Sign in
Sign in
Recover your password.
A password will be e-mailed to you.
ಕೊಪ್ಪಳದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸ್ಕಾಲರ್ಶಿಪ್ ಬಿಡುಗಡೆ, ಮನೆ/ವಸತಿಗೆ ರೂ ಆರು ಲಕ್ಷ ಸಹಾಯಧನ ನೀಡಲು ಒತ್ತಾಯ ಮನವಿ
ಕೊಪ್ಪಳ : ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸ್ಕಾಲರ್ಶಿಪ್ ತಕ್ಷಣ ಬಿಡುಗಡೆ ಮಾಡಿ,ಮನೆ/ವಸತಿ ನಿರ್ಮಾಣಕ್ಕೆ ಕನಿಷ್ಠ ರೂ, ಆರು ಲಕ್ಷ ಸಹಾಯಧನ ನೀಡಬೇಕು ಮುಂತಾದ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಎಸ್,ಎ, ಗಫಾರ್, ಜಿಲ್ಲಾ ಅಧ್ಯಕ್ಷ ತುಕಾರಾಮ್ ಬಿ,ಪಾತ್ರೋಟಿ, ಜಿಲ್ಲಾ ಉಪಾಧ್ಯಕ್ಷ ಮೌಲಾ ಹುಸೇನ್ ಹಣಗಿ, ಭಾಗ್ಯನಗರ ಘಟಕದ ಅಧ್ಯಕ್ಷ ಪ್ರಕಾಶ್ ಎಸ್,ದೇವರಮನಿ ಮುಂತಾದವರು ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ರಾತ್ರಿ ವೇಳೆ ಆಗಮಿಸಿದ್ದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಕಳೆದ ವರ್ಷ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿ ವತಿಯಿಂದ ಹಲವಾರು ರೀತಿಯ ಕಿಟ್‌ಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್‌ಗಳು, ಶಾಲಾ ಕಿಟ್‌ಗಳು, ಆರೋಗ್ಯ ತಪಾಸಣೆ, ಕಾರ್ಮಿಕರ ಕೌಶಲ್ಯಭಿವೃದ್ಧಿ ತರಬೇತಿ ಸೇರಿದಂತೆ ಇತ್ಯಾದಿ ಹೆಸರಿನಲ್ಲಿ ಕಾರ್ಮಿಕರು ಬೆವರು ಸುರಿಸಿ ದುಡಿದ ಸೆಸ್‌ಹಣವನ್ನು ಮನಸೋಇಚ್ಚೆ ಕಟ್ಟಡ ಕಾರ್ಮಿಕರ ಮೂಲ ಕಾಯ್ದೆ 1996ರ ವಿರುದ್ಧವಾಗಿ ಮಂಡಳಿಯು ದುಂದುವೆಚ್ಚ ಮಾಡಿದೆ. ಇವುಗಳನ್ನು ತಕ್ಷಣ ನಿಲ್ಲಿಸಬೇಕು ಮತ್ತು ಇದರಲ್ಲಿ ನಡೆದಿರುವ ಅವ್ಯವಹಾರಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ (ಎಐಟಿಯುಸಿ ಸಂಯೋಜಿತ) ಕೊಪ್ಪಳ ಜಿಲ್ಲಾ ಘಟಕ ಒತ್ತಾಯಿಸುತ್ತದೆ.
ಕಾರ್ಮಿಕ ಸಚಿವರು ಆಗಸ್ಟ್ 8, 2024 ರಂದು ಸಭೆ ನಡೆಸಿ ಒಂದು ತಿಂಗಳ ಒಳಗಾಗಿ ಕಾರ್ಮಿಕರ ನೈಜ ಬೇಡಿಕೆಗಳನ್ನು ಈಡೇರಿಸಲು ವಾಗ್ದಾನ ಮಾಡಿದ್ದರು. ಆದರೆ ಐದು ತಿಂಗಳು ಕಳೆದರೂ ಇದುವರೆಗೂ ಸಭೆ ನಿಗದಿ ಮಾಡಿಲ್ಲ. ಕೂಡಲೇ ಸಭೆ ನಡೆಸಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕು.
