ಒಂದರಿಂದ ಏಳನೇ ತರಗತಿ ಮಕ್ಕಳಿಗೆ ಶೈಕ್ಷಣಿಕ ಬುನಾದಿಯಾಗಿದೆ – ಎಸ್,ಎ,ಗಫಾರ್

ಕೊಪ್ಪಳ : ಒಂದರಿಂದ ಏಳನೇ ತರಗತಿ ಮಕ್ಕಳಿಗೆ ಶೈಕ್ಷಣಿಕ ಬುನಾದಿಯಾಗಿದೆ, ಶಿಕ್ಷಕರು ತಂತ್ರಗಳಿಂದ ತಮ್ಮ ಕಡೆ ಸೆಳೆದುಕೊಂಡು ಪ್ರತಿಯೊಂದು ಮಗುವಿಗೂ ಕನ್ನಡ ಓದಲು ಬರೆಯಲು ಕಲಿಸಬೇಕು ಎಂದು ಭ್ರಾತೃತ್ವ ಸಮಿತಿಯ ಜಿಲ್ಲಾ ಸಂಚಾಲಕ ಎಸ್,ಎ,ಗಫಾರ್ ಹೇಳಿದರು.
ನಗರದ ಟಿಪ್ಪು ಸುಲ್ತಾನ್ ವೃತ್ತದಲ್ಲಿರುವ ಬಹಾರ ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 76ನೇ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್,ಎ,ಗಫಾರ್ ಮುಂದುವರೆದು ಮಾತನಾಡಿ ಸಂವಿಧಾನ ಅನುಷ್ಠಾನದಿಂದ ರಾಜ್ಯಗಳ ಒಕ್ಕೂಟವಾಗಿ ಗಣರಾಜ್ಯೋತ್ಸವ ಆಚರಣೆ ಮಾಡುತಿದ್ದೇವೆ, ನಮ್ಮ ಜಿಲ್ಲೆಯಲ್ಲಿ ಎಂಟು,ಒಂಬತ್ತು, ಹತ್ತನೇ ತರಗತಿಗಳಲ್ಲಿ ಓದುತ್ತಿರುವ ಮಕ್ಕಳಿಗೆ ಕನ್ನಡ ಓದಲು ಬರೆಯಲು ಬರುತ್ತಿಲ್ಲ ಎಂಬ ಸುದ್ದಿ ಬಂದಿರುವುದು ಬೇಸರ ತಂದಿದೆ, ಪ್ರಾಥಮಿಕ ಶಿಕ್ಷಣದಲ್ಲಿ ಶಿಕ್ಷಕರು ಹೆಚ್ಚು ಕಾಳಜಿ ವಹಿಸಿ ಬೋಧಿಸಬೇಕು,ಗಣಿತದ ಸಂಕಲನ,ವ್ಯವಕಲನ, ಗುಣಾಕಾರ, ಭಾಗಾಕಾರ ಕ್ರಿಯೆಗಳನ್ನು ಮಕ್ಕಳಿಗೆ ಕಡ್ಡಾಯವಾಗಿ ಕಲಿಸಬೇಕಾದ ಜವಾಬ್ದಾರಿ ಶಿಕ್ಷಕರಿಗೆ ಇದೆ, ಬಹಾರ ಪೇಟೆ ಶಾಲೆಗೆ ಸಿ ಸಿ ಕ್ಯಾಮೆರಾ, ಶಾಲಾ ಆವರಣ ಗೋಡೆ,ಶಿಥಿಲಗೊಂಡ ಕಟ್ಟಡವನ್ನು ತೆರವುಗೊಳಿಸಿ,ಹೊಸ ಕಟ್ಟಡಕ್ಕೆ ಸ್ಥಳೀಯ ನಾಯಕರು ಪ್ರಯತ್ನಿಸಬೇಕು ಎಂದು ಹೇಳಿದರು,
ಬಹಾರ ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇಣುಕಾ ಯು,ಸುರ್ವೆ ಮಾತನಾಡಿ ಡಾ : ಬಿ,ಆರ್,ಅಂಬೇಡ್ಕರ್ ಅವರು ಅರ್ಪಿಸಿದ ಸಂವಿಧಾನವನ್ನು 1950 ಜನವರಿ 26 ರಿಂದ ಅನುಷ್ಠಾನಗೊಳಿಸಿದ್ದು, ಅಂದಿನಿಂದ ಗಣರಾಜ್ಯವಾಗಿ ರೂಪಗೊಂಡಿದೆ, ಇಂದು