ಕಿಷ್ಕಿಂಧಾ ಜಿಲ್ಲಾ ಹೋರಾಟದ ಬಗ್ಗೆ ಸಿಎಂ ಗಮನಕ್ಕೆ ತರುವೆ: ಸಚಿವ ತಂಗಡಗಿ
ಕಿಷ್ಕಿಂಧಾ ಜಿಲ್ಲಾ ಹೋರಾಟ ಸಮಿತಿಯಿಂದ ಸಚಿವ ಶಿವರಾಜ ತಂಗಡಗಿ ಅವರನ್ನ ಕನಕಗಿರಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಲಾಯಿತು
ಗಂಗಾವತಿ:
ವಾಣಿಜ್ಯ ನಗರಿ ಗಂಗಾವತಿಯನ್ನು ಕೇಂದ್ರವನ್ನಾಗಿಸಿಕೊಂಡು ನೂತನ ಕಿಷ್ಕಿಂಧಾ ಜಿಲ್ಲೆ ರಚನೆಗೆ ಒತ್ತಾಯಿಸಿ ಕಳೆದ ಒಂದು ವರ್ಷಕ್ಕಿಂತ ಹೆಚ್ಚುಕಾಲದಿಂದ ಸಮಿತಿ ನಡೆಸುತ್ತಿರುವ ಹೋರಾಟ, ಚಟುವಟಿಕೆಗಳು ನನ್ನ ಗಮನದಲ್ಲಿವೆ.
ಕಿಷ್ಕಿಂಧಾ ಎಂಬ ನೂತನ ಜಿಲ್ಲೆ ರಚನೆ ಸಕಾಲಿಕವಾಗಿದ್ದು, ಈ ಬಗ್ಗೆ ನಡೆಯುತ್ತಿರುವ ಚಟುವಟಿಕೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರುತ್ತೇನೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದರು.
ಕಿಷ್ಕಿಂಧಾ ಜಿಲ್ಲಾ ಹೋರಾಟದ ಬಗ್ಗೆ ಮುಂದಿನ ಅಧಿವೇಷನದಲ್ಲಿ ಚಚರ್ಿಸಿ ಬಜೆಟ್ನಲ್ಲಿ ಘೋಷಣೆ ಮಾಡಿಸುವಂತೆ ಒತ್ತಾಯಿಸಿ ಹೋರಾಟ ಸಮಿತಿಯ ನಿಯೋಗ ಕನಕಗಿರಿಯ ಸಚಿವರ ಕಾಯರ್ಾಲಯದಲ್ಲಿ ಶನಿವಾರ ರಾತ್ರಿ ಮನವಿ ಸಲ್ಲಿಸಿತು.
ಮನವಿ ಸ್ವೀಕರಿಸಿದ ಬಳಿಕ ಪ್ರತಿಕ್ರಿಯೆ ನೀಡಿದ ಸಚಿವ, ಅಭಿವೃದ್ಧಿಯ ವಿಚಾರದಲ್ಲಿ ನಾನು ಯಾವುದೇ ರಾಜಕೀಯ ಮಾಡುವುದಿಲ್ಲ. ಗಂಗಾವತಿ ಜಿಲ್ಲೆಯಾಗಲು ನನ್ನ ಸಂಪೂರ್ಣ ಸಹಕಾರ ಮಾತ್ರವಲ್ಲ, ಬೆಂಬಲವೂ ಇದೆ. ಇದು ಸಕಾಲಿಕ ಮತ್ತು ಸೂಕ್ತವೂ ಆಗಿದೆ.
ಆದರೆ ನೂತನ ಜಿಲ್ಲೆ ರಚಿಸುವಂತೆ ಒತ್ತಾಯಿಸಿ ಸಿಎಂ ಮುಂದೆ ನಾನು ಬೇಡಿಕೆ ಸಲ್ಲಿಸಲು ಬರುವುದಿಲ್ಲ. ಆದರೆ ನಡೆಯುತ್ತಿರುವ ಹೋರಾಟಗಳ ಬಗ್ಗೆ ಅವರ ಗಮನಕ್ಕೆ ತರಬಹುದು. ಗಂಗಾವತಿ ಜಿಲ್ಲೆಯಾಗಬೇಕು ಎಂಬುವುದು ನನ್ನ ವೈಯಕ್ತಿಕ ಅಭಿಪ್ರಾಯವೂ ಆಗಿದೆ ಎಂದರು.
