ವಿಷಯ ಜ್ಞಾನದೊಂದಿಗೆ ಕೌಶಲ್ಯ, ಬೋಧನಾತಂತ್ರಗಳ ಅತ್ಯವಶ್ಯಕ: ಮಲ್ಲಿಕಾರ್ಜುನ
ಗಣಿತದ ಸಾಮರ್ಥ್ಯ: ಪ್ರೌಢಶಾಲಾ ಶಿಕ್ಷಕರಿಗೆ ಬೋಧನಾ ತಂತ್ರಗಳ ಕಾರ್ಯಾಗಾರ

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಬೆಂಗಳೂರು, ಕೆ.ಎಸ್.ಸಿ.ಎಸ್.ಟಿ ಪ್ರಾದೇಶಿಕ ಕೇಂದ್ರ ಕಲಬುರಗಿ ಮತ್ತು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ ಇತ್ತೀಚೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಕೊಂಡಿದ್ದ “ಗಣಿತದ ಸಾಮರ್ಥ್ಯ: ಪ್ರೌಢಶಾಲಾ ಶಿಕ್ಷಕರಿಗೆ ಬೋಧನಾ ತಂತ್ರಗಳು” ಎಂಬ ಒಂದು ದಿನದ ಕಾರ್ಯಾಗಾರದ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಕಲಿಕೆಯ ಜೊತೆಗೆ ಚರ್ಚಾ ವಿಧಾನಗಳನ್ನು ಹೆಚ್ಚು ಹೆಚ್ಚು ಬಳಸಬೇಕು. ನಮ್ಮ ಆಲೋಚನೆಗಳು ನಮ್ಮ ಸಾಧನೆಗೆ ದಾರಿಯಾಗಬೇಕು. ಆಲೋಚನೆಗಳು ಯಾವಾಗಲು ಧನಾತ್ಮಕವಾಗಿರಬೇಕು. ಶಿಕ್ಷಕರಲ್ಲಿ ವಿಷಯ ಜ್ಞಾನಯಿದ್ದೂ, ಕಲಿಸುವ ಕೌಶಲ್ಯ ಇರದಿದ್ದರೆ ಕಲಿಕಾ ಪ್ರಕ್ರಿಯೆ ಪರಿಣಾಮಕಾರಿಯಾಗುವುದಿಲ್ಲ, ಹೀಗಾಗಿ ವಿಷಯ ಜ್ಞಾನದೊಂದಿಗೆ ಕೌಶಲ್ಯಗಳು & ಬೋಧನಾತಂತ್ರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದ ಅವರು, ವಿದ್ಯಾರ್ಥಿಗಳಲ್ಲಿ ಧನಾತ್ಮಕ ಭಾವನೆಗಳನ್ನು ಹೇಗೆ ಮೂಡಿಸಬೇಕು ಎಂಬುದನ್ನು ಶೋಲೆ ಚಲನಚಿತ್ರದ ನಿದರ್ಶನವನ್ನು ನೀಡಿ, ಶಿಕ್ಷಕರ ಆಲೋಚನೆಗಳು ಹೇಗಿರಬೇಕು ಎಂಬುದನ್ನು ಮತ್ತು ಮಕ್ಕಳಲ್ಲಿ ಆಲೋಚನೆಗಳನ್ನು ತಾರ್ಕಿಕತೆಯನ್ನು ಹೇಗೆ ಬೆಳೆಸಬೇಕು ಎಂಬುದನ್ನು ‘ಅಕ್ಬರ-ಬೀರಬಲ್’ ಕಥೆಯ ಮುಖಾಂತರ ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಶೈಲ ಎಸ್.ಬಿರಾದಾರ್ ಅವರು ವಿದ್ಯಾರ್ಥಿಗಳಲ್ಲಿ ಗಣಿತದ ಪರಿಕಲ್ಪನೆಗಳನ್ನು ಮೂರ್ತ ರೂಪದಲ್ಲಿ ತಿಳಿಸುವ, ಅರ್ಥೈಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಈ ಹಿನ್ನೆಲೆಯಲ್ಲಿ ಗಣಿತ ಶಿಕ್ಷಕರಿಗೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಯೋಜನಾ ಅಭಿಯಂತರರಾದ ಡಾ.ಸೈಯದ ಸಮೀರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಕೆ.ಎಸ್.ಸಿ.ಎಸ್.ಟಿ, ಪ್ರಾದೇಶಿಕ ಕೇಂದ್ರ, ಕಲಬುರಗಿಯ ಪ್ರೋಜೆಕ್ಟ್ ಅಸೋಸಿಯೇಟರ್ ವಿಶ್ವಪ್ರಸನ್ನ ಹಾಗೂ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕ್ಯೂರೇಟರ್ ಮೈಲಾರಪ್ಪ ಹಾಗೂ ಪೂಜಾ, ಜಿ.ಪಂ. ಎನ್.ಆರ್.ಡಿ.ಎಂ.ಎಸ್ ಗುರುಸ್ವಾಮಿ ಸೇರಿದಂತೆ ಮತ್ತಿತರರಿದ್ದರು. ಶಿಕ್ಷಕ ಮಹಾಂತಯ್ಯ ಅವರು ಕಾರ್ಯಕ್ರಮ ನಿರೂಪಿಸಿದರೆ, ಡಯಟ್‌ನ ಉಪನ್ಯಾಸಕರಾದ ಗವಿಸಿದ್ದೇಶ್ವರಸ್ವಾಮಿ ರಾಚಯ್ಯ ಬೆಣಕಲ್ಮಠ ಅವರು ವಂದಿಸಿದರು.
*ಕಾರ್ಯಾಗಾರ:* ಕಾರ್ಯಗಾರದಲ್ಲಿ ಮೊದಲನೆ ಅವಧಿಯನ್ನು ಗಣಿತ ಶಿಕ್ಷಕ ನಾಗೇಶ ಕೆ.ಓ ಅವರು ಸುಲಭ ತಂತ್ರಗಳಲ್ಲಿ ಜ್ಞಾಪಕ ಸಾಧನೆಗಳು ‘ಮೈಂಡ್ ಮ್ಯಾಪ್’ ಬಗ್ಗೆ, ಎರಡನೇ ಅವಧಿಯಲ್ಲಿ ಹರಿಕೃಷ್ಣ ಹೊಳ್ಳ ಅವರು ವಾಸ್ತವ ಸಂಖ್ಯೆಗಳು ಬಹುಪದೋಕ್ತಿಗಳು ‘ಪೈ’ ಚಿತ್ತಗಳ ಬಗ್ಗೆ ಹಾಗೂ ಮೂರನೇ ಅವಧಿಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಯೋಜನಾ ಅಭಿಯಂತರರಾದ ಡಾ.ಸೈಯದ್ ಸಮೀರ್ ಅವರು ಗಣಿತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಹೆಚ್ಚು ಆಕರ್ಷಕವಾಗಿ ಮತ್ತು ಪರಿಣಾಮಕಾರಿಯಾಗಿ ಮಾಡುವ ಬಗ್ಗೆ ತಿಳಿಸಿದರು. ಕಾರ್ಯಗಾರದಲ್ಲಿ ಸುಮಾರು 140 ಶಿಕ್ಷಕರು ಭಾಗವಹಿಸಿ ಇದರ ಪ್ರಯೋಜನವನ್ನು ಪಡೆದುಕೊಂಡರು.