’ವಿಕಲಚೇತನ’ನ ನಡೆ.. ’ಸಕಲಚೇತನ’ದ ಕಡೆ.

0

Get real time updates directly on you device, subscribe now.

ದಿನಾಂಕ ೧೧.೦೧.೨೦೨೫ ನಾಳೆ ಬೆಳಗ್ಗೆ ೮:೦೦ ಗಂಟೆಗೆ ಜಾಗೃತಿ ಜಾಥಾ ಕಾರ್ಯಕ್ರಮ

೧) ಉಚಿತವಾಗಿ ಕೃತಕ ಅಂಗಾಂಗ-ಕೈಕಾಲು ಜೋಡಣೆ
೨) ಶ್ರವಣ ಸಾಧನ (ವಿದ್ಯಾರ್ಥಿಗಳಿಗೆ ಮಾತ್ರ)
ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ ನಿಮಿತ್ಯ ಪ್ರತಿ ವ?ವೂ ಒಂದಿಲ್ಲೊಂದು ಸಮಾಜಮುಖಿ ಜಾಗೃತಿ ಮತ್ತು ಅದರ ಅನು?ನ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಬರಲಾಗುತ್ತದೆ. ಈ ವ? ವಿಕಲಚೇತನರಿಗೆ ಸಕಲಚೇತನ ಭಾಗ್ಯ ಕರುಣಿಸಲು ಶ್ರೀ ಮಠವೂ ತೀರ್ಮಾನಿಸಿದೆ.
ಕೈ, ಕಾಲು ಹಾಗೂ ಶ್ರವಣ ದೋ? ಇರುವವರಿಗೆ ಅಗತ್ಯ(ಶ್ರವಣ ಸಾಧನ ಕೇವಲ ವಿದ್ಯಾರ್ಥಿಗಳಿಗೆ ಮಾತ್ರ ಉಚಿತವಾಗಿ ನೀಡಲಾಗುವುದು.) ಸಾಧನಗಳನ್ನು ನೀಡುವ ಮೂಲಕ ಅವರನ್ನು ಸಕಲಚೇತನರನ್ನಾಗಿ ಮಾಡಲು ಯೋಜನೆಯನ್ನು ರೂಪಿಸಿದೆ.
ಕೃತಕ ಅಂಗಾಂಗ ಜೋಡಣೆ – ಇದೊಂದು ಕೃತಕ ಅಂಗಾಂಗ ಜೋಡಣೆಯ ಸಂಕಲ್ಪದ ಅಭಿಯಾನವಾಗಿದ್ದು. ಪೋಲಿಯೋ, ರಸ್ತೆ ಅಪಘಾತ ಹಾಗೂ ಬೇರೆ ಬೇರೆ ಕಾರಣಗಳಿಂದ ಕೈ ಕಾಲು ಕಳೆದುಕೊಂಡು ಅಂಗ ವೈಕಲ್ಯದಿಂದ ಬಳಲುತ್ತಿರುವ, ಸ್ವಾವಲಂಬಿ ಬದುಕು ಸಾಗಿಸಲು ಕ?ದ ದಿನಗಳನ್ನು ಎದುರಿಸುತ್ತಿರುವ ವ್ಯಕ್ತಿಗಳಿಗೆ ಆಸರೆಯಾಗುವ ಅಭಿಯಾನ ಇದಾಗಿದೆ.
ಅಂಗ ವೈಕಲ್ಯಕ್ಕೆ ತುತ್ತಾಗಿರುವ, ಕೃತಕ ಕೈ/ಕಾಲು ಅವಶ್ಯಕತೆ ಇರುವವರಿಗೆ ಕೃತಕ ಕೈ/ಕಾಲು ಜೋಡಿಸುವ ಕಾರ್ಯಕ್ರಮವನ್ನು ಶ್ರೀ ಗವಿಮಠ, ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ, ಶ್ರೀ ಮಹಾವೀರ ಲಿಂಬ್ ಸೆಂಟರ್, ಹುಬ್ಬಳ್ಳಿ ಮತ್ತು ಶ್ರೀ ಗವಿಸಿದ್ದೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಕೊಪ್ಪಳ ಇವರಗಳ ಸಹಯೋಗದೊಂದಿಗೆ ಬೃಹತ್ ಉಚಿತ ಕೃತಕ ಕೈ/ಕಾಲು ಜೋಡಣಾ ಶಿಬರದ ನಡೆಸಲಿದೆ. ಅಂಗ ವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಕೃತಕ ಕೈ/ಕಾಲು ಅಳವಡಿಸಿ ಅವರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯ ಜೀವನಕ್ಕೆ ಊರುಗೋಲು ಆಗುವ ಸಂಕಲ್ಪ ಮಾಡಲಾಗಿದೆ.
