ಪ್ರಕಾಶ ಕಂದಕೂರಗೆ ಫೊಟೋಗ್ರಾಫಿಕ್‌ ಸೊಸೈಟಿ ಆಫ್‌ ಅಮೆರಿಕಾದ ಎರಡು ಬೆಳ್ಳಿ ಪದಕಗಳು

Get real time updates directly on you device, subscribe now.

ಕೊಪ್ಪಳ: ಫೊಟೋಗ್ರಾಫಿಕ್‌ ಸೊಸೈಟಿ ಆಫ್‌ ಅಮೆರಿಕಾ(PSA)ದಿಂದ ನಡೆದ 2022-23 ನೇ ಸಾಲಿನ PSA ಇಂಟರ್‌ಕ್ಲಬ್‌ಗಳ ಅಂತರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆಯಲ್ಲಿ ನಗರದ ಹಿರಿಯ ಛಾಯಾಗ್ರಾಹಕ ಪ್ರಕಾಶ ಕಂದಕೂರ ಫೊಟೋಗ್ರಾಫಿಕ್‌ ಸೊಸೈಟಿ ಆಫ್‌ ಅಮೆರಿಕಾದ ಎರಡು ಬೆಳ್ಳಿ ಪದಕಗಳನ್ನು ಪಡೆದುಕೊಂಡಿದ್ದಾರೆ.

ಸ್ಪರ್ಧೆಯ ಮೊನೋಕ್ರೋಮ್‌ ವಿಭಾಗದಲ್ಲಿ ಅವರ ಜನಪ್ರಿಯ ʻಫ್ರೆಂಡ್‌ಶಿಪ್‌ʼ ಶೀರ್ಷಿಕೆಯ ಚಿತ್ರ ಒಂದು PSA ಬೆಳ್ಳಿ ಪದಕ ಪಡೆದುಕೊಂಡರೆ, ಫೊಟೋಜರ್ನಲಿಸಂ ವಿಭಾಗದಲ್ಲಿ ಅವರ ʻದಿ ಫಿಯರ್‌ʼ ಶೀರ್ಷಿಕೆಯ ಚಿತ್ರ ಮತ್ತೊಂದು PSA ಬೆಳ್ಳಿ ಪದಕವನ್ನು ಪಡೆದುಕೊಂಡಿದೆ.

ಪ್ರತಿ ವಿಭಾಗಗಳಲ್ಲಿಯೂ ಒಟ್ಟು ಮೂರು ಸುತ್ತಿನ ತೀರ್ಪು ನೀಡಲಾಗುವ ಈ ಸ್ಪರ್ಧೆ ಅತ್ಯಂತ ಕಠಿಣ ಮತ್ತು ಪ್ರತಿಷ್ಠಿತ ಎನ್ನಿಸಿಕೊಂಡಿದೆ. ಈ ಬಾರಿ ಪ್ರಪಂಚದ ವಿವಿಧ ದೇಶಗಳ ಸುಮಾರು ೧೦೦ ಘಟಾನುಘಟಿ ಕ್ಲಬ್‌(ಛಾಯಾಗ್ರಹಣ ಸಂಸ್ಥೆ)ಗಳು ಸ್ಪರ್ಧೆಯಲ್ಲಿದ್ದವು. ಪ್ರಕಾಶ ಕಂದಕೂರ ಬೆಂಗಳೂರಿನ ಯೂತ್‌ ಫೊಟೋಗ್ರಾಫಿಕ್‌ ಸೊಸೈಟಿಯೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!