ಶಾದಿ ಮಹಲ್ ಬಾಡಿಗೆ ಕಡಿಮೆ ಮಾಡಲು ಸಚಿವ ಝಡ್ ಎಮ್ ಝಮೀರ್ ಅಹ್ಮದ್ ಖಾನ್  ರಿಗೆ ಮನವಿ

Get real time updates directly on you device, subscribe now.

    ಕೊಪ್ಪಳ : ನಗರದ ಶಾದಿ ಮಹಲ್ ಬಾಡಿಗೆ ಕಡಿಮೆ ಮಾಡಲು ಹಾಗೂ ಇತರೆ ಬೇಡಿಕೆಗಳ ಈಡೇರಿಸುವಂತೆ ವಸತಿ,ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಡ್,ಎಮ್,ಝಮೀರ್ ಅಹ್ಮದ್ ಖಾನ್ ಅವರಿಗೆ ರವಿವಾರ ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್,ಎ,ಗಫಾರ್, ಉಪಾಧ್ಯಕ್ಷ ಮೌಲಾ ಹುಸೇನ್ ಹಣಗಿ ಮುಂತಾದವರು ಮನವಿ ಅರ್ಪಿಸಿದರು.
     ಮನವಿಯಲ್ಲಿ ನಗರ ಸಭೆ ಎದುರಿನ ಶಾದಿ ಮಹಲ್  ವಿಪರೀತ ಬಾಡಿಗೆ ಇದ್ದುದನ್ನು ಕಡಿಮೆ ಮಾಡಬೇಕು,
ಈಗ ಶಾದಿ ಮಹಲ್ ಬಾಡಿಗೆ ₹ 12,000 ಗಳು ಪಡೆಯುತ್ತಿದ್ದು, ಜಾಗ ಖರೀದಿಗಾಗಿ ನಗರದ ದುಡಿಯುವ ಬಡ ಜನರು ತಮಗೆ ಕೈಲಾದಷ್ಟು ಅಂದರೆ ₹ 10 ರಿಂದ ನೂರಾರು ರೂಪಾಯಿಗಳವರೆಗೆ ದೇಣಿಗೆ ನೀಡಿದ ಹಣದಲ್ಲಿ ಜಾಗ ಖರೀದಿಸಿದ್ದು, ನಂತರ ಸರ್ಕಾರದಿಂದ ಬಂದ ವಿವಿಧ ಅನುದಾನದಲ್ಲಿ ಕಟ್ಟಡ ನಿರ್ಮಾಣವಾಗಿದೆ, ಆದರೆ ಆಗ ಚಂದ ನೀಡಿದ ಬಡವರಿಗೆ ಈಗ ಶಾದಿ ಮಹಲ್ ನಲ್ಲಿ ಮದುವೆಗೆ ಪಡೆಯಲು ಸಾಧ್ಯವಿಲ್ಲದಷ್ಟು ವಿಪರಿತ ಬಾಡಿಗೆ ಏರಿಸುವುದರಿಂದ ಸಮಸ್ಯೆ ಅನುಭವಿಸಬೇಕಾಗಿದೆ,ಉಳ್ಳವರಿಗೆ ಶಾದಿ ಮಹಲ್ ಎಂಬಂತಾಗಿದೆ,ದಯವಿಟ್ಟು ತಾವು ಈ ಹಿಂದೆ ಘೋಷಿಸಿದಂತೆ ಶಾದಿ ಮಹಲ್ ಬಾಡಿಗೆಯನ್ನು ಬಡವರಿಗೆ ಅನುಕೂಲವಾಗುವ ರೀತಿಯಲ್ಲಿ ₹ 3000 ಗಳಿಗೆ ನಿಗದಿಪಡಿಸಬೇಕು,ಶಾದಿ ಭಾಗ್ಯ ಯೋಜನೆಯನ್ನು ಮರು ಜಾರಿಗೊಳಿಸಬೇಕು, ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹೆಚ್ಚಿಸಿ ಜಾರಿ ಮಾಡಿ, ರಾಜ್ಯದಾದ್ಯಂತ ವಕ್ಫ್ ಕ್ಯಾಂಟೀನ್ ಗಳು ಆರಂಭಿಸಬೇಕು, ವಿವಿಧ ತಾಂತ್ರಿಕ ಶಿಕ್ಷಣ ಬೋಧನಾ ತರಬೇತಿ ಕಾಲೇಜುಗಳ ಮಂಜೂರಾಗಬೇಕು.ಶೂನ್ಯದಿಂದ ಪದವಿವರೆಗೆ ಧಾರ್ಮಿಕ ಹಾಗೂ ಲೌಕಿಕ ಶೈಕ್ಷಣಿಕ ಶಾಲಾ ಕಾಲೇಜುಗಳು ಪ್ರಾರಂಭಿಸಬೇಕು ಎಂದು ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಎಸ್.ಎ.ಗಫಾರ್, ಜಿಲ್ಲಾ ಉಪಾಧ್ಯಕ್ಷ ಮೌಲಾ ಹುಸೇನ್ ಹಣಗಿ ಮುಂತಾದವರು ಮನವಿ ಸಲ್ಲಿಸಿದರು.

Get real time updates directly on you device, subscribe now.

Comments are closed.

error: Content is protected !!