ಬಸವರಾಜ ರಾಯರಡ್ಡಿಯವರಿಗೆ ಸಿಎಂ ಸಿದ್ದರಾಮಯ್ಯ ಪತ್ರ

Get real time updates directly on you device, subscribe now.

ಯಲಬುರ್ಗಾ : ಯಲಬುರ್ಗಾ ಶಾಸಕ ಬಸವರಾಜ್ ರಾಯರಡ್ಡಿಯವರಿಗೆ ಸಿಎಂ ಸಿದ್ದರಾಮಯ್ಯ ಬರೆದಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಶ್ರೀ ಬಸವರಾಜ ರಾಯರಡ್ಡಿ ರವರೆ,

ತಮ್ಮ ಶಾಸಕ ಸ್ಥಾನದ ಸಂಪೂರ್ಣ ಅವಧಿಯ ಮಾಸಿಕ ವೇತನದ ಹಣವನ್ನು ಸರ್ಕಾರದ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುವ ಸಲುವಾಗಿ ಸರ್ಕಾರಕ್ಕೆ ಹಿಂದಿರುಗಿಸಿರುವುದು ಪ್ರಶಂಸನೀಯ, ತಾವು ಈ ಹಿಂದೆಯೂ ಸಹ ತಮ್ಮ ವೇತನವನ್ನು ಸರ್ಕಾರದ ಯೋಜನೆಗಳಿಗಾಗಿ ನೀಡಿದ್ದು, ఈ ಅವಧಿಯಲ್ಲಿಯೂ ಅದೇ ಮಾದರಿ ನಡೆಯನ್ನು ಅನುಸರಿಸಿದ್ದೀರಿ. ಅದರಲ್ಲೂ, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ ಬಳಕೆ ಮಾಡಿಕೊಳ್ಳುವಂತೆ ಕೋರಿರುವುದು ತಮ್ಮ ಜನಪರ ಕಾಳಜಿಯನ್ನು ತೋರಿಸುತ್ತದೆ.

ಈ ಮೂಲಕ ಸಮಾಜಮುಖಿ ಕಾರ್ಯಕ್ಕೆ ಸಹಕಾರ ನೀಡುತ್ತಿರುವುದಕ್ಕೆ ಅಭಿನಂಧಿಸುತ್ತಾ, ಇನ್ನೂ ಹೆಚ್ಚಿನ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಲು ದೇವರು ನಿಮಗೆ ಅದಮ್ಯ ಚೈತನ್ಯವನ್ನು ಕರುಣಿಸಲಿ ಎಂದು ಆಶಿಸುತ್ತೇನೆ.

ಆದರಗಳೊಂದಿಗೆ,

(ಸಿದ್ದರಾಮಯ್ಯ)

ಶ್ರೀ ಬಸವರಾಜ ರಾಯರಡ್ಡಿ ರವರು ಮಾನ್ಯ ಶಾಸಕರು ಯಲಬುರ್ಗಾ ವಿಧಾನಸಭಾ ಕ್ಷೇತ್ರ

Get real time updates directly on you device, subscribe now.

Comments are closed.

error: Content is protected !!