ಸಮಾಜದ ಏಳಿಗೆಗಾಗಿ ವೇಮನರ ತತ್ವಾದರ್ಶಗಳು ಎಲ್ಲರಿಗೂ ಮಾದರಿ: ಕೆ.ರಾಘವೇಂದ್ರ ಹಿಟ್ನಾಳ

0

Get real time updates directly on you device, subscribe now.

ಮಹಾಯೋಗಿ ವೇಮನ ಜಯಂತಿ

ಕೊಪ್ಪಳ ಜ :ಮಾನವತಾವಾದಿ ಮೌಲ್ಯಗಳ ಮೂಲಕ ತನ್ನನ್ನು ತಾನು ಪರಿವರ್ತೆನೆ ಮಾಡಿ ಸಮಾಜದ ಏಳಿಗೆಗಾಗಿ ಶ್ರಮಿಸಿದ ವೇಮನರ ತತ್ವಾದರ್ಶಗಳು ನಮ್ಮೆಲ್ಲರಿಗೂ ಮಾದರಿಯಾಗಿವೆ ಎಂದು ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.
ಅವರು ಭಾನುವಾರ ನಗರದ ಕಿನ್ನಾಳ ರಸ್ತೆಯ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಕೊಪ್ಪಳ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ ಮಹಾಯೋಗಿ ವೇಮನ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಾಯೋಗಿ ವೇಮನರು 15 ಮತ್ತು 16ನೇ ಶತಮಾನದಲ್ಲಿ  ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದಿ ಮಾನವತಾವಾದಿ ಮೌಲ್ಯಗಳ ಮೂಲಕ ತನ್ನನ್ನು ತಾನು ಪರಿವರ್ತೆನೆ ಮಾಡಿ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ.  ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ ಅವರ ತತ್ವಗಳು ಮತ್ತು ಚರಿತ್ರೆ ಪಾಲನೆ ಮಾಡಿಕೊಂಡು ಅಂದಿನ ಕಾಲದ ಸ್ಥಿತಿಗತಿಗಳಿಂದ ವೇಮನರು ಮಹಾಯೋಗಿಗಳಾದರು. ಮಾನವ ಕುಲದ ಏಳಿಗಾಗಿ ಶ್ರಮಿಸಿದವರು ಮಹಾಯೋಗಿ ವೇಮನವರು. ಇಂತಹ ಮಹನೀಯರ ತತ್ವ ಆದರ್ಶಗಳನ್ನು ತಿಳಿದುಕೊಳ್ಳುವುದಷ್ಟೆ ಅಲ್ಲದೇ, ಅವುಗಳನ್ನು ಪಾಲನೆ ಮಾಡುವುದು ಸಹ ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀನಿವಾಸ ಗುಪ್ತಾ ಅವರು ಮಾತನಾಡಿ ಮಹಾಯೋಗಿ ವೇಮನವರ ತತ್ವ ಸಿದ್ದಾಂತಗಳನ್ನು  ಪ್ರತಿಯೊಬ್ಬರು ತಮ್ಮ ಜೀವನದಲ್ಲಿ  ಅಳವಡಿಸಿಕೊಳ್ಳಬೇಕು ಹಾಗೂ ಅವರು ತಿಳಿಸಿರುವ ಮಾರ್ಗದರ್ಶನದಲ್ಲಿ ನೆಡದಾಗ ಮಾತ್ರ ಬದಕು ಸುಂದರವಾಗವುದರ ಜೊತೆಗೆ ಒಳ್ಳೆಯ ಸಮಾಜ  ನಿರ್ಮಾಣವಾಗುವುದು ಎಂದು ತಿಳಿಸಿದರು.
