ಕೊಪ್ಪಳ ಸಚಿವ,ಶಾಸಕರುಗಳ ಜತೆ ಮುಖ್ಯಮಂತ್ರಿಗಳ ಚರ್ಚೆ

Get real time updates directly on you device, subscribe now.

ಸಚಿವರು ಮತ್ತು ಶಾಸಕರುಗಳ ಜತೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳು ಚರ್ಚಿಸಿದರು. ಆಯಾ ಕ್ಷೇತ್ರಗಳ ಅಭಿವೃದ್ಧಿ , ಅನುದಾನ ಮತ್ತು ಲೋಕಸಭಾ ಚುನಾವಣೆ ಸಿದ್ದತೆ ಕುರಿತು ಚರ್ಚಿಸಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉಪಸ್ಥಿತರಿದ್ದರು.

ಸತತ 8 ಗಂಟೆಗಳ ಕಾಲ ಶಾಸಕರು ಮತ್ತು ಸಚಿವರ ಜತೆ ನಿರಂತರ ಚರ್ಚೆ.

ಆರು ಜಿಲ್ಲೆಗಳ 50 ಶಾಸಕರ ಬೇಡಿಕೆ ಮತ್ತು ಸಲಹೆಗಳನ್ನು ಅತ್ಯಂತ ಸಹನೆಯಿಂದ ಕೇಳಿ ಭರವಸೆ ನೀಡಿದರು

ಮಧ್ಯಾಹ್ನ ಊಟದ ಬಿಡುವೂ ಇಲ್ಲದಂತೆ, ಸಭೆ ನಡೆಸುತ್ತಲೇ ಊಟ ಮಾಡಿದ ಸಿಎಂ

ರಾಯಚೂರು, ವಿಜಯಪುರ,ಕೊಪ್ಪಳ, ಹಾವೇರಿ, ಬೆಳಗಾವಿ, ಕಲಬುರಗಿ ಜಿಲ್ಲೆಗಳ ಶಾಸಕರು ಮತ್ತು ಜಿಲ್ಲಾ ಸಚಿವರುಗಳು ಹಾಗೂ ಕಾರ್ಯದರ್ಶಿಗಳ ಜತೆ ಸರಣಿ ಸಭೆಗಳು

ಕ್ಷೇತ್ರದ ಕೆಲಸಗಳು, ಅಗತ್ಯ ಅನುದಾನ, ಪರಸ್ಪರ ಸಮನ್ವಯತೆ ಮತ್ತು ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ

ಆಗಸ್ಟ್ 20 ರಂದು ರಾಜ್ಯದಲ್ಲಿ ಉದ್ಘಾಟನೆಗೊಳ್ಳಲಿರುವ ದೇಶದ ಚರಿತ್ರೆಯಲ್ಲೇ ಅತ್ಯಂತ ದೊಡ್ಡ ಜನೋಪಯೋಗಿ ಯೋಜನೆ “ಗೃಹ ಲಕ್ಷ್ಮಿ” ಕಾರ್ಯಕ್ರಮದ ಯಶಸ್ವಿಗೆ ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಸಂಸದರ ಜತೆ ವಿಡಿಯೊ ಸಂವಾದ ನಡೆಸಿದರು

ಬೆಳಗ್ಗೆ 10 ಗಂಟೆಗೆ ತಮ್ಮ ನಿವಾಸದಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿಸುವ ಮೂಲಕ ದಿನಚರಿ ಆರಂಭಿಸಿದ ಮುಖ್ಯಮಂತ್ರಿಗಳು ರಾತ್ರಿ 9 ಗಂಟೆವರೆಗೂ (11 ಗಂಟೆಗಳ ಕಾಲ) ಸರಣಿ ಸಭೆಗಳನ್ನು ಬಿಡುವಿಲ್ಲದಂತೆ ನಡೆಸಿದರು

Get real time updates directly on you device, subscribe now.

Comments are closed.

error: Content is protected !!
%d bloggers like this: