ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ
ಕೊಪ್ಪಳ: ಮಕ್ಕಳ ಕಲರವ 2024-25 ನೇ ಸಾಲಿನ ಸಾಂಸ್ಕೃತಿಕ ಕಾರ್ಯಕ್ರಮ ಶ್ರೀ ಗವಿಸಿದ್ಧೇಶ್ವರ ಸಂಯುಕ್ತ ಪ್ರೌಢಶಾಲೆ, ಕೊಪ್ಪಳದಲ್ಲಿ ದಿನಾಂಕ 24.12. 2024 ರಂದು ಮುಖ್ಯ ಅತಿಥಿಗಳಾದ ವಿಶ್ರಾಂತ ಪ್ರಾಚಾರ್ಯರು ಎಮ್ ಎಸ್. ಹೊಟ್ಟಿನ್ ಮತ್ತು ಗೌರವ ಕಾರ್ಯದರ್ಶಿಗಳಾದ ಡಾ. ಆರ್.ಮರೆಗೌಡರ ಹಾಗೂ ಆಡಳಿತ ಅಧಿಕಾರಿ ಗವಿಸಿದ್ದಪ್ಪ ವಿ. ಕೊಪ್ಪಳರವರು ಶಾಲೆಯ ಪ್ರಧಾನ ಮಂತ್ರಿಯಾದ ಕುಮಾರ್ ದರ್ಶನರವರು ಮುಖ್ಯೋಪಾಧ್ಯಾಯ ಅಮರೇಶ ಆ. ಕರಡಿರವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗವಿ ಬೆಳಕು ಶಾಲಾ ಪತ್ರಿಕೆ ಬಿಡುಗಡೆ ಮಾಡಲು ಎಂ. ಎಸ್. ಹೊಟ್ಟೀನ್ ವಿಶ್ರಾಂತ ಪ್ರಾಚಾರ್ಯರು ಶ್ರೀ ಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ಅಳವಂಡಿಯವರು ಆಗಮಿಸಿ ವಿದ್ಯಾರ್ಥಿಗಳಿಗೆ ಗುರು ಪರಂಪರೆ ಹಾಗೂ ಜೀವನದಲ್ಲಿ ಸಮಯವನ್ನು ಸರಿಯಾಗಿ ಬಳಕೆ ಮಾಡಬೇಕೆಂದು ಕಿವಿಮಾತು ಹೇಳಿ ನಾನು ಕೂಡ ಈ ಶಾಲೆಯ ವಿದ್ಯಾರ್ಥಿಯೆಂದು ತಾವು ಕಲಿತ ಬಾಲ್ಯದ ಸಮಯವನ್ನು ನೆನಪು ಮಾಡಿಕೊಂಡರು.
ಶ್ರೀ ಗ.ವಿ.ವ ಟ್ರಸ್ಟ್ ಕೊಪ್ಪಳದ ಗೌರವ ಕಾರ್ಯದರ್ಶಿ ಡಾ. ಆರ್.ಮರೇಗೌಡರವರು ವಿದ್ಯಾರ್ಥಿಗಳಿಗೆ ಭಾರತದ ಹೆಮ್ಮೆಯ ರಾಷ್ಟ್ರಪತಿ ಅಬ್ದುಲ್ ಕಲಾಂ ತರಹ ಕನಸು ಕಾಣಬೇಕೆಂದು ಸಲಹೆ ನೀಡಿದರು.
ಶ್ರೀ ಗವಿಸಿದ್ದೇಶ್ವರ ಸಂಯುಕ್ತ ಪ್ರೌಢಶಾಲೆಯ ಆಡಳಿತ ಅಧಿಕಾರಿ ಗವಿಸಿದ್ದಪ್ಪ ಕೊಪ್ಪಳರವರು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು ತಾವು ಕಲಿತ ಶಾಲೆಯ ಗೌರವ ಹೆಚ್ಚಿಸುವ ಹುದ್ದೆಯಲ್ಲಿ ಸಾಗಬೇಕೆಂದು ತಿಳಿಸಿದರು.
ಅಧ್ಯಕ್ಷತೆಯ ಸ್ಥಾನ ಅಲಂಕರಿಸಿದ ಗವಿಸಿದ್ಧೇಶ್ವರ ಸಂಯುಕ್ತ ಪ್ರೌಢಶಾಲೆಯ ಮುಖ್ಯೋಪಾಧ್ಯಯರಾದ ಅಮರೇಶ ಕರಡಿರವರು ಅದೇ ಶಾಲೆಯಲ್ಲಿ ಕಲಿತು ಗವಿ ಬೆಳಕು ಸ್ಮರಣ ಸಂಚಿಕೆಗೆ ಪ್ರಾಯೋಜಕರಾಗಿರುವ ಹಳೆ ವಿದ್ಯಾರ್ಥಿಗಳ ಪ್ರಗತಿಯನ್ನು ಮುಕ್ತ ಕಂಠದಿಂದ ಸ್ಲಾಗಿಸಿದರು.
ಶ್ರೀಮತಿ ರತ್ನಾ.ಕೆ ಸಂಗಡಿಗರು ಗುರುಮಾತೆಯರು ಪ್ರಾರ್ಥನೆಗೈದರು. ಎಂ ಎನ್. ಕಮ್ಮಾರ್ ಸಹ ಶಿಕ್ಷಕರು ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು. ಎ ಎಸ್.ಗುಂಡನಗೌಡ ಸಹ ಶಿಕ್ಷಕರು ಅತಿಥಿ ಪರಿಚಯ ಮಾಡಿದರು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಸಹ ಶಿಕ್ಷಕ ರವಿ ಎನ್. ರಂಜನಗಿ ಮತ್ತು ಹನುಮೇಶ್ ಗಾಳಿಯವರು ನಡೆಸಿಕೊಟ್ಟರು. ಕ್ರೀಡೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಸಹ ಶಿಕ್ಷಕ ಆರ್ ಬಿ. ಬಾಳನಗೌಡರ ನಡೆಸಿಕೊಟ್ಟರು. ಕಾರ್ಯಕ್ರಮದ ನಿರೂಪಣೆಯನ್ನು ಸಹ ಶಿಕ್ಷಕ ಬಿ.ನಾಗರಾಜ ರವರು ನಡೆಸಿಕೊಟ್ಟರು.
ವಿದ್ಯಾರ್ಥಿಗಳಿಂದ ಹಾಡು ಯೋಗ ಪ್ರದರ್ಶನ ವಿಭಿನ್ನ ಬಗೆಯ ನೃತ್ಯಗಳು ಜರುಗಿದವು. ಪ್ರೇಕ್ಷಕರ ಮನಸಿಗೆ ಮುದ ನೀಡಿದವು 3000 ವಿದ್ಯಾರ್ಥಿಗಳು ಹಾಗೂ ಪಾಲಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಸಾವಿತ್ರಿ ಪಿ. ರೆಡ್ಡೇರ್ ಸಹ ಶಿಕ್ಷಕರು ನಡೆಸಿಕೊಟ್ಟರು. ಎಚ್. ಬಸವರಾಜ ಸ್ವಾಮಿ ಸಹ ಶಿಕ್ಷಕರು ವಂದನಾರ್ಪಣೆ ಮಾಡಿದರು.