ದೇಶದಲ್ಲಿ 76ನೇ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ, ಸಂವಿಧಾನ ಮತ್ತು ಅಂಬೇಡ್ಕರ್ ಅವರ ಜೀವನವನ್ನು ಅಧ್ಯಯನ ಮಾಡುವ ಮೂಲಕ ಮಕ್ಕಳು ಜ್ಞಾನವನ್ನು ಪಡೆದು ಪಾಲನೆ ಮಾಡುವ ಮೂಲಕ ಉತ್ತಮ ನಾಗರಿಕರಾಗಬೇಕು,ಇಲಾಖೆ ಮತ್ತು ಪಾಲಕರ ಕೋರಿಕೆ ಮೇರೆಗೆ ಕನ್ನಡ ಓದಲು ಬರೆಯಲು,ಗಣಿತದ ಮೂಲ ಕ್ರಿಯೆಗಳನ್ನು ಮಕ್ಕಳಿಗೆ ಕಲಿಸಲು ಶಿಕ್ಷಕರು ಶ್ರಮಿಸುವಂತೆ ಕರೆ ನೀಡಿದರು.
ಯುವ ಮುಖಂಡ ಆದಿಲ್ ಪಟೇಲ್ ಮಾತನಾಡಿ ಸಮಾನ ಕಾನೂನುಗಳನ್ನು ಜನಸಾಮಾನ್ಯರಿಗೆ ಸಂವಿಧಾನದ ಮೂಲಕ ಡಾ: ಬಿ, ಆರ್, ಅಂಬೇಡ್ಕರ್ ನೀಡಿದರು, ನಿಮ್ಮೆಲ್ಲರ ಬೇಡಿಕೆಗಳಾದ ಕುಡಿಯುವ ನೀರು ಪೂರೈಕೆ, ಶಾಲಾ ಕೊಠಡಿಗಳನ್ನು ನಿರ್ಮಿಸಲು ಮತ್ತು ಶಾಲಾ ಆವರಣ ಗೋಡೆ ಎತ್ತರಿಸಲು ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯುತ್ತೇನೆ, ಶಾಲೆಯ ಮೂರ್ನಾಲ್ಕು ದಿಕ್ಕುಗಳಿಗೆ ಸಿ ಸಿ ಕ್ಯಾಮೆರಾ ಅಳುವಡಿಸುವುದಕ್ಕೆ ನಗರಸಭೆಯ ಅನುದಾನದಲ್ಲಿ ಸೇರಿಸಿ ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.
ಮುಖಂಡ ಮೌಲಾ ಹುಸೇನ್ ಹಣಗಿ, ನಿವೃತ್ತ ಮುಖ್ಯೋಪಾಧ್ಯಾಯ ಉಮೇಶ್ ಸುರ್ವೆ,ಬಹಾರ ಪೇಟೆಯ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ತಬಸುಮ್, ಸಹ ಶಿಕ್ಷಕಿ ಶ್ರೀಮತಿ ಉಷಾ ಚಿಮ್ಮಲಗಿ, ಅನುರಾಧ ಕುಲಕರ್ಣಿ, ಗಂಗಮ್ಮ ಶೀಲವಂತರ, ಶಶಿಕಲಾ,ಹನುಮಂತಿ, ಸುರಯ್ಯ ಬೇಗಮ್,ಮಂಜುಳಾ,ವಿಜಯಲಕ್ಷ್ಮಿ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಲಕ್ಷ್ಮಿ ತೊಂಡಿಹಾಳ, ಹುಸೇನ್ ಗೇಟಿನ ಮುಂತಾದವರು ಉಪಸ್ಥಿತರಿದ್ದರು.
ಸಹ ಶಿಕ್ಷಕ ಶ್ರೀನಿವಾಸ್ ಚಿತ್ರಗಾರ ಸ್ವಾಗತಿಸಿ, ನಿರೂಪಿಸಿ ಕೊನೆಯಲ್ಲಿ ವಂದಿಸಿದರು.
Comments are closed.