ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಗೆ ಅವಮಾನಿಸುವುದು ಫಾಸಿಸ್ಟ ಮನಸ್ಥಿತಿ :ವೆಲ್ಫೇರ್ ಪಾರ್ಟಿ
ಕೊಪ್ಪಳ : ಅಂಬೇಡ್ಕರ್ ರವರ ಹೆಸರು ಹೆಚ್ಚು ಹೆಚ್ಚು ಬಾರಿ ಹೇಳುವುದು ವ್ಯಸನವಾಗಿದೆ ಎಂದು ಸಂವಿಧಾನದ ಕರ್ತೃ ಬಾಬಾ ಸಾಹೇಬ್ ಅಂಬೇಡ್ಕರ್ ರನ್ನು ನಿಂದಿಸುವ ಮೂಲಕ ಗೃಹ ಮಂತ್ರಿ ಅಮಿತ್ ಶಾ ತನ್ನ ಫ್ಯಾಸಿಟ್ಸ್ ಮನಸ್ಥಿತಿಯನ್ನು ಬಹಿರಂಗ ಪಡಿಸಿದ್ದಾರೆ ಯಂದು ವೆಲ್ಫೇರ್ ಪಾರ್ಟಿ ಕರ್ನಾಟಕ ರಾಜ್ಯ ಅಧ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೇನ್ ಆಕ್ರೋಶ ವೇಕ್ತ ಪಡಿಸಿದ್ದಾರೆ.ಅವರು ಮಾತನಾಡುತ್ತ ಗ್ರಹ ಮಂತ್ರಿಗಳ ಈ ಹೇಳಿಕೆ ಅತ್ಯಂತ ಖಂಡನೀಯ, ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರು ಹೇಳುವುದು ಭಾರತೀಯರೆಲ್ಲರಿಗೆ ಹೆಮ್ಮೆಯ ವಿಚಾರವಾಗಿದೆ. ಅವರು ಈ ದೇಶಕ್ಕೆ ಒಂದು ಮಾದರಿ ಸಂವಿಧಾನ ರೂಪಿಸಿದವರು ಹಿಂದುಳಿದ, ಅಲ್ಪಸಂಖ್ಯಾತರ ದ್ವನಿ ಅಗಿದವರು ಅವರ ಬಗ್ಗೆ ಇಷ್ಟು ಕೀಳು ಭಾವನೆ ಇಟ್ಟುಕೊಳ್ಳುವುದು ಈ ದೇಶದ ಗ್ರಹ ಮಂತ್ರಿಗೆ ಶೋಭೆ ತರವಂತದಲ್ಲ.
ಬಾಬಾ ಸಾಹೇಬ್ ಹೆಸರನ್ನು ಕೇಳಲು ಕೋಮುವ್ಯಸನಿಗಳಿಗೆ ಕರ್ಕಶವಾಗಬಹುದು. ಆದರೆ ಇಲ್ಲಿನ ದಲಿತರ ಹಿಂದುಳಿದವರ, ದುರ್ಬಲರ ಹಕ್ಕುಗಳಿಗೆ ಹೋರಾಡಿದ ಮಹನೀಯರಾದ ಅಂಬೇಡ್ಕರ್ ರವರ ಸೇವೆ ಸ್ಮರಣೀಯ. ಆ ಹೆಸರು ನಾವು ಎಂದಿಗೂ ಸ್ಮರಿಸಿ ಹೇಳುತ್ತಿರುವುದು ನಿಮಗೆ ವ್ಯಸನದಂತೆ ಕಂಡರೆ ಅದು ನಿಮ್ಮ ಮಾನಸಿಕ ಸಮಸ್ಯೆಯಾಗಿದೆ. ಆ ಹೆಸರನ್ನು ಭಾರತೀಯರು ಎಂದೆಂದಿಗೂ ಹೇಳುತ್ತಿರುತ್ತಾರೆ.
ಬಡವರ ದಲಿತರ ದೀನ ದುರ್ಬಲರ ಹಕ್ಕುಗಳಿಗೆ ಹೋರಾಡಿದ ಮಹಾನ್ ವ್ಯಕ್ತಿಯನ್ನು ನಿಂದಿಸುವ ಮೂಲಕ ಇಡೀ ದೇಶದ ನಾಗರಿಕರ ಮನಸಿಗೆ ಘಾಸಿಯುಂಟು ಮಾಡಿರವ ಗ್ರಹ ಮಂತ್ರಿಗಳು ಕೂಡಲೇ ಕ್ಷಮೆಯಾಚನೆ ಮಾಡಬೇಕು ಮತ್ತು ತಮ್ಮ ಶಬ್ದಗಳನ್ನು ವಾಪಾಸ್ ಪಡೆಯಬೇಕು, ಇದನ್ನು ಒಕ್ಕೊರಲಿನಿಂದ ಎಲ್ಲರೂ ಖಂಡಿಸಬೇಕೆಂದು ಅವರು ಅಗ್ರಹಿಸಿದ್ದಾರೆ.