ಕಟ್ಟಡ ಕಾರ್ಮಿಕರ ಮಕ್ಕಳ ಸ್ಕಾಲರ್ಶಿಪ್ ನ್ಯಾಯಾಲಯದ ಆಶಯದಂತೆ ತಕ್ಷಣ ಬಿಡುಗಡೆ ಮಾಡಬೇಕು,
ಈಗಾಗಲೇ ಖಾಸಗಿಯವರಿಂದ ಆರೋಗ್ಯ ತಪಾಸಣೆ ನಡೆಸುವ ಕಾರ್ಯಕ್ರಮವನ್ನು ತಕ್ಷಣ ನಿಲ್ಲಿಸಿ ಬಿಡುಗಡೆ ಮಾಡಿರುವ ಹಣವನ್ನು ವಾಪಸ್ ಪಡೆಯಬೇಕು. ಆರೋಗ್ಯ ಇಲಾಖೆಯಿಂದ ಉಚಿತ ತಪಾಸಣೆ ನಡೆಸಬೇಕು.
2016 ರಿಂದ ಬಾಕಿ ಇರುವ ಎಲ್ಲಾ ಸೌಲಭ್ಯಗಳ ಧನ ಸಹಾಯವನ್ನು ಕೂಡಲೇ ವಿಲೇವಾರಿ ಮಾಡಬೇಕು.
ಈಗಾಗಲೇ 60 ವರ್ಷ ತುಂಬಿರುವ ಫಲಾನುಭವಿಗಳಿಗೆ ಪಿಂಚಣಿಗೆ ಅರ್ಜಿ ಸಲ್ಲಿಸಲು ವಯೋಮಿತಿಯನ್ನು ನಿಗದಿಮಾಡಬಾರದು, 60 ವರ್ಷ ತುಂಬಿದ ನಂತರ ಯಾವಾಗಬೇಕಾದರೂ ಅರ್ಜಿ ಸಲ್ಲಿಸಿದರೂ ಹಿಂಬಾಕಿ ಪಿಂಚಣಿ ನೀಡಬೇಕು. ಪಿಂಚಣಿಯನ್ನು 6 ಸಾವಿರ ರೂ.ನಿಗದಿ ಮಾಡಬೇಕು.
5 ವರ್ಷ ಸೇವೆ ಪೂರೈಸಿದ ಫಲಾನುಭವಿಗೆ ಮನೆ / ವಸತಿ ನಿರ್ಮಾಣಕ್ಕೆ ಕನಿಷ್ಠ ರೂ ಆರು ಲಕ್ಷ ಸಹಾಯಧನ ನೀಡಬೇಕು.
ಕೊಪ್ಪಳ ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಕಟ್ಟಡ ಕಾರ್ಮಿಕರ ನಕಲಿ ಕಾರ್ಡ್ ಗಳನ್ನು ತಕ್ಷಣ ರದ್ದುಪಡಿಸಲು ವಿಶೇಷ ಅಭಯಾನ ನಡೆಸಬೇಕು,
ಮಂಡಳಿ ಅಭಿವೃದ್ಧಿ ಪಡಿಸಿರುವ ದತ್ತಾಂಶದಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳಿಗೆ ಅವಕಾಶ ನೀಡಬೇಕು ಹಾಗೂ ತಾಂತ್ರಿಕ ಸಮಸ್ಯೆಯನ್ನು ತಕ್ಷಣ ನಿವಾರಿಸಬೇಕು. ತಾಂತ್ರಿಕ ಸಮಸ್ಯೆ ಸಮಯದಲ್ಲಿ ಅರ್ಜಿ ಸಲ್ಲಿಸಲಾಗದ ಕಾರ್ಮಿಕರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು.
1996ರ ಮೂಲ ಕಾಯ್ದೆ ಪ್ರಕಾರ ಸೆಸ್‌ನ್ನು ಕನಿಷ್ಠ ಶೇ.2ಕ್ಕೆ ಹೆಚ್ಚಳ ಮಾಡಬೇಕು. ಈಗಿರುವ ಸೆಸ್ ಸಂಗ್ರಹ ಮಾನದಂಡವನ್ನು ಇನ್ನು ಬಿಗಿಗೊಳಿಸಬೇಕು. ಖಾಸಗಿ ಸೆಸ್ ಕಟ್ಟುನಿಟ್ಟಾಗಿ ಸಂಗ್ರಹಿಸಬೇಕು.
