ಗವಿಮಠದ ಮಹಾದಾಸೋಹಕ್ಕೆ ಹರಿದು ಬರುತ್ತಿರುವರೊಟ್ಟಿ ಹಾಗೂ ದವಸ,ಧಾನ್ಯಗಳು.
ಕೊಪ್ಪಳ : ಶ್ರೀಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ಜರುಗಲಿರುವ ಮಹಾದಾಸೋಹಕ್ಕಾಗಿಸದ್ಭಕ್ತರಿಂದದವಸ-ಧಾನ್ಯ, ಕಟ್ಟಿಗೆ, ರೊಟ್ಟಿಗಳನ್ನು ಶ್ರೀಮಠಕ್ಕೆ ತಂದುಅರ್ಪಿಸುತಿದ್ದಾರೆ. ಇಂದುಕೊಪ್ಪಳತಾಲೂಕಿನಗುಡದಳ್ಳಿ ಗ್ರಾಮದ ಸದ್ಭಕ್ತರಿಂದ ೩೬ ಪಾಕೆಟ್ ನೆಲ್ಲು, ಮೆಕ್ಕೆ ಜೋಳ ೪೨ ಪಾಕೆಟ್, ೧೪ ಪಾಕೆಟ್ ಜೋಳ, ೨೨ ಪಾಕೇಟ್‌ಅಕ್ಕಿ, ೦೯ ಸಜ್ಜಿ, ಒಣ ಮೆಣಸಿನಕಾಯಿ ೩ ಪಾಕೆಟ್, ೨೦೦೦ರೊಟ್ಟಿ ಮತ್ತುಇತರದವಸ ಧಾನ್ಯಗಳನ್ನು ಟ್ರ್ಯಾಕ್ಟರ್ ಹಾಗೂ ಲಘು ವಾಹನಗಳ ಮೂಲಕ ಭಕ್ತಿ ಭಾವ,ಸಡಗರದೊಂದಿಗೆ ಶ್ರೀಗವಿಮಠಕ್ಕೆ ಆಗಮಿಸಿ ಮಹಾದಾಸೋಹಕ್ಕೆ ಸಲ್ಲಿಸಿದರು.ಇದರಿಂದಾಗಿ ಗವಿಮಠದಲ್ಲಿ ರೊಟ್ಟಿಗಳ ಸಪ್ಪಳ ಆರಂಭವಾಗಿದೆ. ದಾನಿಗಳಿಗೆ ಪೂಜ್ಯರು ಆಶಿರ್ವದಿಸಿದ್ದಾರೆ.