ಪಾಶ್ಚಿಮಾತ್ಯ ಕಲೆಯಿಂದ ದೇಶಿಯ ಕಲೆಗೆ ಪೆಟ್ಟು :ಕೆ.ಜಿ.ಕುಲಕರ್ಣಿ
ಸಂಸ್ಕಾರ ಭಾರತಿಯಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಕೊಪ್ಪಳ : ಇಂದಿನ ಯುವ ಪೀಳಿಗೆ ಪಾಶ್ಚಿಮಾತ್ಯ ಕಲೆ ಮತ್ತು ಸಂಗೀತದ ಬೆನ್ನು ಬಿದ್ದು, ನಮ್ಮ ಮೂಲ ದೇಶಿಯ ಕಲೆ ಮತ್ತು ಸಂಗೀತಕ್ಕೆತುಂಬಾ ಹಿನ್ನಡೆಯಾಗುತ್ತಿದೆ. ಇದುತುಂಬಾ ವಿಷಾಧಕರ ಸಂಗತಿಯಾಗಿದೆ.ಪಾಶ್ಚಿಮಾತ್ಯ ಕಲೆಯಿಂದ ದೇಶಿಯ ಕಲೆಗೆ ಪೆಟ್ಟು ಬೀಳುತ್ತಿದೆ ಎಂದುಖ್ಯಾತ ಹಿರಿಯ ವೈದ್ಯರಾದಡಾ.ಕೆಜಿ.ಕುಲಕರ್ಣಿ ಕಳವಳ ವ್ಯಕ್ತಪಡಿಸಿದರು.
ಅವರು ನಗರದ ರಾಘವೇಂದ್ರಸ್ವಾಮಿಗಳವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ಸಂಸ್ಕಾರ ಭಾರತಿಯಜಿಲ್ಲಾ ಪದಾಧಿಕಾರಿಗಳು ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ, ಯುವ ಪೀಳಿಗೆಯು ನಮ್ಮ ಮೂಲವನ್ನು ಎಂದಿಗೂ ಮರೆಯಬಾರದು, ಪಾಶ್ಚಿಮಾತ್ಯ ಕಲೆ ಮತ್ತು ಸಂಗೀತದ ವ್ಯಾಮೋಹಕ್ಕೆ ಒಳಗಾಗದೇ ನಮ್ಮ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳೆಸಬೇಕು. ಈ ನಿಟ್ಟಿನಲ್ಲಿ ಸಂಸ್ಕಾರ ಭಾರತಿಯ ಸಂಘಟನೆ ಈ ಕೆಲಸವನ್ನು ಮಾಡಲಿ ಎಂದು ಆಶಿಸಿದರು.
ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದ ಸಂಸ್ಕಾರ ಭಾರತಿಯ ಸಂಘಟನೆಯಜಿಲ್ಲಾಧ್ಯಕ್ಷ ಪ್ರಹ್ಲಾದ ಅಗಳಿ ಮಾತನಾಡಿ, ನಮ್ಮ ಮೂಲ ಉದ್ದೇಶ ದೇಶಿಯ ಕಲೆಯನ್ನು ಸಂರಕ್ಷಿಸಿ ಬೆಳೆಸುವುದು, ಈ ನಿಟ್ಟಿನಲ್ಲಿ ನಮ್ಮ ಮೂಲ ಸಂಸ್ಕೃತಿಯ ಉಳಿವಿಗಾಗಿ ನಾವುಗಳ ಸದಾ ಸಿದ್ಧ ಎಂದು ಹೇಳಿದರು.
ವೇದಿಕೆ ಮೇಲೆ ಮುಖ್ಯ ಅತಿಥಿಗಳಾಗಿ ಕಲಾವಿದ ಕೃಷ್ಟ ಸೊರಟೂರ ಉಪಸ್ಥಿತರಿದ್ದರು.ಸಂಸ್ಕಾರ ಭಾರತಿಯಉತ್ತರ ಪ್ರಾಂತದ ಮುಖ್ಯಸ್ಥರಾದ ಶ್ರೀನಿವಾಸ ರವರುಧ್ಯೇಯಗೀತೆ ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ವಾದಿರಾಜ್ ಪಾಟೀಲ್‌ಕಾರ್ಯಕ್ರಮ ನಿರೂಪಿಸಿದರೆ, ಶ್ರೀನಿವಾಸ ಜೋಶಿ ಕೊನೆಯಲ್ಲಿ ವಂದಿಸಿದರು.
ನೂತನ ಪದಾಧಿಕಾರಿಗಳು :ಸಂಸ್ಕಾರ ಭಾರತಿಯ ಕೊಪ್ಪಳ ಜಿಲ್ಲೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಜಿಲ್ಲಾಧ್ಯಕ್ಷರಾಗಿ ಪ್ರಹ್ಲಾದ್ ಅಗಳಿ, ಉಪಾಧ್ಯಕ್ಷರಾಗಿಎನ್.ಆರ್.ಕುಕನೂರು, ಸದಾನಂದ ಸೇಟ್‌ಗಂಗಾವತಿ, ದಾನಪ್ಪಕವಲೂರು, ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣ ಸೊರಟೂರು, ಕಾರ್ಯದರ್ಶಿಗಳಾಗಿ ಶ್ರೀಮತಿ ಕಂಚಿಕಾರಾಯಕರ, ವಾದಿರಾಜ್ ಪಾಟೀಲ, ಶ್ರೀನಿವಾಸ ಜೋಶಿ, ಕೋಶ್ಯಾಧ್ಯಕ್ಷರಾಗಿ ಸಾಗರ, ಸ್ಪಟಿಕ, ಪ್ರಚಾರ ಪ್ರಧಾನರಾಗಿ ಬದರಿ ಪುರೋಹಿತ, ಪ್ರದರ್ಶನ ಕಲೆ ಲಚ್ಚಣ್ಣ ಕಿನ್ನಾಳ, ದೃಶ್ಯ ಕಲೆ ಸತೀಶಕುಲಕರ್ಣಿ, ಲೋಕ ಕಲೆಗೆ ಕನಕರಾಜ ಗೊಂಧಳಿ, ಸಾಹಿತ್ಯ ಸುಧೀಂದ್ರ, ಪ್ರಾಚ್ಯಕಲೆಗೆ ಶ್ರೀಕಾಂತ ಪೂಜಾರಇಟಗಿಆಯ್ಕೆಗೊಂಡರೆ, ಕಾರ್ಯಕಾರಿ ಸದಸ್ಯರಾಗಿ ಭೀಮಸೇಮ ಹಯಗ್ರಿವ, ನೀಲ ಶಿವಕುಮಾರ ಗಂಗಾವತಿ, ಅನಂತ ಪೌಣೋಸ್ಕರ್‌ಅವಿರೋಧವಾಗಿಆಯ್ಕೆಗೊಂಡಿದ್ದಾರೆ.