ಮಾನವ ಹಕ್ಕುಗಳು ಮತ್ತು ಕಾನೂನು ಸಲಹಾ ಶಿಬಿರ
ಕೊಪ್ಪಳ :
ದಕ್ಷಿಣ ಭಾರತದ ಮಾನವ ಹಕ್ಕುಗಳು ಮತ್ತು ಶಿಕ್ಷಣ ಸಂರಕ್ಷಣೆ ಘಟಕ ಸಿಕ್ರಂ ಸಂಸ್ಥೆ ವತಿಯಿಂದ ಮಾನವ ಹಕ್ಕುಗಳು ಮತ್ತು ಕಾನೂನು ಸಲಹಾ ಶಿಬಿರವನ್ನು ಆಯೋಜಿಸಲಾಯಿತು.
ಮಹಿಳೆಯರ ಹಕ್ಕು ಮತ್ತು ಫೋಕ್ಸೋ ಕಾಯಿದೆ ಬಗ್ಗೆ ಇರುವ ಮಾಹಿತಿಯನ್ನು ವಕೀಲರಾದ ಸವಿತಾ ಹಿರೆಮಠ, ಪರವೀನ್ ರವರು ಮಾಹಿತಿಯನ್ನು ನೀಡಿದರು.
ಹಾಗೂ ದೇವದಾಸಿ ವಸತಿ ನಿಲಯದ ತಲ್ಲೂಕು ಸಂಯೋಜನಾ ಆಧಿಕಾರಿಯಾದ ದಾದೇಸಾಬ್ ರವರು ದೇವದಾಸಿ ಮಹಿಳೆಯರ ಆರೋಗ್ಯ ಮತ್ತು ಅವರಿಗಿರುವ ಹಕ್ಕುಗಳ ಬಗ್ಗೆ ಮಾತಾನಾಡಿದರು.
ಹಾಗೆಯೇ ಮತ್ತು ಸಖಿ ಒನ್ ಸ್ಟಾಪ್ ಕೇಂದ್ರದ ಯಮೂನ ರವರು , ಹೆಣ್ಣುಮಕ್ಕಳ ವಸತಿನಿಲಯ ಮತ್ತು ಕಾನೂನಿನ ಅರಿವಿನ ಬಗ್ಗೆ ಮಾಹಿತಿ ನೀಡಿದರು.
ಸಹಜ ಟ್ರಸ್ಟ್ ನ ಶೀಲಾ ಹಾಲ್ಕುರ್ಕಿ ರವರು ನೊಂದು ಬಂದ ಮಹಿಳೆಯರಿಗೆ ಆಪ್ತಸಮಾಲೋಚನೆ ಯಾಕೆ ಮುಖ್ಯ ಎನ್ನುವುದರ ಕುರಿತು ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಸಹಜ ಟ್ರಸ್ಟ್, ಅಂಗಳ ಸಂಸ್ಥೆ, ಸ್ನೇಹ ಸಂಸ್ಥೆಯು ಜೊತೆಗೂಡಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಗಿಸಿಕೊಟ್ಟರು ಎಂದು ಜಿಲ್ಲಾ ಸಂಯೋಜಕರಾದ ಜ್ಯೋತಿ ಹಿಟ್ನಾಳ್ ರವರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ
Comments are closed.