ಫೆಬ್ರವರಿ 3 ರಿಂದ ಕೊಪ್ಪಳ ನಗರದಲ್ಲಿ ಇ-ಆಸ್ತಿ ತಂತ್ರಾಂಶದ ಶಿಬಿರ
: ಇ-ಆಸ್ತಿ ತಂತ್ರಾಂಶದ ಕುರಿತು ಕೊಪ್ಪಳ ನಗರಸಭೆಯಿಂದ ಫೆಬ್ರವರಿ 3 ರಿಂದ 13 ರವರೆಗೆ ನಗರದ ವಿವಿಧ ವಾರ್ಡ್‍ಳಲ್ಲಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ನಗರಸಭೆ ಪೌರಾಯುಕ್ತರಾದ ಗಣಪತಿ ಪಾಟೀಲ್ ತಿಳಿಸಿದ್ದಾರೆ.
*ಶಿಬಿರ ದಿನಾಂಕ & ಸ್ಥಳ;* 1 ರಿಂದ 3ನೇ ವಾರ್ಡ್‍ಳ ಶಿಬಿರವು ಫೆಬ್ರವರಿ 3 ರಂದು ನಗರದ ಕಾತರಕಿ ರಸ್ತೆಯ ಸಿರಸಪ್ಪಯ್ಯನ ಮಠದ ಹತ್ತಿರದಲ್ಲಿ ನಡೆಯಲಿದೆ. 4 ಮತ್ತು 12ನೇ ವಾರ್ಡ್‍ಳ ಶಿಬಿರವು ಫೆ. 4ರಂದು ಸಾಲಾರಜಂಗ್ ರಸ್ತೆಯ ಜೆ.ಪಿ ಮಾರುಕಟ್ಟೆಯಲ್ಲಿ ಹಮ್ಮಿಕೊಳ್ಳಲಾಗಿದೆ. 5 ರಿಂದ 9ನೇ ವಾರ್ಡ್‍ಳ ಶಿಬಿರವು ಫೆ. 5ರಂದು ಗಡಿಯಾರ ಕಂಬದ ಹತ್ತಿರ ಇರುವ ಹಿರೇಮಸೂತಿ ಸಮೀಪದಲ್ಲಿ ನಡೆಲಿದೆ. 10, 11, 13, 14, 15 & 16ನೇ ವಾರ್ಡ್‍ಳ ಶಿಬಿರವು ಫೆ. 6ರಂದು ಕುಂಬಾರ ಓಣಿಯ ಪ್ಯಾಟಿ ಈಶ್ವರ ದೇವಸ್ಥಾನದ ಹತ್ತಿರದಲ್ಲಿ ಏರ್ಪಡಿಸಿದೆ. 17 ರಿಂದ 20ನೇ ವಾರ್ಡ್‍ಳ ಶಿಬಿರವು ಫೆ. 7 ರಂದು ನಗರದ ಬಹಾರಪೇಟ್ ಶಾಲೆ ಹತ್ತಿರ ನಡೆಯಲಿದೆ. 21 ರಿಂದ 23ನೇ ವಾರ್ಡ್‍ಳ ಶಿಬಿರವು ಫೆ. 10 ರಂದು ಗದಗ ರಸ್ತೆಯ ಮೈನಳ್ಳಿ ಗೌಡರ ಮನೆಯ ಹತ್ತಿರ ಜರುಗಲಿದೆ. 24 ರಿಂದ 26ನೇ ವಾರ್ಡ್‍ಳ ಶಿಬಿರವು ಫೆ. 11ರಂದು ಕಿನ್ನಾಳ ರಸ್ತೆಯ ಐ.ಬಿ ಎದುರಗಡೆ ಹಮ್ಮಿಕೊಳ್ಳಲಾಗಿದೆ. 27 ರಿಂದ 29ನೇ ವಾರ್ಡ್‍ಳ ಶಿಬಿರವು ಫೆ. 12ರಂದು ಬಸವೇಶ್ವರ ವೃತ್ತದ ಹತ್ತಿರ (ಗಂಜ್ ಸರ್ಕಲ್) ಹಾಗೂ 30, 31ನೇ ವಾರ್ಡ್‍ಳ ಶಿಬಿರವು ಫೆ. 13ರಂದು ಹೊಸಪೇಟೆ ರಸ್ತೆಯ ಈಶ್ವರ ಪಾರ್ಕ್‍ನಲ್ಲಿ ಹಮ್ಮಿಕೊಳ್ಳಲಾಗಿದೆ.
ಆಯಾ ವಾರ್ಡ್‍ಳ ಸಾರ್ವಜನಿಕರು ಶಿಬಿರಗಳಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳಾದ ನೋಂದಾಯಿತ ಖರೀದಿ ಪತ್ರ, ಹಕ್ಕುಪತ್ರ, ಖಾತಾ ನೋಂದಣಿ, ಬದಲಾವಣೆ ಪ್ರತಿ, 2024-25ನೇ ಸಾಲಿನ ಆಸ್ತಿತೆರಿಗೆ, ನಳದ ತೆರಿಗೆ ಪಾವತಿಯ ಪ್ರತಿ, ಆಸ್ತಿ ಮಾಲೀಕರ ಮತದಾರರ ಗುರುತಿನ ಚೀಟಿ, ಪ್ಯಾನ್, ಡಿ.ಎಲ್ ಅಥವಾ ಪಡಿತರ ಚೀಟಿ, ಆಸ್ತಿ ಮಾಲೀಕರ-ಭಾವಚಿತ್ರ, ಆಸ್ತಿಯ ಭಾವಚಿತ್ರ, ಎನ್.ಎ ಆದೇಶ ಪ್ರತಿ, ಅನುಮೋದಿತ ಲೇಔಟ್ ಪ್ರತಿ, ನಿವೇಶನಗಳ ಬಿಡುಗಡೆ ಆದೇಶ, ಕೆ.ಜೆ.ಪಿ ನಕ್ಷೆ, (ಕಟ್ಟಡ ಇದ್ದಲ್ಲಿ) ಕಟ್ಟಡ ಪರವಾನಿಗೆ, ನಕ್ಷೆ, ಕಟ್ಟಡ ಪೂರ್ಣಗೊಂಡ ಪ್ರಮಾಣ ಪತ್ರ ಹಾಗೂ ವಿದ್ಯುತ್ ಮೀಟರ್ ಆರ್.ಆರ್ ಸಂಖ್ಯೆ ಇವುಗಳನ್ನು ಸಲ್ಲಿಸಿ ಇ-ಅಸ್ತಿ ತಂತ್ರಾಂಶದಲ್ಲಿ ಅರ್ಹ ಆಸ್ತಿಗಳಿಗೆ ನಮೂನೆ-3ರನ್ನು ಪಡೆಯಲು ಈ ಅವಕಾಶವನ್ನು ಸಾರ್ವಜನಿಕರು, ಆಸ್ತಿ ಮಾಲೀಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.
Comments are closed.