ಶ್ರವಣ ಸಾಧನ ವಿತರಣೆ -ಶ್ರವಣ ದೋ? ಅಥವಾಶ್ರವ್ಯ ದೋ?ವುವಿದ್ಯಾರ್ಥಿಗಳು ಕಲಿಕೆಯಲ್ಲಿಹಿಂದುಳಿಯಲುಪ್ರಮುಖ ಕಾರಣವಾಗಿದೆ ಎಂಬುದನ್ನು ಅರಿತಶ್ರೀಮಠವು ಅವರಶ್ರವಣ ದೋ?ನಿವಾರಣೆಮಾಡಿ, ಕಲಿಕಾ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಶ್ರವಣ ಸಾಧನವನ್ನು ಉಚಿತವಾಗಿ ನೀಡಲಾಗುತ್ತದೆ.
ಶ್ರೀ ಗವಿಮಠ, ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ಜಿಲ್ಲಾ ಶಾಖೆ ಮತ್ತು ಶ್ರೀ ಗವಿಸಿದ್ದೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಸಹಯೋಗದೊಂದಿಗೆ ಬೃಹತ್ ಉಚಿತ ಶ್ರವಣ ಸಾಧನ ವಿತರಣೆ ಮಾಡುವ ಮೂಲಕ ವಿದ್ಯಾರ್ಥಿಗಳ ಕಲಿಕೆಯಲ್ಲಿ ಆಸಕ್ತಿ ಮೂಡಿಸಿ ಅವರ ಶೈಕ್ಷಣಿಕ ಬಲವರ್ಧನೆ ಮಾಡುವ ಸಂಕಲ್ಪವನ್ನು ಇಟ್ಟುಕೊಳ್ಳಲಾಗಿದೆ.
ಅಂಗ ವೈಕಲ್ಯ ಹೊಂದಿರುವ ಶೇಕಡ ೭೦ ರ? ವ್ಯಕ್ತಿಗಳು ಗ್ರಾಮೀಣ ಭಾಗದವರಾಗಿದ್ದು, ಅಂಗ ವಿಕಲತೆಯಿಂದಾಗಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ಸಾಮಾಜಿಕ ಮತ್ತು ಆರ್ಥಿಕ ಜೀವನ ಉತ್ತಮ ಹೊಂದಲು, ಸ್ವಾವಲಂಬನೆಯಿಂದ ಜೀವನ ನಡೆಸಲು ಈ ಕೃತಕ ಅಂಗಾಂಗ ಜೋಡಣೆಯು ನಿರ್ಣಾಯಕ ಪಾತ್ರವಹಿಸುತ್ತದೆ. ಈ ಅಭಿಯಾನದ ಭಾಗವಾಗಿ ವಿದ್ಯಾರ್ಥಿಗಳಲ್ಲಿ ವಿಕಲ ಚೇತನರ ಬದುಕು ಬವಣೆಗಳು, ಅವರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅವರ ಪುನರ್ ಬಲನೆಗೆ ಆಸರೆಯಾಗಿ ನಿಲ್ಲುವ ಸಮಾಜದ ಜವಾಬ್ದಾರಿ ಕುರಿತು ಬೆಳಕು ಚೆಲ್ಲಲು ದಿನಾಂಕ ೪.೧.೨೦೨೫ ರ ಶನಿವಾರ ಶ್ರೀ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯದ ಆವರಣದಲ್ಲಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಪದವಿ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ವಿಕಲಚೇತನರು ’ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಮಾಜದ ಸ್ಪಂದನೆ’ ಎಂಬ ವಿ?ಯದ ಭಾ?ಣ ಸ್ಪರ್ಧೆಯನ್ನು ನಡೆಸಲಾಗಿತ್ತು.
