Get real time updates directly on you device, subscribe now.
ಮುನಿರಾಬಾದ್ ಪಂಪ್ ಹೌಸ್‌ಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಳ್ಳುವುದರಿಂದ ಫೆಬ್ರವರಿ 6ರಂದು ಕೊಪ್ಪಳ ನಗರದ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪೌರಾಯುಕ್ತರು ತಿಳಿಸಿದ್ದಾರೆ.
ಕೊಪ್ಪಳ ನಗರಕ್ಕೆ ನೀರು ಸರಬರಾಜು ಮಾಡುವ ಮೂಲಕೇಂದ್ರವಾದ ಮುನಿರಾಬಾದ್ ಪಂಪ್ ಹೌಸ್‌ಗೆ ವಿದ್ಯುತ್ ಸಂಪರ್ಕ ಹೊಂದಿರುವ ವಿದ್ಯುತ್ ಪವರ್ ಹೌಸ್ ಮೆಂಟೆನೆನ್ಸ್ ಮಾಡುವ ಕಾರ್ಯವನ್ನು ಫೆ. 6ಕ್ಕೆ ಮಾಡುತ್ತಿರುವುದಾಗಿ ಜೆಸ್ಕಾಂ ಇಲಾಖೆಯವರು ತಿಳಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಅಂದು ಕೊಪ್ಪಳ ನಗರಕ್ಕೆ ನೀರು ಸರಬರಾಜು ಮಾಡಲು ತೊಂದರೆ ಉಂಟಾಗಲಿದ್ದು, ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಲು ಪ್ರಕಟಣೆಯಲ್ಲಿ ತಿಳಿಸಿದೆ.
Comments are closed.