ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ವೈದ್ಯಕೀಯ ಸಂಘಗಳ ಸಂಪೂರ್ಣ ಬೆಂಬಲ

0

Get real time updates directly on you device, subscribe now.


ನಾಳೆ ನಡೆಯಲಿರುವ ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಭಾರತೀಯ ವೈದ್ಯಕೀಯ ಸಂಘ , ಭಾರತೀಯ ವೈದ್ಯಕೀಯ ಸಂಘದ ಮಹಿಳಾ ಘಟಕ ,ಐ ಎಂ ಎ ಮೈತ್ರಿ , ಭಾರತೀಯ ದಂತ ವೈದ್ಯಕೀಯ ಸಂಘ , ಭಾರತೀಯ ಆಯುಶ್ ವೈದ್ಯಕೀಯ ಸಂಘಗಳು ಐ ಎಂ ಎ ಭವನದಲ್ಲಿ ಸಭೆ ಸೇರಿ , ತುಂಗಭದ್ರಾ ನದಿ ನಮ್ಮ ನಾಡಿನ ಜೀವನದಿ , ಆ ನದಿಯು ನೀರು ಇಂದು ಕಲುಷಿತವಾಗಿ ಇದರಿಂದ ಹಲವಾರು ರೋಗಗಳಿಗೆ ಜನರು ತುತ್ತಾಗುತ್ತಿದ್ದಾರೆ. ಆದ್ದರಿಂದ ನಾವು ತುಂಗಭದ್ರಾ ನದಿ ಸ್ವಚ್ಚತೆ ಕಾಪಾಡಲು ಎಲ್ಲರೂ ಕೈ ಜೋಡಿಸಬೇಕೇಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯಾದ್ಯಕ್ಷರಾದ ಡಾ.ವಿ.ವಿ.ಚಿನಿವಾಲರ್ ಕರೆ ಕೊಟ್ಟರು.
ಗಂಗಾವತಿ ಐ ಎಂ ಎ ಅಧ್ಯಕ್ಷರಾದ ಡಾ.ಎ.ಎಸ್.ಎನ್.ರಾಜು ಅವರು ಮಾತನಾಡಿ ಈ ನೀರು ನಮಗೆ ಕುಡಿಯುವುದಕ್ಕಷ್ಟೆ ಅಲ್ಲ , ತುಂಗಭದ್ರಾ ನದಿಯ ಮೇಲೆ ನಮ್ಮ ಎಲ್ಲರ ಅವಲಂಬಿಸಿದೆ , ತುಂಗಭದ್ರಾ ತಾಯಿ ತೊಂದರೆಯಲ್ಲಿ ಇದ್ದಾಳೆ ,ಅವಳ ಮಕ್ಕಳಾದ ನಾವು ತಾಯಿ ತುಂಗಭದ್ರಾಯನ್ನು ಕಾಪಾಡಲು ಈ ಅಭಿಯಾನದಲ್ಲಿ ಎಲ್ಲಾ ವೈದ್ಯರು ಭಾಗವಹಿಸಿ ಯಶಸ್ವಿಗೊಳಿಸಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಂದೋಲನದ ಪ್ರಮುಖರಾದ ಡಾ.ಶಿವಕುಮಾರ ಮಾಲಿಪಾಟೀಲ್ , ಮಂಜು ಕಟ್ಟಿಮನಿ,ವಿನಯ್ ಪಾಟೀಲ ,ಡಾ.ನಾಗರಾಜ,
ಡಾ.ಮೇಧಾ, ಡಾ.ರಾಜಶೇಖರ ನಾರಿನಾಳ, ಡಾ.ಗುರುರಾಜ ಉಮಚಗಿ, ಡಾ.ಶ್ಯಾಮಸುಂದರ , ಡಾ.ಚೇತನ ,ಡಾ.ಭರತ್,
ಡಾ.ಶ್ರೀನಿವಾಸಲು , ಶ್ರೀ ಮತಿ ಭಾರತಿ ಹೊಸಳ್ಳಿ, ಡಾ.ಕಿರಣ,

Get real time updates directly on you device, subscribe now.

Leave A Reply

Your email address will not be published.

error: Content is protected !!