ಬಯಲಾಟ ಕಲೆಯ ಉಳಿವಿಗೆ ಭದ್ರ ಅಡಿಪಾಯ ಹಾಕಬೇಕಿದೆ-ರಂಗಕರ್ಮಿ ಬಿ.ಪರಶುರಾಮ

0

Get real time updates directly on you device, subscribe now.

ಕೊಪ್ಪಳ: ಅಳಿವನಂಚಿನಲ್ಲಿರುವ ಬಯಲಾಟ ಕಲೆಯ ಉಳಿವಿಗೆ ಭದ್ರ ಅಡಿಪಾಯ ಹಾಕಬೇಕಿದೆ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ಎಸ್.ಕೆ.ಕರೀಂಖಾನ್ ಸೌಹಾರ್ದ ಪ್ರಶಸ್ತಿ ಪುರಸ್ಕೃತರಾದ ರಂಗಕರ್ಮಿ ಬಿ.ಪರಶುರಾಮ ಹೇಳಿದರು.
ಅವರು ಸಮೀಪದ ಲೇಬಗೇರಿ ಗ್ರಾಮದಲ್ಲಿ ಶ್ರೀ ಗಾಳೆಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ದುರ್ಗಾದೇವಿ ಬಯಲಾಟ ಸಂಘದವರು ಹಮ್ಮಿಕೊಂಡಿದ್ದ ಕಡ್ಲಿಮಟ್ಟಿ ಸ್ಟೇಷನ್ ಮಾಸ್ತರ್ ಸಣ್ಣಾಟ ಪ್ರದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಕೊಪ್ಪಳ ಜಿಲ್ಲೆಯಲ್ಲಿ ಬಯಲಾಟ ಕಲೆ ವಿಶೇಷತೆ ಹಾಗೂ ವೈವಿಧ್ಯತೆಯಿಂದ ಕೂಡಿದೆ. ಕೊಪ್ಪಳ ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯ ಪ್ರತೀ ಗ್ರಾಮಗಳಲ್ಲು ಬಯಲಾಟ ಕಲಾತಂಡಗಳು ಇವೆ. ಕಲಾವಿದರೇ ಹಣಹಾಕಿಕೊಂಡು ಪ್ರತೀ ವರ್ಷ ಗ್ರಾಮ ಜಾತ್ರೆಗಳ ಅಂಗವಾಗಿ ಬಯಲಾಟಗಳನ್ನು ಆಡುತ್ತಿದ್ದಾರೆನ್ನುವುದೇ ಹೆಮ್ಮೆಯ ಸಂಗತಿ.
ಇಂತಹ ಬಯಲಾಟಕಲೆಗೆ ದಕ್ಷಿಣ ಕನ್ನಡ ಜಿಲ್ಲೆಯ ಯಕ್ಷಗಾನಕ್ಕೆ ಸಿಕ್ಕ ಮಾನ್ಯತೆಗಳುದಿಗೂ ದೊರೆಯದಿರುವುದೇ ಖೇದಕರ ಸಂಗತಿ. ಅಕ್ಷರಸ್ತರೂ ಅನಕ್ಷರಸ್ತರೂ ಸೇರಿ ಈ ಕಲೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇಂತಹ ಕಲೆಯ ಉಳಿವಿಗೆ ಬೆಳವಣಿಗೆಗೆ ಸೂಕ್ತ ತಳಪಾಯ ಹಾಕಬೇಕಾಗಿದೆ ಇದಕ್ಕೆ ಎಲ್ಲಾ ಜಿಲ್ಲೆಗಳ ಬಯಲಾಟ ಕಲಾವಿದರು ಮಾಸ್ತರರು ಸಂಗೀತ ಮಾಸ್ತರರು ಕೈಜೋಡಿಸಬೇಕಾಗಿದೆ ಎಂದರು.
ಮತ್ತೋರ್ವ ಅತಿಥಿ ಮಾಜಿ ಜಿಲ್ಲಾಪಂಚಾಯಿತಿ ಸದಸ್ಯ ರಾಮಣ್ ಚೌಟಕಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಲೇಬಗೇರಿಯಲ್ಲಿ ಸಣ್ಣಾಟ ದೊಡ್ಡಾಟ ಎರಡೂ ಪ್ರಕಾರಗಳ ಕಲಾವಿದರು ಇದ್ದಾರೆ. ಬಯಲಾಟ ಕಲೆಗೆ ಇಲ್ಲಿನ ಕಲಾವಿದರು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಇಂತಹ ಕಲೆ ಉಳಿಯಲು ಬೆಳೆಯಲು ನಮ್ಮ ಸಹಕಾರ ಸದಾ ಇರುತ್ತದೆ ಎಂದರು.
ಕೊಪ್ಪಳ ಸ.ಪ್ರ.ದ.ಕಾಲೇಜಿನ ಕನ್ನಡ ಉಪನ್ಯಾಸಕ ಎಂ.ಸೋಮೇಶ್ ಉಪ್ಪಾರ ಮಾತನಾಡಿ ಬಯಲಾಟ ಕಲಾವಿದರ ಮಾಹಿತಿ ದಾಖಲೀಕರಣ ಕಾರ್ಯ ಸಂಪೂರ್ಣವಾಗಿ ಆಗಬೇಕಾಗಿದೆ. ಬಯಲಾಟ ಕಲೆಗೆ ತಮ್ಮ ಜೀವಮಾನವನ್ಮೆ ಮುಡುಪಾಗಿಟ್ಟ ಎಷ್ಟೋ ಕಲಾವಿದರ ಬಗ್ಗೆ ಮಾಹಿತಿ ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಬಯಲಾಟ ಅಕಾಡೆಮಿ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಇದಕ್ಕೆ ಎಲ್ಲಾ ಕಲಾವಿದರ ಸಹಕಾರ ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ತಾ.ಪಂ ಸದಸ್ಯರು ದ್ಯಾಮಣ್ಣ ಮ್ಯಾದನೇರಿ, ಗ್ರಾಪಂ ಸದಸ್ಯರಾದ ಪಕೀರಗೌಡ, ಭರಮಮ್ಮ, ಶಂಕ್ರಮ್ಮ , ಮುಖಂಡರಾದ ಸೋಮಶೇಖರ ಮೇಟಿ , ಮಾರುತೆಪ್ಪ ಸಂಗ್ಟಿ, ಬೀರಪ್ಪ ಮೇಟಿ, ಸೋಮಪ್ಪ ಸೂಳಿಕೆರೆ,
ಹನುಮಂತಪ್ಪ ಭಾಗ್ಯನಗರ, ದೇವಪ್ಪ ಮ್ಯಾದನೇರಿ, ನಾಗಪ್ಪ ಪೂಜಾರ್, ಭರಮಪ್ಪ ನಿಟಾಲಿ, ಹನುಮೇಶ್ ತಳವಾರ, ಹನುಮಂತಪ್ಪ,
ಕಥಾ ನಿರ್ದೇಶಕರು ಕೆಂಚಪ್ಪ ಹೊಸಮನಿ, ಡಪ್ಪಿನ ಮಾಸ್ತರ ಮಾರುತಿ ದೊಡ್ಡಮನಿ, ಕೆಂಚಪ್ಪ ಕಥಾ ಸಂಚಾಲಕರು, ನೀಲಪ್ಪ ಉಳ್ಳಾಗಡ್ಡಿ ಹಿಮ್ಮೇಳದವರು ಮಂಜುನಾಥ ಗೌಡರು, ಚೆನ್ನಪ್ಪ ಸೊಂಗಟಿ, ಪಕೀರಪ್ಪ ಕೋರಿ, ದ್ಯಾಮಣ್ಣ ಕೋರಿ ಹಾರ್ಮೋನಿಯಂ ಮಾಸ್ತರ್, ಮರಿಯಪ್ಪ ಈರಾಪುರ್ ದಪ್ಪಿನ ಮಾಸ್ತರ್ ಯಲ್ಲಪ್ಪ ನಂದ್ಯಾಪುರ, ರಮೇಶ ಚೌಟಕಿ ಮತ್ತಿತರರು ಉಪಸ್ಥಿತರಿದ್ದರು.