ಕಾರ್ಮಿಕರ ಸಮಸ್ಯೆಯನ್ನು ಪರಿಹರಿಸಲು ಭಾರತ ದೇಶದ ಅತ್ಯಂತ ಹಿರಿಯ ಕಾರ್ಮಿಕ ಸಂಘಟನೆಯಾದ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ(ಎಐಟಿಯುಸಿ ಸಂಯೋಜಿತ)ಕ್ಕೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ನೀಡಬೇಕು.ಶ್ರಮ ಸಾಮರ್ಥ್ಯ ಯೋಜನೆಯನ್ನು ನಿರ್ಮಿತಿ ಕೇಂದ್ರದ ಸಯೋಗದಲ್ಲಿ 2017-18 ರಲ್ಲಿ ಜಾರಿ ಮಾಡಿ 2020ರ ಲಾಕ್ ಡೌನ್ ಸಂದರ್ಭದಿಂದ ಸ್ಥಗಿತಗೊಂಡಿದ್ದು, ಇದರಲ್ಲಿ ಕಟ್ಟಡ ನಿರ್ಮಾಣದ ಆಯಾ ವೃತ್ತಿಗನುಗುಣವಾಗಿ 30 ದಿನಗಳ ಪ್ರಾಯೋಗಿಕ ಹಾಗೂ ಬೋಧನಾ ತರಬೇತಿ, ಮಧ್ಯಾಹ್ನದ ಊಟ, ಚಹ,ದಿನ ಭತ್ಯೆ, ಸಲಕರಣೆಗಳ ಕಿಟ್ಟ್, ಪ್ರಮಾಣ ಪತ್ರ ಹೊಂದಿದ ಇದರಲ್ಲಿ ಕಟ್ಟಡ ಕಾರ್ಮಿಕರ ಕೌಶಲ್ಯ ವೃದ್ಧಿಸುತ್ತದೆ, ಶ್ರಮ ಸಾಮರ್ಥ್ಯ ಯೋಜನೆ ಪುನಃ ಜಾರಿಗೊಳಿಸಲು ಒತ್ತಾಯಿಸಿದರು,
ಮನವಿ ಸ್ವೀಕರಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿ ಎರಡು ತಿಂಗಳ ತಡೆಯಿರಿ ರಾಜ್ಯಾದಾದ್ಯಂತ ಕಟ್ಟಡ ಕಾರ್ಮಿಕರ ನಕಲಿ ಗುರುತಿನ ಚೀಟಿಗಳನ್ನು ಪತ್ತೆ ಹಚ್ಚಲು ಅಂಬೇಡ್ಕರ್ ಸೇವಾ ಕೇಂದ್ರ ಅಂತ ಮಾಡಿದ್ದೇವೆ, ನಲವತ್ತು ಮೂರು ಸೆಕ್ಟರ್ ಗಳಿಗೆ ನಲವತ್ತು ಮೂರು ವ್ಯಾನ್ ಗಳನ್ನು ಮಾಡಿದ್ದೇವೆ, ವ್ಯಾನ್ ಗಳೇ ಮನೆ ಮನೆಗೆ ಹೋಗಿ ಪರಿಶೀಲಿಸಿ,ಕಟ್ಟಡ ಕಾರ್ಮಿಕರ ನಕಲಿ ಗುರುತಿನ ಚೀಟಿಗಳನ್ನು ರದ್ದು ಮಾಡಲಾಗುತ್ತದೆ, ಶ್ರಮ ಸಾಮರ್ಥ್ಯ ಯೋಜನೆ ಮರು ಜಾರಿಗೊಳಿಸುವುದಾಗಿ ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಕೊಪ್ಪಳ ಜಿಲ್ಲಾ ಕಾರ್ಯಾಧ್ಯಕ್ಷ ಎಸ್,ಎ,ಗಫಾರ್,ಜಿಲ್ಲಾ ಅಧ್ಯಕ್ಷ ತುಕಾರಾಮ ಬಿ,ಪಾತ್ರೋಟಿ, ಜಿಲ್ಲಾ ಉಪಾಧ್ಯಕ್ಷ ಮೌಲಾ ಹುಸೇನ್ ಹಣಗಿ,ಆದಿತ್ಯ ಟಿ,ಪಾತ್ರೋಟಿ, ಪ್ರಸಾದ್ ಕಾಳೆ ಮುಂತಾದವರು ಮನವಿ ಅರ್ಪಿಸಿದ್ದಾರೆ.
Get real time updates directly on you device, subscribe now.