ದಿ.ಎಸ್.ಎಂ.ಕೃಷ್ಣ ಅವರಿಗೆ ಬಯ್ಯಾಪುರ ಭಾವಪೂರ್ಣ ಶ್ರದ್ಧಾಂಜಲಿ
ಕುಷ್ಟಗಿ 10 : ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ದೇಶದ ವಿದೇಶಾಂಗ ಸಚಿವರಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ, ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾದ ಅಲ್ಲದೇ ರಾಜ್ಯ ಮತ್ತು ದೇಶದ ರಾಜಕಾರಣದಲ್ಲಿ ಸಾಕಷ್ಟು
ಜವಾಬ್ದಾರಿಗಳನ್ನು ನಿಭಾಯಿಸಿದ ನಾಯಕ ಎಸ್.ಎಂ. ಕೃಷ್ಣರವರ ನಿಧನವು ದುಃಖ ತಂದಿದೆ ಎಂದು ಡಿಸಿಸಿ ಅಧ್ಯಕ್ಷ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ಸಂತಾಪ ವ್ಯಕ್ತಪಡಿಸಿದ್ದಾರೆ.
ಶಾಲಾ ಮಕ್ಕಳಿಗೆ ಬಿಸಿಯೂಟ, ರಾಜ್ಯದಲ್ಲಿ ಮೋಡ ಬಿತ್ತನೆ, ವಿದ್ಯುತ್ ಕ್ರಾಂತಿ, ಬೆಂಗಳೂರು ಐಟಿ ಸಿಟಿ, ಆಧುನಿಕ ದೂರದೃಷ್ಟಿಯ ನಾಯಕರಾದ ಇವರು ಸೌಮ್ಯವಾದಿ ನೇರ ನಿಷ್ಠುರ ಉತ್ತಮ ಆಡಳಿತ ನೀಡಿದ ಧೀಮಂತರಾದ ಇವರು ನಾನು ಲಿಂಗಸುಗೂರು ಶಾಸಕನಾಗಿದ್ದಾಗ ಕೃಷ್ಣ ಬಲದಂಡೆ ಉದ್ಘಾಟನೆ ಮತ್ತು ವಿವಿಧ ಸಮಾರಂಭಕ್ಕೆ ಆಗಮಿಸಿ ಅಭಿವೃದ್ಧಿ ಚಿಂತನೆಯ ಅವರ ಮಾತುಗಳು ಇಂದಿಗೂ ಹಸಿರಾಗಿವೆ.ಇಂದಿನ ಯುವ ಪೀಳಿಗೆಯ ಒಳತಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ, ನಾಡಿಗೆ ಅಪಾರ ಕೊಡುಗೆ ನೀಡಿದ ಧೀಮಂತ ನಾಯಕರ ಅಗಲಿಕೆ ಅಪಾರ ಅಭಿಮಾನಿಗಳಿಗೆ ತುಂಬಾ ನೋವುಂಟಾಗಿದ್ದು, ಇವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ದೇವರು ದಯಪಾಲಿಸಲೆಂದು ಪ್ರಾರ್ಥಿಸುತ್ತಾ ಶ್ರೀಯುತರ ಆತ್ಮಕ್ಕೆ ಶಾಂತಿ ಕೋರಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತೇನೆ ಎಂದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.