ವಿವಿಧ ಬೇಡಿಕೆಗೆ ಒತ್ತಾಯಿಸಿ ಸಚಿವರಿಗೆ ಮನವಿ
ಕನಕಗಿರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹೊರಗುತ್ತಿಗೆ ನೌಕರರು ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಪ್ರಮುಖ ಬೇಡಿಕೆಗಳಾದ ಸೇವಾಭದ್ರತೆ, ವೇತನ ಪರಿಷ್ಕರಣೆ, ಆರೋಗ್ಯ ಭದ್ರತೆ, ಅಪಘಾತ ವಿಮೆ ಸೇರಿದಂತೆ ವಿವಿಧ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಸಚಿವರ ಗಮನಕ್ಕೆ ತಂದರು. ಈ ವೇಳ ಸಚಿವರು, ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಯ ಸಚಿವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನರೇಗಾ ಸಿಬ್ಬಂದಿಗಳಾದ ಕೊಟ್ರೇಶ್ ಜವಳಿ, ಶಿವಕುಮಾರ್ ಕೆ, ಸಯ್ಯದ್ ತನ್ವೀರ್, ವಿಶ್ವನಾಥ, ಮೇಘರಾಜ್, ಕನಕಪ್ಪ ಚಲುವಾದಿ, ಮೌನೇಶ್, ಮಂಜುನಾಥ, ಉದಯಕುಮಾರ್, ಯೋಗೇಶ್, ವಿಜಯ ಸೇರಿದಂತೆ ಇನ್ನಿತರ ಸಿಬ್ಬಂದಿಗಳು ಹಾಜರಿದ್ದರು.