ಕಡ್ಲಿಮಟ್ಟಿ ಸ್ಟೇಷನ್ ಮಾಸ್ತರ್ ಸಣ್ಣಾಟ ಪ್ರದರ್ಶನ: ನಂತರ ಶ್ರೀ ದುರ್ಗಾದೇವಿ ಬಯಲಾಟ ಕಲಾವಿದರಿಂದ ಕಡ್ಲಿಮಟ್ಟಿ ಸ್ಟೇಷನ್ ಮಾಸ್ತರ್ ಸಣ್ಣಾಟ ಪ್ರದರ್ಶನಗೊಂಡಿತು. ಮುಖ್ಯ ಪಾತ್ರಗಳಲ್ಲಿ ಈರಪ್ಪ ದೊಡ್ಡಮನಿ (ಸ್ಟೇಷನ್ ಮಾಸ್ತರ್), ರಮೇಶ್ ದೊಡ್ಡಮನಿ (ಗಂಗಾ), ನಾಗರಾಜ ಹೆಚ್ (ಚೋಳಬಾಯಿ),ಕೆಂಚಪ್ಪ ಕಟ್ಟೀಮನಿ (ದೊರೆ), ನಾಗಪ್ಪ ಪೂಜಾರ್(ಮಕ್ರೂಮ್), ರಮೇಶ್ ಎನ್. ದೊಡ್ಡಮನಿ (ರಾಮಚಂದ್ರ), ಭೀಮೇಶ್ ಹೆಚ್ (ಪೋಟಾರ್), /ಆನಂದ ದೊಡ್ಡಮನಿ (ಆಚಾರಿ), ಅಂಬಣ್ಣ ದೊಡ್ಡಮನಿ (ರಮಾಬಾಯಿ), ಬಾಲಗೋಪಾಲ ಪಾತ್ರಗಳಲ್ಲಿ ಮಕ್ಕಳಾದ ಆದರ್ಶ, ಭೀಮೇಶ ದೊಡ್ಮನಿ ಮನೋಜ್ಞವಾಗಿ ಅಭಿನಯಿಸಿದರು. ಹನುಮಂತಪ್ಪ ನಂದ್ಯಾಳ ಕಥಾ ಮಾಸ್ತರರು,
ಹಾರ್ಮೋನಿಯಂ ಮಾಸ್ತರ್ ದ್ಯಾಮಣ್ ಕೋರಿ, ಡಪ್ಪಿನ ಮಾಸ್ತರ್ ಮಾರುತಿದೊಡ್ಮನಿ ಕಥಾ ನಿರ್ದೇಶಕರು ಕೆಂಚಪ್ಪ ಹರಿಜನ್ ನಿರ್ವಹಿಸಿದರು.

 

Get real time updates directly on you device, subscribe now.

Leave A Reply

Your email address will not be published.

error: Content is protected !!