ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಜಾಗ ಕೊಟ್ಟು ಪರಿಸರ ಮತ್ತು ಜನರ ಆರೋಗ್ಯ ಹಾನಿಯಾಗಲು ಅವಕಾಶ : ಸುಳಿಬಾವಿ
ಕೊಪ್ಪಳ:ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಉದ್ದೇಶಿಸಿರುವ ಯೋಜನೆಗೆ ಈಗಾಗಲೇ ಮೂರು ಪರಮಾಣು ವಿದ್ಯುತ್ ಸ್ಥಾವರಗಳಿಗೆ ಜಾಗ ಕೊಟ್ಟು ಪರಿಸರ ಮತ್ತು ಜನರ ಆರೋಗ್ಯ ಹಾನಿಯಾಗಲು ಅವಕಾಶ ಮಾಡಿಕೊಟ್ಟ ಕರ್ನಾಟಕ ರಾಜ್ಯ ಮತ್ತೊಮ್ಮೆ ಅಂಥದ್ದೇ ಯೋಜನೆಗೆ ಜಾಗ ಕೊಡಲು ಸಿದ್ಧವಾಗಿದೆ ಎಂದು ಪ್ರಗತಿ ಪರ ಹೋರಾಟಗಾರರಾದ ಬಸವರಾಜ ಸೂಳಿಬಾವಿ ಅವರು ಹೇಳಿದರು.
ಕೊಪ್ಪಳದ ಅರಸಿನಕೇರಿ ಗ್ರಾಮಕ್ಕೆ ಬೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿ ಮಾತನಾಡಿದ ಅವರು ಈಗಾಗಲೇ ಅಸಂಖ್ಯೆ ಕಾರ್ಖಾನೆಗಳ ಆಡಂಗೋಲದ ನೆಲವಾಗಿ ದೊಡ್ಡ ಪ್ರಮಾಣದ ಪರಿಸರ ಹಾನಿ ಜನರ ಆರೋಗ್ಯದ ಹಾನಿಯನ್ನು ಅನುಭವಿಸುವ ಜಿಲ್ಲೆಯಾಗಿರುವ ಕೊಪ್ಪಳಕ್ಕೆ ಈ ಅನಾಹುತ ಹೆಚ್ಚಿಸುವ ಪರಮಾಣು ವಿದ್ಯುತ್ ಸ್ಥಾವರ ವಕ್ಕರಿಸಲು ತಯಾರಾಗಿ ನಿಂತಿದೆ, ಈ ಬಾರಿ ಅದಕ್ಕೆ ಬಲಿಯಾಗಲು ಸಿದ್ದವಾಗಿರುವುದು ಕೊಪ್ಪಳ ಜಿಲ್ಲೆಯ ನೆಲ ಎಂದರು.
ಅದೂ ಮುಖ್ಯವಾಗಿ ರಾಜ್ಯ ಸರ್ಕಾರವೇ ವನ್ಯ ಜೀವಿ ಸುರಕ್ಷಿತ ಧಾಮವೆಂದು ಘೋಷಣೆ ಮಾಡಿರುವ ಪ್ರದೇಶದಲ್ಲಿ ಮತ್ತು ಐತಿಹಾಸಿಕ ಪ್ರದೇಶವೆಂದು ಹೆಸರಾದ ಪ್ರದೇಶದಲ್ಲಿ ಈ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಸರ್ವೇ ಮಾಡಿ 1200 ಎಕರೆ ಭೂಮಿ ಸಿದ್ಧವಿದೆ ಎಂಬ ವರದಿ ಒಪ್ಪಿಸಲಾಗಿದೆ ಎಂದರು.
ಇದರ ವಿರುದ್ಧ ಕೊಪ್ಪಳ ಜಿಲ್ಲೆಯ ಪ್ರಗತಿಪರ ಮತ್ತು ಪರಿಸರವಾದಿ ಮತ್ತು ಪ್ರಜ್ಞಾವಂತರಾದ ಗೆಳೆಯರ, ಹೋರಾಟಗಾರರ ಜೊತೆ ಚರ್ಚೆ ನಡೆಸಿ ಹೋರಾಟದ ರೂಪುರೇಷ ಸಿದ್ಧಪಡಿಸುತ್ತೇವೆ ಎಂದರು.
ಈ ಸಂರ್ಭದಲ್ಲಿ ಟಿ. ರತ್ನಾಕರ, ಶುಕ್ರಾಜ ತಾಳಕೇರಿ, ಮುತ್ತು ಬಿಳೆಯಲಿ, ಡಿ. ಎಚ್. ಪೂಜಾರ, ಕೆ. ಬಿ. ಗೋನಾಳ, ಮತ್ತು ಗಂಗಾವತಿಯ ವಿಜಯ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.