ಸೇನಾ ನೇಮಕಾತಿ ರ‍್ಯಾಲಿ: ಮಾಹಿತಿ ಕಾರ್ಯಕ್ರಮ
ಬೆಳಗಾವಿ ಸೇನಾ ನೇಮಕಾತಿ ಕಛೇರಿಯ ಸಹಯೋಗದೊಂದಿಗೆ
“ಸೇನಾ ನೇಮಕಾತಿ ರ‍್ಯಾಲಿ” ಅಗ್ನಿಪಥ್ ಯೋಜನೆಯಲ್ಲಿ ಪ್ರೇರಕ ಉಪನ್ಯಾಸ (MOTIVATIONAL LECTURE ON AGNIPATH SCHEME) ಕುರಿತು ಕುಷ್ಟಗಿ ರಸ್ತೆಯ ಟಣಕನಕಲ್ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಶುಕ್ರವಾರದಂದು ಮಾಹಿತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಬೆಳಗಾವಿ ಸೇನಾ ನೇಮಕಾತಿ ಅಧಿಕಾರಿ ಮೇಜರ್ ವಿಶ್ವನಾಥ, ಸುಬೆದಾರ ಮೇಜರ್ ಡಿ.ಆರ್.ಲೋಹಿಯಾ ಮತ್ತು ಸುಬೆದಾರ ಮಲಕೀತ್ ಸಿಂಗ್ ಅವರು ಭಾಗವಹಿಸಿ ನ.26 ರಿಂದ ಡಿಸೆಂಬರ್ 08 ರವರೆಗೆ ಕೊಪ್ಪಳದ ಜಿಲ್ಲಾ ಕ್ರಿಡಾಂಗಣದಲ್ಲಿ ನಡೆಯಲಿರುವ ಸೇನಾ ನೇಮಕಾತಿ ರ‍್ಯಾಲಿಯ ಬಗ್ಗೆ ಕೈಗಾರಿಕಾ ತರಬೇತಿ ಸಂಸ್ಥೆಯ ತರಬೇತಾರ್ಥಿಗಳೀಗೆ ಮಾಹಿತಿಯನ್ನು ನೀಡಿದರು.
ಸಂಸ್ಥೆಯ ಪ್ರಾಚಾರ್ಯರಾದ ಗವಿಶಂಕರ ಕೆ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಸ್ವಾಗತ ಹಾಗೂ ಕಾರ್ಯಕ್ರಮದ ನಿರೂಪಣೆಯನ್ನು ಪ್ರವೀಣ ಮತ್ತು ವಂದನಾರ್ಪಣೆಯನ್ನು ದೇವಪ್ಪ ಕುರಿ ಅವರು ನಡೆಸಿಕೊಟ್ಟರು.
Comments are closed.