರು.
ರಾಜ್ಯ ನಾಯಕರು ಸದಸ್ಯತ್ವ ನೊಂದಣಿ ಹಾಗೂ ಚುನಾವಣಾ ಕುರಿತಾಗಿ ಕೆಲವು ಸಲಹೆಗಳನ್ನು ನೀಡಿದ್ದಾರೆ. ಅವುಗಳನ್ನು ಜಿಲ್ಲಾ ಮತ್ತು ತಾಲೂಕ ಮಟ್ಟದಲ್ಲಿ ಕಾರ್ಯಗತಗೊಳಿಸುವ ಜವಾಬ್ದಾರಿ ನಮ್ಮದು. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಕೆಲಸ ಮಾಡಬೇಕೆಂದು ಜಿಲ್ಲಾಧ್ಯಕ್ಷರಾದ ಸುರೇಶ್ ಭೂಮರೆಡ್ಡಿ ಹೇಳಿದರು.
ಪಕ್ಷ ದಿನದಿಂದ ದಿನಕ್ಕೆ ಬಲವಾಗುತ್ತಿದೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ನಮ್ಮ ಪಕ್ಷದತ್ತ ವಾಲಿದ್ದಾರೆ ಎಂದು ರಾಜ್ಯ ಯುವ ಘಟಕದ ಕಾರ್ಯಧ್ಯಕ್ಷರಾದ ರಾಜು ನಾಯಕ ಹೇಳಿದರು.
ಎಲ್ಲಾ ನಾಯಕರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ನಿರಂತರ ಚರ್ಚೆ ಹಾಗೂ ಸಂವಾದದ ಮೂಲಕ ಏಕತೆಯನ್ನು ಸಾಧಿಸಿ ಕೆಲಸ ಮಾಡಬೇಕು. ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರುವಂತೆ ನೋಡಿಕೊಳ್ಳಬೇಕೆಂದು ರಾಜ್ಯ ಕಾರ್ಯದರ್ಶಿಗಳಾದ ವೀರೇಶ ಮಹಾಂತಯ್ಯನಮಠ ಹೇಳಿದರು.
ಕೊಪ್ಪಳದಲ್ಲಿ ವಂಶ ಪಾರಂಪರ್ಯ ರಾಜಕಾರಣ ಕೊನೆಗೊಳ್ಳಬೇಕು. ಕೇವಲ ಒಂದೇ ಕುಟುಂಬದಲ್ಲಿ ಅಧಿಕಾರ ಕೇಂದ್ರೀಕರಣವಾಗಿದೆ. ಇದನ್ನು ಕೊನೆಗೊಳಿಸಿ, ಅಭಿವೃದ್ಧಿ ಪಥದಲ್ಲಿ ಸಾಗುವ ಶಕ್ತಿ ಇರುವ ಏಕೈಕ ನಾಯಕರಂದರೆ ಸಿ ವಿ ಚಂದ್ರಶೇಖರ್. ಅವರಿಗೆ ಹಾಗೂ ಪಕ್ಷಕ್ಕೆ ಬಲ ತುಂಬೋಣ ಎಂದು ಮುಖಂಡರಾದ ಮಂಜುನಾಥ್ ಸೊರಟೂರ್ ಹೇಳಿದರು.
ಪಕ್ಷದ ಪ್ರಮುಖರಾದ
ದೇವಪ್ಪ ಕಟ್ಟಿಮನಿ, ಈಶಪ್ಪ ಮಾದಿನೂರ, ಸಂಗಮೇಶ್ ದಂಬಳ, ಮಲ್ಲನಗೌಡ ಕೋಣನಗೌಡ್ರ, ಶರಣಪ್ಪ ಕುಂಬಾರ್, ಶರಣಪ್ಪ ಜಡಿ, ಮೂರ್ತೆಪ್ಪ ಗೀಣಗೇರಿ, ಯಮನಪ್ಪ ಕಟಿಗಿ, ದೇವರಾಜ ಮಡ್ಡಿ, ಪ್ರಕಾಶ ಬಸರೀಗಿಡ, ಕರಿಯಪ್ಪ ಹಾಲವರ್ತಿ, ರಮೇಶ ದಂಬ್ರಳ್ಳಿ, ಸೋಮನಗೌಡ, ಶಿವಕುಮಾರ ಕುಣಕೇರಿ, ರವಿ ಮಾಗಳ, ಕಳಕನಗೌಡ, ವಜ್ರಪ್ಪ ಕನಕಪುರ, ಮಲ್ಲಪ್ಪ ಹಂದ್ರಾಳ, ಮಾರುತಿ ಪೇರ್ಮಿ, ಶಂಕರಗೌಡ ಬೆಳಗಟ್ಟಿ, ವಸಂತ ಹಟ್ಟಿ, ಮೈಲಾರಪ್ಪ ಗುಳದಳ್ಳಿ, ರವಿ ಮೇಧಾರ, ಮಹೇಶ ಆಗಳಕೇರಿ, ಗ್ಯಾನಪ್ಪ, ಬಸವರಾಜ, ದೇವರಾಜ ಅಗಳಕೇರಾ ಸೇರಿದಂತೆ
ಪಕ್ಷದ ಜಿಲ್ಲಾ ಹಾಗೂ ತಾಲೂಕ ಸ್ಥರದ ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!