ಗಂಗಾವತಿ ಹಿರಿಯ ಸಾಹಿತಿ ಲಿಂಗಾರೆಡ್ಡಿ ಅವರು ಮಹಾಯೋಗಿ ವೇಮನರ ಕುರಿತು ವಿಶೇಷ ಉಪನ್ಯಾಸ ನೀಡಿ, ಕಾಲ ಕಾಲಕ್ಕೆ ಶರಣರು, ಶರಣ ಪರಂಪರೆ, ದಾಸರು, ದಾಸ ಪರಂಪರೆ ಹೀಗೆ ಹಲವಾರು ಮಹನೀಯರು ತಮ್ಮ ತತ್ವಾದರ್ಶಗಳು, ವೈಜ್ಞಾನಿಕ ಚಿಂತನೆಗಳ ಮೂಲಕ ಸಮಾಜ ಸುಧಾರಣೆಗಾಗಿ ಶ್ರಮಿಸುವುದರ ಜೊತೆಗೆ ಮಾನವ ಜೀವನ ವಾಸ್ತವ್ಯಗಳನ್ನು ತಿಳಿಸಿದ್ದಾರೆ. ಅಂತಹ ಮಹನೀಯರಲ್ಲಿ ವೇಮನರು ಒಬ್ಬರು. ಮಹಾಯೋಗಿ ವೇಮನವರು ದಕ್ಷಿಣ ಭಾರತದ ಮಧ್ಯಕಾಲೀನ ಭಾರತದಲ್ಲಿ ಸಮಾಜದಲ್ಲಿನ ಸ್ಥಿತಿಗತಿಗಳನ್ನು ಅರಿತುಕೊಂಡು ಸಮಾಜದ ಒಳಿತಿಗಾಗಿ ಮಹಾನ್ ಶರಣರಾಗಿ, ಸಂತರಾಗಿ ಹಾಗೂ ದಾಸರಾಗಿ ವೈಚಾರಿಕತೆಯ ವಿಚಾರಗಳನ್ನು ಜನ ಸಾಮಾನ್ಯರಿಗೆ  ತಿಳಿಸುವ ಮೂಲಕ ಮಹಾಯೋಗಿಗಳಾಗಿದ್ದಾರೆ‌‌ ಎಂದರು.
ವೇಮನರು ಕಟ್ಟಿಕೊಟ್ಟಂತಹ ಪದ್ಯಗಳು ಸರ್ವಕಾಲಿಕ ಜೀವನದ ಸತ್ಯಾಂಶಗಳು ಹಾಗೂ ವಾಸ್ತವ್ಯಗಳನ್ನು ಒಳಗೊಂಡಿವೆ. ಅವರ ಪದ್ಯಗಳು ಮಾನವನ ಜೀವನದ ಸಾರಂಶಗಳನ್ನು ತಿಳಿಸುವುದರರೊಂದಿಗೆ ಜೀವನದ ನಿಜಸಂಗತಿಗಳನ್ನು ತಿಳಿಸಿವೆ. ದಾರ್ಶನಿಕರು ಜಗತ್ತಿಗೆ ಸಿದ್ದಾಂತಗಳನ್ನು ಬಿಟ್ಟು ಹೋಗಿದ್ದು, ಅವುಗಳ ಮೇಲೆ ನಾವೆಲ್ಲರೂ ನಡೆಯಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಕೊಪ್ಪಳ ತಹಶಿಲ್ದಾರ ವಿಠ್ಠಲ ಚೌಗಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ, ರೆಡ್ಡಿ ಸಮಾಜದ  ಜಿಲ್ಲಾಧ್ಯಕ್ಷರಾದ ಜಗದೀಶ್ ಸಿಂಗನಾಳ್, ಸಮಾಜದ ಮುಖಂಡರಾದ ಪ್ರಭು ಹೆಬ್ಬಾಳ, ಎಸ್‌. ಬಿ ನಾಗರಹಳ್ಳಿ,  ಹೇಮರೆಡ್ಡಿ ಬಿಸರಳ್ಳಿ , ಎಚ್.ಎಲ್  ಹೀರೆ ಗೌಡ್ರ ಹಾಗೂ ಮತ್ತಿತರರು ಸೇರಿದಂತೆ ಸಮಾಜದ ಹಿರಿಯರು ಉಪಸ್ಥಿತರಿದ್ದರು.
ಶಕುಂತಲಾ ಬೆನ್ನಾಳ  ಹಾಗೂ ತಂಡದವರು ನಾಡಗೀತೆ, ಸುಗಮ ಸಂಗೀತ ಪ್ರಸ್ತುತ ಪಡಿಸಿದರು. ಡಾ.ಬಿ.ಎನ್ ಹೊರಪೇಟೆ ಕಾರ್ಯಕ್ರಮವನ್ನು ನಿರೂಪಿಸಿದರು.

Get real time updates directly on you device, subscribe now.

Leave A Reply

Your email address will not be published.

error: Content is protected !!