ವೀರಶೈವ ಪಂಚಮಶಾಲಿ ಸಮಾಜದ ಯುವ ಘಟಕದ ತಾಲೂಕ ಅಧ್ಯಕ್ಷರಾಗಿ ಮಾರುತಿ ಎಸ್ ಸಂಕನಗೌಡ್ರ   ಆಯ್ಕೆ

Get real time updates directly on you device, subscribe now.


ಕೊಪ್ಪಳದ ಪಂಚಮಶಾಲಿ ಸಮುದಾಯದ ಕಲ್ಯಾಣ ಮಂಟಪದಲ್ಲಿ ರಾಜ್ಯಾಧ್ಯಕ್ಷರಾದ ಸೋಮನಗೌಡ ಎಮ್ ಪಾಟೀಲ್, ಜಿಲ್ಲಾಧ್ಯಕ್ಷರಾದ ಬಸನಗೌಡ ತೊಂಡಿಹಾಳ , ಕಳಕನಗೌಡ್ರ ಪಾಟೀಲ್ ಧರ್ಮದರ್ಶಿಗಳು, ತಾಲೂಕ ಅಧ್ಯಕ್ಷರಾದ ಕರಿಯಪ್ಪ ಮೇಟಿ ಇವರುಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶ್ರೀ ಮಾರುತಿ ಎಸ್ ಸಂಕನಗೌಡ್ರ ಓಜಿನಹಳ್ಳಿ ಇವರನ್ನು ಕೊಪ್ಪಳ ತಾಲೂಕ ವೀರಶೈವ ಪಂಚಮಶಾಲಿ ಸಮಾಜದ ಯುವ ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಇದೇ ಸಂಧರ್ಭದಲ್ಲಿ ಮಾತಾನಾಡಿದ ಯುವ ಮುಖಂಡರಾದ ಬಸವರಾಜ ಸಂಕನಗೌಡ್ರ ಸಮಾಜದ ಕೊನೆಯ ವ್ಯಕ್ತಿಯನ್ನು ಕೂಡ ಒಳಗೊಂಡು, ಎಲ್ಲರನ್ನು ಸಮಾನವಾಗಿ ನೋಡುವ ಜವಬ್ದಾರಿಯುತ ಹುದ್ದೆ ಇದಾಗಿದ್ದು ಸಮರ್ಪಕವಾಗಿ ನಿರ್ವಹಿಸಿಕೊಂಡು ಹೋಗಲು ಕರೆ ನೀಡಿದರು. ಶರಣಪ್ಪ ಆನೆಗೊಂದಿ, ಫಕೀರಗೌಡ ಗೊಂಡಬಾಳ, ಗವಿಸಿದ್ದಪ್ಪ ಚಿನ್ನೂರ, ಎಸ್, ಬಿ, ಕೋಣಿ, ಉಮೇಶ ಎತ್ತಿನಮನಿ, ಬಸವರಾಜ ಸಂಕನಗೌಡ್ರ, ವಿರೇಶ ಬಳಿಗಾರ, ಬಸವರಾಜ ಜಂತ್ಲಿ, ಮಾರುತಿ ತಿಮ್ಮಾಪುರ, ಶ್ರೀಶೈಲ್ ಈಶ್ವರಗೌಡ್ರ, ಶರಣಪ್ಪ ಸೋಂಪುರ, ಶಿವನಗೌಡ ಮಾಲಿ ಪಾಟೀಲ್ , ಮಂಜುನಾಥ ಮಾದಿನೂರು ಮತ್ತು ಮಂಜುನಾಥ ಕುಷ್ಟಗಿ ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!