ಸೋಲು ಗೆಲುವಿನ ಕುರಿತು ಚಿಂತಿಸದೆ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುಬೇಕು-ಸಂತೋಷ ಪಾಟೀಲ.

Get real time updates directly on you device, subscribe now.

ಯಲಬುರ್ಗಾ 24: ಮಾನಸಿಕ ಹಾಗು ದೈಹಿಕ ಸದೃಢತೆಗೆ ಕ್ರೀಡೆ ಮುಖ್ಯವಾಗಿದ್ದು ಸೋಲು ಗೆಲುವಿನ ಕುರಿತು ಚಿಂತಿಸದೆ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಬೇಕೆಂದು ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಪಾಟೀಲ ಬಿರಾದಾರ್. ಸಲಹೆ ನೀಡಿದರು.
ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಜಿಲ್ಲಾ ಮತ್ತು ತಾಲ್ಲೂಕ ಹಾಗೂ ಗ್ರಾಮ ಪಂಚಾಯತ್ ಕರಮುಡಿ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗ ದಲ್ಲಿ.ಕೆ.ಎಚ್.ಪಿ.ಟಿ.ಸಂಸ್ಥೆಯ ಸ್ಪೂರ್ತಿ ಯೋಜನೆಯಡಿಯಲ್ಲಿ ಹದಿಹರೆಯದ ಹೆಣ್ಣುಮಕ್ಕಳಗೆ ತಾಲ್ಲೂಕು ಮಟ್ಟದ ಕ್ರೀಡಾ ಕೂಟ ಹಮಿಕೊಂಡಿದ್ದರು ಕ್ರೀಡಾಕೂಟದ ವೇದಿಕೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳು ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಶಾರೀರಿಕ ಹಾಗು ಮಾನಸಿಕ ವಿಕಸನ ಸಾಧ್ಯ. ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕ ಅಧ್ಯಯನಕ್ಕೆ ಮಾತ್ರ ಸೀಮಿತರಾಗಬಾರದು. ಕ್ರೀಡೆಯಲ್ಲೂ ಸಾಧನೆ ಮಾಡಬಹುದು ಎಂದು ಹೇಳಿದರು.
ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ ಫಕೀರಪ್ಪ ಕಟ್ಟಿಮನಿಯವರುಮಾತನಾಡಿ.
ಮಕ್ಕಳು ದೈಹಿಕವಾಗಿ ಸದೃಢರಾದಾಗ ಮಾತ್ರ ಶೈಕ್ಷಣಿಕವಾಗಿ ಸಾಧನೆ ಮಾಡಲು ಸಾಧ್ಯ. ಮಕ್ಕಳು ಪಾಠದ ಜೊತೆಗೆ ತಮ ಆಸಕ್ತಿ ಕ್ಷೇತ್ರದ ಕಡೆಗೆ ಗಮನ ಹರಿಸಬೇಕೆಂದರು.
ಕರಮುಡಿ ಗ್ರಾಮ ಪಂಚಾಯತಿ ಅಧ್ಯಕ್ಷ  ಲಿಂಗರಾಜ್ ಉಳ್ಳಾಗಡ್ಡಿ ಕ್ರೀಡೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುದರಿಂದ ದೈಹಿಕ, ಮಾನಸಿಕವಾಗಿ ಸದೃಢರಾಗಲು ಸಾಧ್ಯ. ಕ್ರೀಡೆ ಇಂದಿನ  ಮಕ್ಕಳಿಗೆ ಚೇತನವಾಗಬೇಕು ಎಂದರು. ಕೆ.ಎಚ್.ಪಿ.ಟಿ.ಸಂಯೋಜಕರಾದ ಮಂಜುನಾಥ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು ಪ್ರೌಢಶಾಲೆ ಎಸ್.ಡಿ.ಎಮ್.ಸಿ.
ಅಧ್ಯಕ್ಷರಾದ ಶ್ಯಾಮೀದ್ ಸಾಬ್ ಮುಲ್ಲಾ  ಮಾತನಾಡಿ ಕ್ರೀಡೆಯ ಜೊತೆಗೆ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು. ರೂಡಿಸಿಕೊಳ್ಳಬೇಕು. ಯಾವ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಬೆಳೆಸಿಕೊಳ್ಳುತ್ತಾನೋ ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ಹೊರಹೊಮ್ಮುತ್ತಾನೆಂದು ಹೇಳಿದರು. ಕಾರ್ಯಕ್ರಮದಲ್ಲಿ ಭೀಮಪ್ಪ ಹವಳಿ.ಹಾಗೂ
ಪ್ರಾಥಮಿಕ ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಮುತ್ತಣ್ಣ ಬಲಕುಂದಿ. ಪಂಚಾಯತ ಅಭಿವೃದ್ಧಿ ಅಧಿಕಾರಿ ಬಸವರಾಜ್ ಕಿಳ್ಳಿಕ್ಯಾತರ.ವಿಸ್ತಾರ ಸಂಸ್ಥೆಯ ಇಮಾಮ್ ಸಾಬ್ ಗುಳೇದಗುಡ್ಡ. ಇನ್ನಿತರರು ಮಾತನಾಡಿದರು. ವೇದಿಕೆ ಯಲ್ಲಿ ಗ್ರಾ.ಪಂ.ಸದಸ್ಯರಾದ ರಾಯಣ್ಣ ಹೊಕ್ಕಳದ.ಗಂಗಪ್ಪ ಹವಳಿ. ಪರಸಪ್ಪ ಲಮಾಣಿ.ಮರ್ದಾನಸಾಬ ಮುಲ್ಲಾ.ಹನಮಂತ ಕರೇಕ್ಕಿ.ಮೈಲಾರಪ್ಪ ಪಲ್ಲೇದ.ಅಂದಮ್ಮ ಮುಗಳಿ. ಪ್ರೌಢಶಾಲಾ ಮುಖ್ಯೋಪಾಧ್ಯಾಯ ರಾ ಬಸವರಾಜ್ ಕರಾಟೇ.ದೇವಮ್ಮ ರಾಟಿ.ಕಳಕವ್ವ ದಿಂಡೂರು.ಮಂಜುನಾಥ್ ಪೋಲಿಸ್ ಠಾಣೆಯ ಬಾಳನಗೌಡ ಪೋಲೀಸ್ ಪಾಟೀಲ್.ವಿರೂಪಾಕ್ಷಪ್ಪ ಉಳ್ಳಾಗಡ್ಡಿ. ಕರ್ನಾಟಕ ಯುವಕ ಮಂಡಳದ ಸದಸ್ಯರು 22 ಗ್ರಾ.ಪಂ.ಕ್ರೀಡಾಪಟುಗಳು.ಕೆ.ಎಚ್.ಪಿ.ಟಿ.ಸಿಬ್ಬಂದಿಗಳು ಶಾಲಾ ಶಿಕ್ಷಕರು ದೈಹಿಕ ಶಿಕ್ಷಕರು ಇನ್ನಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!