ವೀರಬಸಪ್ಪ ಪಟ್ಟಣಶೆಟ್ಟಿಯವರ ಹಾಡು ಜಾತ್ರಾ ಮಹೋತ್ಸವದಲ್ಲಿ ಬಿಡುಗಡೆ
ಕೊಪ್ಪಳ : ಕೊಪ್ಪಳದ ಆರಾಧ್ಯ ದೈವ, ದಕ್ಷಿಣ ಭಾರತದ ಕುಂಭಮೇಳ ಎಂದೆ ಪ್ರಸಿದ್ಧವಾದೇ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ನಡೆಯುವ ಹಿನ್ನೆಲೆಯಲ್ಲಿ ಕೊಪ್ಪಳದ ಶ್ರೀ ಅಭಿನವ ಸಂಗೀತ ಸಂಸ್ಥೆಯಿಂದ ಈ ವರ್ಷ ಕೊಪ್ಪಳ ತಾಲೂಕಿನ ಇರಕಲ್ ಗಡಾ ಗ್ರಾಮದ ಹಿರಿಯರಾದ ವೀರಬಸಪ್ಪ ಪಟ್ಟಣಶೆಟ್ಟಿ ರವರು ಹಿರಿ ವಯಸ್ಸಿನಲ್ಲಿ ತಾವೇ ರಚಿಸಿದ ಸಾಹಿತ್ಯ ದ ಹಾಡನ್ನು ಅವರ ಧ್ವನಿಯಲ್ಲಿ ಹಾಡಲಿದ್ದಾರೆ.
ಹಿರಿಯ ಕಲಾವಿದ ಭಾಷಾ ಹಿರೇಮನಿ ಯವರ ಸಂಗೀತ ನಿರ್ದೇಶನದಲ್ಲಿ ಈಗಾಗಲೇ ಒಂದು ಹಾಡಿನ ಧ್ವನಿಮುದ್ರಣಗೊಳಿಸಲಾಗಿದೆ, ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಈ ಹಾಡನ್ನು ಬಿಡುಗಡೆಗೊಳಿಸುವರು.
ಈ ಭಾಗದಲ್ಲಿ ಆರಾಧ್ಯ ದೈವ ಶ್ರೀ ಗವಿಸಿದ್ದೇಶ್ವರನ ಬಗ್ಗೆ ಭಕ್ತಿಯ ಪರಾಕಾಷ್ಠೆಯನ್ನು ಹೊಂದಿದ್ದು ಪ್ರತಿವರ್ಷ ಜನತೆ ಒಂದಿಲ್ಲ ಒಂದು ಸೇವೆಯನ್ನು ಜಾತ್ರೆಯಲ್ಲಿ ಸಲ್ಲಿಸಿ ಗವಿಸಿದ್ದನ ಕೃಪೆಗೆ ಪಾತ್ರರಾಗುತ್ತಾರೆ.
ಕೊಪ್ಪಳ ಶ್ರೀ ಗವಿಸಿದ್ದೇಶ್ವರನ ಜಾತ್ರೆ ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ಧ ಹೊಂದಿದೆ, ನೀವು ಬನ್ನಿ ಅಜ್ಜನ ಜಾತ್ರೆಗೆ.