ಪೊಲೀಸರ ಲಾಠಿಚಾರ್ಜ್ ಖಂಡಿಸಿ ರಾಜ್ಯಾದ್ಯಂತ ರಸ್ತಾರೋಕ : ಸೋಮನ ಗೌಡ ಪಾಟೀಲ್

0

Get real time updates directly on you device, subscribe now.


ಕೊಪ್ಪಳ : ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟಗಾರರ ಮೇಲೆ ಪೊಲೀಸರು ಲಾಠಿಚಾರ್ಜ ಮಾಡಿದ್ದನ್ನು ಖಂಡಿಸಿ ಇಂದು ದಿ.12 ರಂದು ಬೆಳಿಗ್ಗೆ 11ಗಂಟೆಗೆ ರಾಜ್ಯದ ಎಲ್ಲಾ ಜಿಲ್ಲಾ,ತಾಲೂಕ ಕೇಂದ್ರಗಳಲ್ಲಿ ಕೊಪ್ಪಳದ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್ ನಲ್ಲಿ ಪ್ರತಿಭಟಿಸಿ ನಂತರ ಬೈಪಾಸ್ ನಲ್ಲಿ ರಸ್ತೆರೋಕ್ ಮಾಡಲಾಗುವುದು ಎಂದು ವೀರಶೈವ- ಲಿಂಗಾಯತ ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ತಿಳಿಸಿದರು.
ಅವರು ಬುಧವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಗೆ ಸೇರ್ಪಡೆಗಾಗಿ 1994 ರಿಂದ ಆಯಾ ಹಂತದ ಮುಖ್ಯ ಮಂತ್ರಿಗಳಿಗೆ ಮನವಿ ಪತ್ರವನ್ನು ಕೊಡುತ್ತಾ ಬಂದಿದ್ದು ಹಾಗೂ ಅನೇಕ ಹೋರಾಟಗಳನ್ನು ಕಳೆದ 31 ವರ್ಷಗಳಿಂದ ಮಾಡುತ್ತಿದ್ದು ಈವರೆಗೂ ಸರಕಾರ ಗಮನ ಕೊಡದೆ ಇದ್ದಾಗ ನಮಗೆ ನ್ಯಾಯ ಕೊಡಿ ಎಂದು ಡಿಸೆಂಬರ್ 10ರಂದು ಬೆಳಗಾವಿಯಲ್ಲಿ ಸಮಾಜ ಬಾಂದವರು ಶಾಂತಿಯುತ ಹೋರಾಟ ಮಾಡುತ್ತಿರುವಾಗ ರಾಜ್ಯ ಸರಕಾರ ಪೋಲೀಸರ ಮೂಲಕ ಲಾಟಿ ಚಾರ್ಜ ಮಾಡಿಸಿದ್ದು ಅಮಾಯಕ ಬಡ ಕುಟುಂಬದ ಸಮುದಾಯದವರಿಗೆ ಗಂಭೀರ ಗಾಯಗಾಳಾಗಿದ್ದು ಇಂತಹ ಘಟನೆಗಳನ್ನು ರಾಜ್ಯ ಪಂಚಮಸಾಲಿ ಸಂಘ ತೀವ್ರವಾಗಿ ಖಂಡಿಸುತ್ತದೆ ಮತ್ತು ಅಂದು ನಡೆದ ಕಲ್ಲು ತುರಾಟ ನಮ್ಮ ಸಮುದಾಯದವರಿಂದ ನಡೆದಿರುವುದಿಲ್ಲ ಅದು ಕಾಂಗ್ರೆಸ್ ಮತ್ತು ಬಿಜೆಪಿಯವರ ಕುತಂತ್ರದಿಂದ ನಡೆದಿರುವಂತಹ ಘಟನೆ ಇದನ್ನು ತನಿಖೆ ಮಾಡಿ ನ್ಯಾಯ ದೊರಕಿಸಿಕೊಡಬೇಕು ಮತ್ತು ಪೊಲೀಸರು ನಮ್ಮ ಸಮುದಾಯದವರನ್ನು ಬಂಧಿಸಿರುವುದನ್ನು ಖಂಡಿಸುತ್ತಾ ಅಂತವರ ಮೇಲೆ ಯಾವುದೇ ಕೇಸ್ ದಾಖಲಿಸದೆ ಅವರನ್ನು ಬೀಡುಗಡೆ ಮಾಡಬೇಕು ಮತ್ತು ರಾಜ್ಯದಲ್ಲಿ ಸಮುದಾಯಕ್ಕೆ 2ಎ ಹಾಗೂ ಕೇಂದ್ರ ಸರಕಾರದಲ್ಲಿ ಎಲ್ಲಾ ಲಿಂಗಾಯತರಿಗೆ ಒ.ಬಿ.ಸಿ ಗೆ ಸೇರಿಸಲು ರಾಜ್ಯದ ಕ್ಯಾಬಿನೇಟನಲ್ಲಿ ಪಾಸ್ ಮಾಡಿ ಕೇಂದ್ರಕ್ಕೆ ಕಳುಹಿಸಿಕೊಡಬೇಕು, ಒಂದು ವೇಳೆ ನಮ್ಮ ಬೇಡಿಕೆ ಇಡೆರದೆ ಹೊದಲ್ಲಿ ಕರ್ನಾಟಕದ ಎಲ್ಲಾ ಲಿಂಗಾಯತರು ಒಟ್ಟುಗೂಡಿ ಕೇಂದ್ರದ ಓ.ಬಿ.ಸಿಗಾಗಿ ಹಾಗೂ ಪಂಚಮಸಾಲಿ ಸಮುದಾಯದವರು 2ಎ ಗಾಗಿ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಸನಗೌಡ ಪಾಟೀಲ್ ,ತಾಲೂಕಾಧ್ಯಕ್ಷ ಕರಿಯಪ್ಪ ಮೇಟಿ, ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಶೇಖರಪ್ಪ ಮುತ್ಯನ್ನವರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜ್ ಹಾಲಸಮುದ್ರ ಉಪಸ್ಥಿತರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!