ಕನಕಗಿರಿ, ಕಾರಟಗಿ ಮತ್ತು ಗಂಗಾವತಿಯ ಕಕ್ಷಿದಾರರು, ವಕೀಲರು, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಎಸಿ ಕೋಟರ್್ ಬೇಕು ಎಂಬ ಬೇಡಿಕೆ ವಕೀಲರ ಸಮೂಹದ ಮೂಲಕ ನನ್ನ ಗಮನಕ್ಕೆ ಬಂದ ಕೇವಲ ಒಂದು ವಾರದಲ್ಲಿ ಗಂಗಾವತಿಗೆ ಎಸಿ ಕೋಟರ್್ ಮಾಡಿಸಿದ್ದೇನೆ
ಮುಂದಿನ ದಿನಗಳಲ್ಲಿ ಅತಿ ಶೀಘ್ರವಾಗಿ ಗಂಗಾವತಿಗೆ ಪೂರ್ಣ ಪ್ರಮಾಣದ ಸಹಾಯಕ ಆಯುಕ್ತರ ಕಚೇರಿ ಮಂಜೂರು ಮಾಡಿಸಲು ಯತ್ನಿಸುತ್ತೇನೆ. ಜಿಲ್ಲೆ ರಚನೆಗೆ ಭೌಗೋಳಿಕ ವ್ಯಾಪ್ತಿ, ಜನಸಂಖ್ಯೆ ಮಾನ ದಂಡವಾಗಿದ್ದು, ಎಲ್ಲಾ ನಿಟ್ಟಿನಲ್ಲಿ ನೂತನ ಜಿಲ್ಲಾ ಕೇಂದ್ರ ರಚನೆಗೆ ಯತ್ನ ಮಾಡುತ್ತೇನೆ ಎಂದರು.
ಜಿಲ್ಲಾ ಹೋರಾಟ ಸಮಿತಿಯ ನಿಯೋಗ ಬೆಂಗಳೂರಿಗೆ ಬಂದರೆ ಸಿಎಂ ಭೇಟಿ ಮಾಡಿಸುತ್ತೇನೆ ಎಂದು ಸಚಿವ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು. ಜಿಲ್ಲಾ ಹೋರಾಟ ಸಮಿತಿಯ ಸಂಚಾಲಕರಾದ ಸಂತೋಷ್ ಕೇಲೋಜಿ, ನಾರಾಯಣಪ್ಪ ನಾಯಕ್, ಸವರ್ೇಶ ವಸ್ತ್ರದ ನೇತೃತ್ವದಲ್ಲಿ ಸಚಿವರಿಗೆ ಬೇಡಿಕೆಯ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶಶೀಧರಗೌಡ ಹೇರೂರು, ರಾಜೇಶ್ವರಿ ಆನೆಗೊಂದಿ, ರಾಧಮ್ಮ, ಕೃತಿಕ್ ವಸ್ತ್ರದ, ದೀಪಕ್ ಬಾಂಠಿಯಾ, ಸ್ವಯಂಸೇವಕರಾದ ಮಂಜುನಾಥ ಕಟ್ಟಿಮನಿ, ಶ್ರೀನಿವಾಸ ಎಂ.ಜೆ, ವಿನಯ್ ಪಾಟೀಲ್, ಪ್ರಮುಖರಾದ ಗಂಗಾಧರಸ್ವಾಮಿ, ಕನಕಗಿರಿ ಪುರಸಭೆಯ ಸದಸ್ಯ ಟಿ. ರಾಮಚಂದ್ರ, ಸೌಮ್ಯಶ್ರೀ, ವಿರುಪಣ್ಣ ಕಲ್ಲೂರು ಸೇರಿದಂತೆ ಕನಕಗಿರಿ, ಕಾರಟಗಿ ಭಾಗದ ಪ್ರಮುಖರು ಇದ್ದರು. shivaraj-tangadagi-kishkinda-district-formation-apeal
Comments are closed.