ದಿವ್ಯಾಂಗರಿಗೆ ಆತ್ಮವಿಶ್ವಾಸ, ಪ್ರೀತಿ ತುಂಬವ ಅಗತ್ಯವಿದೆ -ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿ
’ಸಕಲಚೇತನ’ ’ವಿಕಲಚೇತನರ ನಡೆ ಸಕಲಚೇತನರಕಡೆ’-ಜಾಗೃತಿಜಾಥಾ ಸಮಾರೋಪ ಸಮಾರಂಭ
ಶ್ರೀ ಗವಿಮಠದ ಮಹಾದಾಸೋಹದಆವರಣದಲ್ಲಿ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಮಾರೋಪ ಸಮಾರಂಭದಲ್ಲಿಮುಖ್ಯಅತಿಥಿಗಳಾಗಿ ಮಾತನಾಡಿದ ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ನಿರ್ದೆಶಕರಾದ ಎಂ.ಪುಷ್ಪಾವತಿಅವರು ಮಾತನಾಡಿಯಾರಿಗೆದೈಹಿಕವಾಗಿ ಸ್ವಲ್ಪತೊಂದರೆಇರುತ್ತೆಅವರನ್ನು ದಿವ್ಯಾಂಗರುಎನ್ನುವರು. ಮಗು ಹುಟ್ಟಿದತಕ್ಷಣ ಭಾಷಿಕ ವಿಕಲಚೇತನವಾಗಿರುತ್ತೆ,ತದನಂತರ ಹಂತ ಹಂತವಾಗಿ ಮಾತನಾಡುವುದರ ಮೂಲಕ ಸಕಲಚೇನವಾಗುತ್ತದೆ. ೨೧ ಪ್ರಕಾರದ ವಿಕಲಚೇತನರಿದ್ದಾರೆ. ಮಾತು ಮತ್ತುಕಿವಿಗೆ ಸಂಬಂಧಿಸಿದವರು ೧೩ ಪ್ರಕಾರಇದ್ದಾರೆ. ಕಿವಿಯಲ್ಲಿ ಕಿವು ಬರುವುದು.ಗುಂಯ್ಯಎಂದು ಶಬ್ದ ಬರುವದುಕಿವಿಯ ವಿಕಲಚೇತನದ ಲಕ್ಷಣಗಳು ಇವರುತಪಾಸಣೆಗೆ ಒಳಗಾಗಬೇಕು ಎಂದರು. ನಮ್ಮಸಂಸ್ಥೆಯಉದ್ಧೇಶ ವಿಕಲಚೇನರನ್ನು ಸಕಲಚೇತನರನ್ನಾಗಿ ಮಾಡುವದಾಗಿದೆ.ಪ್ರತಿ ವರ್ಷಜನಿಸುವ ಮಕ್ಕಳಲ್ಲಿ ೭೫ ಸಾವಿರ ಜನಿಸುವ ಮಕ್ಕಳು ಮಾತಿನ ಸಮಸ್ಯೆಯಿಂದ ಬಳಲುತ್ತಾರೆ. ಇಂತಹ ಮಕ್ಕಳಿಗೆ ಚಿಕಿತ್ಸೆಅವರ ಸಮಸ್ಯೆ ಪರಿಹರಿಸಬಹುದಾಗಿದೆಎಂದರು.
