ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಕೊಪ್ಪಳ ತಾಲೂಕ ಪದಾಧಿಕಾರಿಗಳ ಆಯ್ಕೆ

0

Get real time updates directly on you device, subscribe now.

ಕೊಪ್ಪಳ : ನಗರದ ಪ್ರವಾಸಿ ಮಂದಿರದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ(ರಿ), ಕೊಪ್ಪಳ ಜಿಲ್ಲಾ ಘಟಕದಿಂದ ನಡೆದ ಸಭೆಯಲ್ಲಿ ತಾಲ್ಲೂಕ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ತಾಲೂಕ ಅಧ್ಯಕ್ಷರನ್ನಾಗಿ ಗವಿಸಿದ್ದಪ್ಪ ಕಲ್ಲನವರ ನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಶೇಖರ ಇಂದರಗಿ ಸಾ। ಗಿಣಿಗೇರಾ ಉಪಾಧ್ಯಕ್ಷರುಗಳಾಗಿ, ಕರಿಯಪ್ಪ ಬೀಡನಾಳ, ಈರಣ್ಣ ಕರ್ಕಿಹಳ್ಳಿ, ಚಿದಾನಂದ ಪೂಜಾರ ಹಾಗೂ ರಂಗಪ್ಪ ಪೂಜಾರ, ಗೌರವ ಅಧ್ಯಕ್ಷರಾಗಿ ಯಮನೂರಪ್ಪ ನಾಯಕ, ಖಜಾಂಚಿಯಾಗಿ ರಮೇಶ ಚೌಡಿ, ಸಂಘಟನಾ ಕಾರ್ಯದರ್ಶಿಗಳಾಗಿ ರವಿ ಹ್ಯಾಟಿ, ಯಂಕೋಬ ಪೂಜಾರ, ಕಾರ್ಯದರ್ಶಿಯಾಗಿ ಶಂಕರ ಪೂಜಾರ, ಕಾನೂನು ಸಲಹೆಗಾರರಾಗಿ ವೀರಭದ್ರಪ್ಪ ನಾಯಕ ವಕೀಲರು, ಯಲ್ಲಪ್ಪ ಬಸರಿಹಾಳ ವಕೀಲರು ಹಾಗೂ ನಗರ ಘಟಕದ ಅಧ್ಯಕ್ಷರಾಗಿ ಪ್ರಕಾಶ ಗುದಗಿ, ಪ್ರಧಾನ ಕಾರ್ಯದರ್ಶಿಯಾಗಿ ಅಜಯ್ ನಾಯಕರನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಮಾಧ್ಯಮ ವಕ್ತಾರ ರನ್ನಾಗಿ ಮಂಜುನಾಥ ಗೊಂಡಬಾಳ ಹಾಗೂ ಜಿಲ್ಲಾ ಉಪಾಧ್ಯಕ್ಷರನ್ನಾಗಿ ದೇವಪ್ಪ ಕಟ್ಟಿಮನಿ ಮತ್ತು ಜಿಲ್ಲಾ ಸಂಘಟನಾ ಕಾರ್ಯದರ್ಶಿಯನ್ನಾಗಿ ಶಾಂತಪ್ಪ ವಾಲ್ಮೀಕಿ ಇವರುಗಳನ್ನು ಜಿಲ್ಲಾ ಸಮಿತಿಗೆ ಶಿಪಾರಸ್ಸು ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು. ಎಲ್ಲಾ ನಿರ್ಣಯಗಳಿಗೆ ಜಿಲ್ಲಾ ಪ್ರಧಾನಕಾರ್ಯದರ್ಶಿಯಾದ ಶರಣಪ್ಪ ನಾಯಕ ಅನುಮೋದನೆ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಸುರೇಶ ಡೋಣಿ ರಾಜ್ಯ ಸಂಘಟನಾ ಕಾರ್ಯದರ್ಶಿ ವಹಿಸಿಕೊಂಡಿದ್ದರು.

ಈ ಸಂದರ್ಭದಲ್ಲಿ ರವಿಕುಮಾರ ಬನ್ನಿಕೊಪ್ಪ ಜಿಲ್ಲಾ ಯುವ ಘಟಕದ ಅಧ್ಯಕ್ಷರು ಹಾಗೂ ಸತೀಶ ಭಾಗ್ಯನಗರ, ಮಂಜುನಾಥ ಗುದಗಿ ಇನ್ನಿತರ ಸಮಾಜದ ಮುಖಂಡರು ಹಾಜರಿದರು.

Get real time updates directly on you device, subscribe now.

Leave A Reply

Your email address will not be published.

error: Content is protected !!