ಈ ಅಭಿಯಾನದ ಭಾಗವಾಗಿ ದಿನಾಂಕ ೧೧.೦೧.೨೦೨೫ರ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಿಕ್ಷಣ ಇಲಾಖೆ, ಖಾಸಗಿ ಶಾಲೆಗಳ ಒಕ್ಕೂಟ, ವೈದ್ಯಕೀಯ ಮಹಾವಿದ್ಯಾಲಯಗಳು ಮತ್ತು ಪ್ಯಾರಾ ಮೆಡಿಕಲ್ ಕಾಲೇಜುಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸಾವಿರಾರು ವಿದ್ಯಾರ್ಥಿಗಳ ಜಾಗೃತಿ ನಡಿಗೆಯನ್ನು ಹಮ್ಮಿಕೊಳ್ಳಲಾಗಿದ್ದು ಅಂದು ಬೆಳಗ್ಗೆ ೮:೦೦ ಗಂಟೆಗೆ ತಾಲೂಕು ಕ್ರೀಡಾಂಗಣದಿಂದ ಹೊರಟು ಅಶೋಕ ವೃತ್ತ, ಗಡಿಯಾರ ಕಂಬದ ಮಾರ್ಗವಾಗಿ ಶ್ರೀ ಗವಿಮಠವನ್ನು ತಲುಪಲಿದೆ.
ಪ್ರತಿ ವ?ದಂತೆ ಈ ವ?ವೂ ಒಂದು ಸಾಮಾಜಿಕ ಕಳಕಳಿ ಹೊಂದಿರುವ ಮತ್ತು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಈ ಅಭಿಯಾನಕ್ಕೆ ತಾವೆಲ್ಲರೂ ಕೈ ಜೋಡಿಸಿ ವ್ಯಾಪಕ ಪ್ರಚಾರ ಮಾಡಿ ಸಮಸ್ಯೆ ಹೊಂದಿರುವ ವ್ಯಕ್ತಿಗಳಿಗೆ ಕೃತಕ ಅಂಗಾಂಗ ಜೋಡಣೆ ಮುಖಾಂತರ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡೋಣ.
ಶಿಬಿರ-ಜಾಗೃತಿ ಅಭಿಯಾನದಬಳಿಕ ಕೃತಕ ಅಂಗಾಂಗ ಜೋಡಣೆ ಮತ್ತು ಶ್ರವಣ ಸಾಧನೆ ವಿತರಣೆಗು ಮುನ್ನ ಆರೋಗ್ಯ ಶಿಬಿರವನ್ನು ನಡೆಸಿ, ಅಂಗಾಂಗ ಜೋಡಣೆ ಮತ್ತು ಶ್ರವಣ ಸಾಧನ ಅಗತ್ಯವಿರುವವರನ್ನು ಆಯ್ಕೆ ಮಾಡಲಾಗುತ್ತದೆ. ಇದಾದ ಮೇಲೆ ಅಗತ್ಯವಿದ್ದವರಿಗೆ ವಿತರಣೆ ಕಾರ್ಯಕ್ರಮವನ್ನು ಹಂತ ಹಂತವಾಗಿ ಆಯೋಜನೆ ಮಾಡಲಾಗುತ್ತದೆ ಎಂದು ಶ್ರೀ ಗವಿಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Get real time updates directly on you device, subscribe now.

Leave A Reply

Your email address will not be published.

error: Content is protected !!