ನಂತರ ಹುಬ್ಬಳ್ಳಿ ಲಿಂಬ್‌ಸೆಂಟರ್‌ನ ಮಹೇಂದ್ರಸಿಂಘ್ವಿ ಮಾತನಾಡಿ ಶ್ರೀ ಗವಿಸಿದ್ಧೇಶ್ವರ ಜಾಥ್ರಾಅತ್ಯಂತ ಪ್ರಸಿದ್ಧವಾಗಿದೆ. ಈ ಮಹತ್ವದಜಾಗೃತಿಜಾಥಾಕಾರ್ಯಕ್ರಮಕ್ಕೆಅತ್ಯಂತ ಪ್ರೀತಿಯಿಂದ ಕೈಜೋಡಿಸಿದ್ದೆವೆ. ಪರಮ ಪೂಜ್ಯರು ಹೇಳುವಂತೆ ಹರ ಹರ ಮಹಾದೇವಎನ್ನುವಜಾತ್ರೆಯಾಗಿರದೆಜನರ ಸಮಸ್ಯೆಗಳಿಗೆ ಅನೂಕೂಲವಾಗುವ ಸ್ಪಂದಿಸುವ ಜಾತ್ರಾ ನಮ್ಮದಾಗಿದೆಎಂದು ಪೂಜ್ಯರ ನುಡಿಗಳನ್ನು ಸ್ಮರಿಸಿದರು. ಮೊದಲುಕೃತಕ ಕೈಕಾಲುಗಳನ್ನು ಜೈಪುರದಿಂದತರುವದಕ್ಕೆ ಸಾಕಷ್ಟು ಸಮಸ್ಯೆಯಾಗುತ್ತಿತ್ತು. ಈಗ ಉತ್ತರಕರ್ನಾಟಕದ ಹುಬ್ಬಳ್ಳಿಯಲ್ಲಿ ಈ ಸಂಸ್ಥೆಯಿಂದ ಸಮಸ್ಯೆಗಳಿರುವ ಜನರಿಗೆ ಬಹಳಷ್ಟು ಅನುಕೂಲವಾಗಲಿದೆಎಂದರು. ಇದುಒಂದು ಪರಮ ಪೂಜ್ಯರ ಮೌನಕ್ರಾಂತಿಯಾಗಿದೆ. ಈ ಸೇವೆಗೆ ನಮ್ಮ ಸಂಸ್ಥೆಯ ಸಹಕಾರ ಸದಾಇರುತ್ತದೆಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತಾ ಕಾಶ್ಮೀರ ಕಣಿವೆಒಂದು ಪುಟ್ಟ ಹಳ್ಳಿಯಲ್ಲಿ ಮಾನಸಿಂಗ್ ಮತ್ತು ಶಕ್ತಿ ದೇವತೆ ದಂಪತಿಗಳಿಗೆ ಒಂದುಗಂಡು ಮಗು ಜನಿಸುತ್ತದೆ.ಎಲ್ಲರಿಗೂ ಮಗು ಜನಿಸಿದ ಸಂತಸವಾಗುತ್ತದೆಆದರೆಅವರಿಗೆ ಮಗು ಜನಿಸಿದಾಗ ದಂಪತಿಗಳಿಗೆ ಬಹಳ ದುಃಖವಾಗುತ್ತದೆ.ಕಾರಣ ಮಗುವಿಗೆ ಎರಡು ಕೈಗಳಿರುವುದಿಲ್ಲ, ಶಾಲೆ ಕಳಿಸುವುದಕ್ಕೆ ರಸ್ತೆಗಳಿಲ. ತಂದೆ ಬಹಳ ಬಡವ.ಇಂತಹ ಮಗುವಿಗೆ ಬಿಲ್ವಿದ್ಯೆ ಕಲಿಸುತ್ತಾರೆ ಮುಂದೆ ಆ ಮಗು ಪ್ಯಾರಾಒಲಂಪಿಕ್‌ಗೇಮ್ಸ್‌ನಲ್ಲಿ ಭಾರತಕ್ಕೆಎರಡುಚಿನ್ನದ ಪದಕವನ್ನು ತಂದುಕೊಡುತ್ತಾಳೆ. ಅವಳೇ ಶೀತಲದೇವಿ,ಕಣ್ಣಿಲ್ಲದವರುಭಿಕ್ಷುಕರಾದವರಿದ್ದಾರೆಆದರೆಕಣ್ಣಿಲ್ಲದಿದ್ದರೂಅಂತಹಸಾವಿರಾರು ಮಕ್ಕಳಿಗೆ ಕಣ್ಣಾದವರು ಪುಟ್ಟರಾಜ ಗವಾಯಿಗಳು.ಅಂತಹ ದಿವ್ಯಾಂಗರಿಗೆಆತ್ಮವಿಶ್ವಾಸ, ಪ್ರೀತಿತುಂಬವ ಅಗತ್ಯವಿದೆಎಂದು ಹೇಳಿದರು.
