ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ —- ಜ. 15 ರಿಂದ ಸ್ವ-ಸಹಾಯ ಗುಂಪುಗಳ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ

0

Get real time updates directly on you device, subscribe now.

: ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೊಪ್ಪಳ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ ಮತ್ತು ವಿವಿಧ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ-2025ರ ಅಂಗವಾಗಿ ರಾಷ್ರೀಯ ಜೀವನೋಪಾಯ ಅಭಿಯಾನದಡಿಯಲ್ಲಿ “ಅಸ್ಮಿತೆ” ನಗರ ಮತ್ತು ಗ್ರಾಮೀಣ ಸಂಜೀವಿನಿ ಸ್ವ-ಸಹಾಯ ಗುಂಪುಗಳ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಜನವರಿ 15 ರಿಂದ ಜ. 29ರ ವರೆಗೆ ಶ್ರೀ ಗವಿಮಠ ಮಠದ ಜಾತ್ರಾ ಆವರಣದಲ್ಲಿ ಆಯೋಜಿಸಲಾಗಿರುತ್ತದೆ.
 ಈ ಮೇಳದಲ್ಲಿ ಸ್ವ ಸಹಾಯ ಸಂಘದಿಂದ ತಯಾರಿಸಲ್ಪಟ್ಟ ಹಾಗೂ ಸ್ವಯಂ ಉದ್ಯೋಗದಲ್ಲಿ ಯಶಸ್ವಿಕಂಡಿರುವ ಸ್ವಯಂ ಉದ್ಯೋಗಿಗಳಿಂದ ತಯಾರಿಸಲ್ಪಟ್ಟ ಆಹಾರ ಉತ್ಪನ್ನಗಳು, ಗೃಹಲಂಕಾರಿಕ ವಸ್ತುಗಳು, ಕೈಮಗ್ಗ, ಸೀರೆ ಮತ್ತು ಜವಳಿ ವಸ್ತುಗಳು, ಬಾಳೆ ನಾರಿನ ಉತ್ಪನ್ನಗಳು, ಚೆನ್ನಪಟ್ಟಣದ ಗೊಂಬೆಗಳು, ಕಿನ್ನಾಳ ಗೂಂಬೆಗಳು, ಬಿದಿರಿನ ಉತ್ಪನ್ನಗಳು, ಗೃಹಬಳಕೆ ವಸ್ತುಗಳಿಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶದಿಂದ ಹಾಗೂ ರಾಯಚೂರು, ಬಳ್ಳಾರಿ, ಗದಗ, ವಿಜಯಪುರ, ಹಾವೇರಿ, ದಾವಣಗೇರೆ, ರಾಮನಗರ, ದಾರವಾಡ, ಬಾಗಲಕೋಟೆ, ಉತ್ತರ ಕನ್ನಡ, ಚಿತ್ರದುರ್ಗ, ಬೆಳಗಾವಿ, ವಿಜಯನಗರ ಜಿಲ್ಲೆಗಳು ಒಳಗೊಂಡAತೆ ಸುಮಾರು 100 ಮಳಿಗೆಗಳನ್ನು ತೆರೆಯಲಾಗಿರುತ್ತದೆ.
ಸ್ವ-ಸಹಾಯ ಸಂಘದ ಸದಸ್ಯರುಗಳು ತಯಾರಿಸಿರುವ ಉತ್ಪನ್ನಗಳನ್ನು ಖರೀದಿಸಿ, ಹೆಚ್ಚು ಹೆಚ್ಚು ಪ್ರೋತ್ಸಾಹಿಸುವುದರ ಮೂಲಕ ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಹಾಗೂ ಸ್ವ-ಸಹಾಯ ಸಂಘ ಸದಸ್ಯರಿಗೆ ಸ್ವಾವಲಂಭಿ ಬದುಕು, ಸಮೃದ್ದಿ ಬದುಕು, ಸಂತೋಷ ಬದುಕು ಕಟ್ಟಿಕೊಳ್ಳಲು ಸಹಕರಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Leave A Reply

Your email address will not be published.

error: Content is protected !!