ಸರಿಯಾದ ನಿರ್ವಹಣೆ ಇಲ್ಲದೇ ಅನೈತಿಕ ಚಟುವಟಿಕೆಗಳ ತಾಣ ಗಂಗಾವತಿ ನೆಹರು ಪಾರ್ಕ್: ನಾಗರಾಜ ಐಲಿ
ಗಂಗಾವತಿ: ಗಂಗಾವತಿ ನಗರದ ಬಸ್‌ಸ್ಟ್ಯಾಂಡ್ ಮುಂಭಾಗದಲ್ಲಿರುವ ನೆಹರು ಉದ್ಯಾನವನ ಸರಿಯಾದ ನಿರ್ವಹಣೆ ಇಲ್ಲದೇ ಅನೈತಿಕ ಚಟುವಟಿಕೆಗಳ, ಜೂಜಾಟಗಳ ತಾಣವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಸಂಘಟನೆಯ ಗಂಗಾವತಿ ನಗರ ಘಟಕ ಅಧ್ಯಕ್ಷರಾದ ನಾಗರಾಜ ಐಲಿ ಆಕ್ರೋಶ ವ್ಯಕ್ತಪಡಿಸಿದರು.
ಅವರು ಇಂದು ಶಾಸಕರಾದ ಗಾಲಿ ಜನಾರ್ಧನರೆಡ್ಡಿಯವರ ಸಮ್ಮುಖದಲ್ಲಿ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿ ಮಾತನಾಡಿದರು. ನೆಹರು ಉದ್ಯಾನವನಕ್ಕೆ ಸಾರ್ವಜನಿರು ಮತ್ತು ಬೇರೆ ಬೇರೆ ಊರಿಗೆ ಹೋಗುವ ಪ್ರಯಾಣಿಕರು ಪ್ರಯಾಣಿಕರು ವಿಶ್ರಾಂತಿ ಪಡೆಯಲು ಉದ್ಯಾನಕ್ಕೆ ಬರುತ್ತಾರೆ. ವಯಸ್ಸಾದ ವೃದ್ಧರು, ಹಿರಿಯ ನಾಗಕರಿಕರು ಉದ್ಯಾನವನದಲ್ಲಿ ವಾಯು ವಿಹಾರಕ್ಕೆ, ವ್ಯಾಯಮಕ್ಕೆ ಬರುತ್ತಾರೆ. ಆದರೆ ಈ ಉದ್ಯಾನವನದಲ್ಲಿ ಸ್ವಚ್ಛತೆ ಇಲ್ಲದೆ ಮತ್ತು ವ್ಯಾಯಾಮ ಸಲುವಾಗಿ ಹಾಕಿರುವ ಎಲ್ಲಾ ಸಾಮಾಗ್ರಿಗಳು ಸಂಪೂರ್ಣವಾಗಿ ಹಾಳಾಗಿರುತ್ತವೆ. ಹಗಲು-ರಾತ್ರಿ ಈ ಉದ್ಯಾನವನದಲ್ಲಿ ಕುಡುಕರ ಹಾವಳಿ ಮತ್ತು ಅನೈತಿಕ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿದೆ. ಇದರ ಬಗ್ಗೆ ಯಾವುದೇ ಇಲ್ಲಾಖೆಯ ಅಧಿಕಾರಿಗಳು ಕ್ರಮವಹಿಸುತ್ತಿಲ್ಲ. ಈ ಉದ್ಯಾನವನದಲ್ಲಿ ಸ್ವಚ್ಛತೆ ಇಲ್ಲದೆ ಕಲುಷಿತ ವಾತವರಣ ಉಂಟಾಗಿದೆ ಮತ್ತು ಈ ಉದ್ಯಾನವನಕ್ಕೆ ಬಂದಿರುವ ಸಾರ್ವಜನಿಕರು, ಪ್ರಯಾಣಿಕರು ಆನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಈ ಉದ್ಯಾನವನದಲ್ಲಿ ಕುಡುಕರ ಮಧ್ಯಪಾನ ಕುಡಿದ ಬಾಟಲ್‌ಗಳು, ಇತರೆ ಅನೈತಿಕ ಚಟುವಟಿಕೆಗೆ ಉಪಯೋಗಿಸುವ ವಸ್ತುಗಳು ಕಾಣುತ್ತವೆ. ಉದ್ಯಾನವನದ ಸುತ್ತಲು ಸರಿಯಾಗಿ ಬೇಲಿ ವ್ಯವಸ್ಥೆ ಇರುವದಿಲ್ಲ. ಕೂಡಲೇ ನಗರಸಭೆ ಅಧಿಕಾರಿಗಳು ಈ ಉದ್ಯಾನವನ್ನು ಸ್ಥಳಪರಿಶಿಲನೆ ಮಾಡಿ, ಇದರಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳನ್ನು ತಡೆಗಟ್ಟಬೇಕು. ಉದ್ಯಾನವನದ ಸ್ವಚ್ಚತೆಯನ್ನು ಕಾಪಾಡಬೇಕು ಮತ್ತು ವ್ಯಾಯಾಮಕ್ಕೆ ಉಪಯೋಗಿಸುವ ಸಾಮಾಗ್ರಿಗಳನ್ನು ಸರಿಪಡಿಸಬೇಕೆಂದು ಮತ್ತು ಸಂಜೆ ೬.೦೦ ಗಂಟೆಯ ನಂತರ ಉದ್ಯಾನವನದ ಭದ್ರತೆಯ ಗೇಟ್‌ಗೆ ಬೀಗಹಾಕಬೇಕು ಮತ್ತು ಒಬ್ಬ ಕಾವಲುಗಾರರನ್ನು ನೇಮಿಸಬೇಕೆಂದು ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ, ಉಪಾಧ್ಯಕ್ಷರಾದ ವಿ ಪ್ರಕಾಶ್. ಗೌರವಾಧ್ಯಕ್ಷರಾದ ಮಾಂತಗೊಂಡ ಬಸವರಾಜ್, ನಗರ ಘಟಕ ಅಧ್ಯಕ್ಷರಾದ ನಾಗರಾಜ್ ಐಲಿ, ಉಪಾಧ್ಯಕ್ಷರಾದ ವೆಂಕಟೇಶ್ ಜಾದವ್, ಕಾರ್ಯದರ್ಶಿಗಳಾದ ವೆಂಕಟೇಶ್ ದಂಡಿನ್, ಗೌರವ ಅಧ್ಯಕ್ಷರು ಕೊಟ್ರೇಶ ದಂಡಿನ್, ಸಹಕಾರ್ಯದರ್ಶಿಗಳಾದ ಚಂದ್ರಶೇಖರ್ ನಾಯಕ್, ಖಜಾಂಚಿ ಶಿವಪ್ಪ ನಾಯಕ ಮತ್ತಿತರರು ಉಪಸ್ಥಿತರಿದ್ದರು.