ಜಾಗೃತಿಜಾಥಾ ನಿಮಿತ್ತ ಹಮ್ಮಿಕೊಂಡ ಭಾ?ಣ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದಜಗದೀಶ್‌ಜಿ.ಎಚ್,ಭಾರತೀಯರೆಡ್‌ಕ್ರಾಸ್ ಸಂಸ್ಥೆಯಚೇರಮನ್ ವಿಜಯಕುಮಾರ ಪಾಟೀಲ, ಹುಬ್ಬಳ್ಳಿಯ ಮಹಾವೀರ ಲಿಂಬ್ ಸೆಂಟರ್‌ನ ಮಹೇಂದ್ರ ಸಿಂಘ್ವಿ ಶಾಲಾಶಿಕ್ಷಣ ಮತ್ತು ಸಾಕ್ಷರತಾಇಲಾಖೆಯಕ್ಷೇತ್ರ ಶಿಕ್ಷಣಾಧಿಕಾಗಳಾದ ಶಂಕ್ರಯ್ಯ.ಟಿ.ಎಸ್. ಹಾಗೂ ವಿವಿಧ ಇಲಾಖೆ, ಮತ್ತು ಸಂಘ-ಸಂಸ್ಥೆಗಳ ಪದಾದಿಕಾರಿಗಳು, ಶಾಲಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರು ಸಾವಿರಾರು ವಿದ್ಯಾರ್ಥಿಗಳುಜಾಥಾದಲ್ಲಿ ಭಾಗವಹಿಸಿದ್ದರು. ಶಕುಂತಲಾ ಬಿನ್ನಾಳ ಅವರು ಪ್ರಾರ್ಥಿಸಿದರು. ಶರಣಬಸಪ್ಪ ಬಿಳಿಯೆಲೆ ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿದರುಎಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಶೇಷ ಸೂಚನೆ: ಮುಂದಿನ ವರ್ಷಜಾಗೃತಿಜಾಥಾ ನಡಿಗೆಕಾರ್ಯಕ್ರಮದ ವಿಷಯವನ್ನು ವಿದ್ಯಾರ್ಥಿಗಳು ಗುರುತಿಸಿ ಸೂಚಿಸಲು ತಿಳಿಸಲಾಗಿದೆ. ಸೂಕ್ತವಾದ ವಿಷಯ ಸೂಚಿಸಿದ ವಿದ್ಯಾರ್ಥಿಯಿಂದಲೇ ೨೦೨೬ರ ಜಾಗೃತಿಜಾಥಾ ಚಾಲನೆ ನೀಡುವಅವಕಾಶವನ್ನುಕಲ್ಪಿಸಲಾಗುವುದು. ವಿದ್ಯಾರ್ಥಿಗಳು ಶ್ರಿ ಗವಿಮಠದಮೋಬೈಲ್‌ವಾಟ್ಸಾಪ ಸಂಖ್ಯೆಗೆ೯೯೮೦೮೯೯೨೧೯ಅಥವಾಇಮೇಲ್‌ಗೆsಡಿgಚಿvimಚಿಣh@gmಚಿiಟ.ಛಿom <mಚಿiಟಣo:sಡಿgಚಿvimಚಿಣh@gmಚಿiಟ.ಛಿom>ತಾವು ಮಾಹಿತಿಗಳನ್ನು ಕಳುಹಿಸಬಹುದಾಗಿದೆಎಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಕಲಚೇತನ’ ’ವಿಕಲಚೇತನರ ನಡೆ ಸಕಲಚೇತನರ ಕಡೆ’-ಜಾಗೃತಿಜಾಥಾ Koppal Gavimath Jatre 2025 Drone Visuals
ನಾಲ್ಕು ದಿಕ್ಕು ಕನ್ನಡ ದಿನಪತ್ರಿಕೆ
Subscribe our Channel
https://youtube.com/@kannadanet