ಕರುನಾಡ ಕಲ್ಪತರು ನಮ್ಮ ಕೊಪ್ಪಳ ಅಲ್ಬಮ್ ವಿಡಿಯೋ ಸಾಂಗ್ – ಗವಿಸಿದ್ದೇಶ್ವರ ಸ್ವಾಮಿಗಳಿಂದ ಬಿಡುಗಡೆ
ಕೊಪ್ಪಳ.೧೦: ಕೊಪ್ಪಳದ ಗವಿಮಠದ ಸ್ವಾಮಿಗಳಿಂದ ಕರುನಾಡ ಕಲ್ಪತರು ನಮ್ಮ ಕೊಪ್ಪಳ ಅಲ್ಬಮ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಈ ಅಲ್ಬಮ್ ವಿಡಿಯೋ ಸಾಂಗ್‌ನ್ನು ಬಿಡುಗಡೆಗೊಳಿಸಿ, ಕರುನಾಡ ಕಲ್ಪತರು ಕೊಪ್ಪಳ ಅಲ್ಬಮ್ ವಿಡಿಯೋ ಸಾಂಗ್‌ನ್ನು ವಿಕ್ಷಿಸಿ, ಚೆನ್ನಾಗಿದೆ. ಇದೇ ರೀತಿಯ ಹೊಸ ತರಹದ ವಿಡಿಯೋ ಸಾಂಗ್ ನಿಮ್ಮ ತಂಡದಿಂದ ಬರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕರುನಾಡ ಕಲ್ಪತರು ನಮ್ಮ ಕೊಪ್ಪಳ ಅಲ್ಬಮ್ ವಿಡಿಯೋ ಸಾಂಗ್ ತಂಡದವರಾದ ರಾಕ್ ಮಲ್ಲು, ಯು.ಕೆ.ಸಂಜು, ಶಿವು, ನವೀನ್, ಸಂಜನಾ, ಅಬ್ದುಲ್, ಶಿವಮೂರ್ತಿ ಸ್ಯಾಂಡಿ ಹಾಗೂ ಇನ್ನು ಮುಂತಾದವರು ಉಪಸ್ಥಿತರಿದ್ದರು.
ನಿರ್ಮಾಪಕರಾದ ಬಸಮ್ಮ ಹೂಗಾರ, ನಿರ್ದೇಶಕರಾದ ರಾಕ್ ಮಲ್ಲು, ಸಾಹಿತ್ಯ ಮಂಜುನಾಥ ಪಾಲ್‌ಬಾವಿ, ಸಂಗೀತ ಪಯಾಜ್ ಕುಷ್ಟಗಿ, ಹಾಡಿದವರು ಎಲ್.ಎನ್.ಶ್ರೀಕಾಂತ, ನೃತ್ಯ ಸಂಯೋಜನೆ ಯು.ಕೆ.ಸಚಿಜು, ಛಾಯಗ್ರಾಹಕ ದರ್ಶನ ವಸ್ತ್ರದ್, ಸಂಕಲನಕರರಾದ ಸಮೀರ ಕುಲಕರ್ಣಿ ಇವರ ಸಹಕಾರದಿಂದ ಹಾಗೂ ಕರುನಾಡ ಕಲ್ಪತರು ನಮ್ಮ ಕೊಪ್ಪಳ ಅಲ್ಬಮ್ ವಿಡಿಯೋ ಸಾಂಗ್ ಕಲಾತಂಡದವರ ಪರಿಶ್ರಮದಿಂದ ಹಾಗೂ ಇದಕ್ಕೆ ಕಾರಣಿಕರ್ತರಾದ ಗವಿಮಠ ಟ್ರಸ್ಟ್ ನ ಸಹಕಾರವು ಅಮುಲ್ಯವಾದದ್ದು.