ಸಮಾಜದ ಸಂಘಟನೆಗೆ ಪ್ರತಿಯೊಬ್ಬರೂ ಶ್ರಮಿಸಿ : ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
ಕೊಪ್ಪಳ,: ಜಂಗಮ ಸಮಾಜದ ಸಂಘಟನೆ ಅವಶ್ಯಕವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಸಮಾಜಕ್ಕಾಗಿ ಶ್ರಮಿಸಬೇಕು. ನಾನು ಎನ್ನುವುದನ್ನು ಬಿಟ್ಟು ನಾವು ಎಂದಾಗ ಮಾತ್ರ ಸಂಘಟನೆ ಉಳಿಯಲು ಸಾಧ್ಯ ಎಂದು ಮೈನಳ್ಳಿ-ಬಿಕನಳ್ಳಿ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ನಗರದ ಶ್ರೀ ರೇಣುಕಾಚಾರ್ಯ ಭವನದಲ್ಲಿ ಜಂಗಮ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣದ ಕಾರ್ಯಕ್ರಮದಲ್ಲಿ ಅವರು ಸಾನಿಧ್ಯ ವಹಿಸಿ ಮಾತನಾಡಿದರು.
ಸಮಾಜದ ಏಳಿಗೆ ದೃಷ್ಟಿಯಿಂದ ಮುಂಬರುವ ದಿನಗಳಲ್ಲಿ ಸಮಾಜ ಸರ್ವ ರಂಗಗಳಲ್ಲಿ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಸಾಮೂಹಿಕವಾಗಿ ಪ್ರಯತ್ನಿಸಬೇಕಾಗಿದೆ ಎಂದರು.
ಜಂಗಮರು ಯಾವಾಗಲೂ ಇಷ್ಟಲಿಂಗವನ್ನು ಧರಿಸಿ, ಭಸ್ಮ ಹಚ್ಚಿಕೊಳ್ಳಿರಿ, ನಿಮ್ಮ ಮಕ್ಕಳಿಗೂ ಸಹ ಧರಿಸಲು ಹೇಳಿ, ನಿತ್ಯವೂ ಪೂಜೆ ಮಾಡಲು ತಿಳಿಸಬೇಕು. ಇಷ್ಟಲಿಂಗವು ಶಿವನ ಸಂಕೇತವಾಗಿದೆ. ಇದನ್ನು ಭಕ್ತಿಯಿಂದ ಪೂಜೆ ಮಾಡಬೇಕು ಎಂದರು.
ಜಂಗಮ ಸಮಾಜದ ನೂತನ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷರಾಗಿ ಕೊಟ್ರಬಸಯ್ಯ ಹಿರೇಮಠ, ಅಧ್ಯಕ್ಷರಾಗಿ ಹಂಪಯ್ಯ ಮೆತಗಲ್, ಉಪಾಧ್ಯಕ್ಷರಾಗಿ ಗವಿಸಿದ್ದಯ್ಯ ಲಿಂಗಬಸಯ್ಯನಮಠ, ಕಾರ್ಯದರ್ಶಿಯಾಗಿ ಬಸಯ್ಯ ಹಿರೇಮಠ, ಸಹ ಕಾರ್ಯದರ್ಶಿಯಾಗಿ ಜಗದೀಶಯ್ಯ ನೀರಲಗಿ, ಖಜಾಂಚಿಯಾಗಿ ಚಿದಾನಂದಯ್ಯ, ಸದಸ್ಯರಾಗಿ ಬಸಯ್ಯ ಹಿರೇಮಠ, ಶಿವಕುಮಾರ ಹಿರೇಮಠ, ಪಂಪಯ್ಯ ಹಿರೇಮಠ, ಸಿದ್ದಯ್ಯ ಹಿರೇಮಠ, ವಿಜಯಕುಮಾರ ವಸ್ತ್ರದ, ಮಲ್ಲಯ್ಯ ಸಂಕಿನಮಠ, ಶ್ರೀಮತಿ ಜಯಶ್ರೀ ಹಿರೇಮಠ, ಶ್ರೀಮತಿ ಲಲಿತಾ ಹಿರೇಮಠ ಇವರುಗಳು ಅಧಿಕಾರ ವಹಿಸಿಕೊಂಡರು.
ಈ ಸಂದರ್ಭದಲ್ಲಿ ಪ್ರಮುಖರಾದ ಸಿದ್ದಯ್ಯ ಹಿರೇಮಠ, ನೀಲಕಂಠಯ್ಯ ಹಿರೇಮಠ, ವಿರೂಪಾಕ್ಷಯ್ಯ ಗದಗಿನಮಠ, ಕಲ್ಲಯ್ಯ ಕಲ್ಯಾಣಗೌಡ್ರು, ಶರಣಯ್ಯ ಟೈಲರ್, ಗುರಯ್ಯ, ಚಂದ್ರಶೇಖರಯ್ಯ ಸೊಪ್ಪಿಮಠ, ಶಂಕ್ರಯ್ಯ ಸಾಲಿಮಠ, ದಯಾನಂದ ಸೇರಿದಂತೆ ಅನೇಕ ಜಂಗಮ ಸಮಾಜದವರು ಇದ್ದರು.