ಕಿಪಾ ಅಂತರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆ : ʻದಿ ಫೀಯರ್ʼ ಮುಡಿಗೆ ಮತ್ತೆರೆಡು ಚಿನ್ನದ ಪದಕಗಳು
ಕೊಪ್ಪಳ: ಫೋಟೋಗ್ರಾಫಿಕ್ ಸೊಸೈಟಿ ಆಫ್ ಅಮೇರಿಕಾದ ಆಶ್ರಯದಲ್ಲಿ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದ ಕಿಪಾ (K.I.P.A) ಅಂತರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆಯಲ್ಲಿ ನಗರದ ಛಾಯಾಗ್ರಾಹಕ ಪ್ರಕಾಶ ಕಂದಕೂರ ಸೆರೆಹಿಡಿದಿರುವ ʻದಿ ಫೀಯರ್ʼ ಶೀರ್ಷಿಕೆಯ ಚಿತ್ರ ಎರಡು ಪಿಎಸ್‌ಎ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದೆ.
ಜಗತ್ತಿನ 18 ದೇಶಗಳ 65 ಕ್ಕೂ ಹೆಚ್ಚು ಜನ ಛಾಯಾಗ್ರಾಹಕರ 1,300 ಕ್ಕೂ ಹೆಚ್ಚು ಚಿತ್ರಗಳು ಸ್ಪರ್ಧೆಯಲ್ಲಿದ್ದವು. ಅಂತರಾಷ್ಟ್ರೀಯ ಛಾಯಾಗ್ರಾಹಕರಾದ ಪಿಂಕು ಡೇ, ಶಾಮಲ್ ಕುಮಾರ್ ಸಹಾ, ಸುದೀಪ್ ರಾಯ್ ಚೌಧರಿ, ಅಮರನಾಥ್ ದತ್ತಾ ಮತ್ತು ಪಿಹೂ ಮಿತ್ರಾ ಅವರ ತಂಡಗಳು ಚಿತ್ರಗಳ ಆಯ್ಕೆಯಲ್ಲಿ ಭಾಗವಹಿಸಿದ್ದವು.
ಡಿಸೆಂಬರ್ ೩೦ ರ ಬಳಿಕ ಪ್ರಶಸ್ತಿ ವಿಜೇತ ಚಿತ್ರಗಳನ್ನು ಸ್ಪರ್ಧೆಯ ಆನ್‌ಲೈನ್ ಗ್ಯಾಲರಿಯಲ್ಲಿ ವೀಕ್ಷಿಸಬಹುದಾಗಿದೆ ಎಂದು ಸ್ಪರ್ಧೆಯ ಸಂಘಟಕ ಗೋಪ ಹಲ್ದಾರ್ ದತ್ತಾ ತಿಳಿಸಿದ್ದಾರೆ.