ಜಾತ್ರೆಯ ಕಾರ್ಯಕ್ರಮ ಜನರಿಗೆ ತಲುಪಿಸುವಲ್ಲಿ ಮಾಧ್ಯಮದ ಪಾತ್ರ ದೊಡ್ಡದು; ಡಾ. ಜಿ. ಸುರೇಶ

0

Get real time updates directly on you device, subscribe now.


ದಕ್ಷೀಣ ಭಾರತದ ಕುಂಭಮೇಳವೆಂದು ಪ್ರಖ್ಯಾತಗೊಂಡಿರುವ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ಅತೀ ಹೆಚ್ಚು ಜನರು ಸೇರುವುದು ಜಾತ್ರೆಯ ಬಹುಮುಖ್ಯ ವಿಶೇಷತೆಯಾಗಿದೆ. ಜಾತ್ರೆಯ ಎಲ್ಲ ಧಾರ್ಮಿಕ, ಸಂಪ್ರದಾಯಿಕ ಹಾಗೂ ಸಮಾಜಿಕ ಕಾರ್ಯಕ್ರಮವನ್ನು ಜನರಿಗೆ ತಲುಪಿಸುವುವಲ್ಲಿ ಮಾಧ್ಯಮಗಳ ಪಾತ್ರ ಬಹಳ ದೊಡ್ಡದು ಎಂದು ಕೊಪ್ಪಳ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಜಿ. ಸುರೇಶ ಅಭಿಪ್ರಾಯಪಟ್ಟರು. ನಗರರದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ದಿನಾಂಕ ೧೦.೦೧.೨೫ರಂದು ಬೆಳಗ್ಗೆ ೯:೩೦ಕ್ಕೆ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ-೨೦೨೫ರನಿಮಿತ್ಯ ಹಮ್ಮಿಕೊಂಡ ಮಾಧ್ಯಮ ಕೇಂದ್ರ ಉಧ್ಘಾಟನೆ ಕಾರ್ಯಕ್ರಮದಲ್ಲಿ ಮಾಧ್ಯಮ ಕೇಂದ್ರವನ್ನು ಉಧ್ಘಾಟಿಸಿ ಮಾತನಾಡಿದ ಅವರುಶ್ರೀ ಗವಿಸಿದ್ಧೇಶ್ವರ ಜಾತ್ರೆ ಉತ್ತರ ಕರ್ನಾಟಕದಲ್ಲಿ ಅಷ್ಟೆ ಅಲ್ಲದೆ ದೇಶ-ವಿದೇಶಗಳಲ್ಲಿ ಪ್ರಖ್ಯಾತಿಯನ್ನು ಪಡೆದಿದೆ ಎಂದು ಹೇಳಿದರು.ಜಾತ್ರಾ ಸಮಯದಲ್ಲಿ ಜರಗುವ ವಿವಿಧ ಕಾರ್ಯಕ್ರಮಗಳ ಮಾಹಿತಿ ಜನರಿಗೆ ತಲುಪಿಸುವ ಜವಾಬ್ದಾರಿ ಮಾಧ್ಯಮದವರದಾಗಿದೆ.ಈ ಅಳಿಲು ಸೇವೆಯ ಮೂಲಕ ನಾವೆಲ್ಲರು ಶ್ರೀ ಗವಿಸಿದ್ಧೇಶ್ವರ ಕೃಪೆಗೆ ಪಾತ್ರರಾಗೋಣ ಎಂದರು. ಮಹಾವಿದ್ಯಾಲಯದ ಪಾಚಾರ್ಯರಾದ ಡಾ. ಚನ್ನಬಸವ ಮಾತನಾಡಿದರು. ವಿವಿಧ ಪತ್ರಿಕಾ ಮತ್ತು ದೂರದರ್ಶನ ಮಾಧ್ಯಮದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗಂಗಾಧರ ಸೊಪ್ಪಿಮಠ ಸ್ವಾಗತಿಸಿ, ನಿರೂಪಿಸಿದರು.

Get real time updates directly on you device, subscribe now.

Leave A Reply

Your email address will not be published.

error: Content is protected !!