ವಲಸಿಗರೊಂದಿಗೆ ಕನ್ನಡ ಭಾಷೆಯಲ್ಲಿ ಮಾತನಾಡಿ-ಡಾ.ಪುರುಷೋತ್ತಮ ಬಿಳಿಮಲೆ
ಕನ್ನಡ ಕನ್ನಡದವರಿಂದಲೇ ಉಳಿಯಬೇಕಿದೆ : ವಲಸಿಗರಿಗೂ ಕನ್ನಡ ಕಲಿಸಿ
ಕೊಪ್ಪಳ: . ಕನ್ನಡವನ್ನು ನಾವೇ ಮಾತನಾಡದಿದ್ದರೆ, ಬಳಕೆ ಮಾಡದಿದ್ದರೆ ಉಳಿಯಲು ಹೇಗೆ ಸಾಧ್ಯ ? ಕರುನಾಡಿಗೆ ಬರುವ ವಲಸಿಗರಿಗೂ ಕನ್ನಡ ಕಲಿಸಿ ಕನ್ನಡವನ್ನು ಉಳಿಸುವ ಕೆಲಸ ಎಲ್ಲರಿಂದಲೂ ಆಗಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ಹೇಳಿದರು.
ಕೊಪ್ಪಳ ನಗರದ ಸರ್ಕಾರಿ ನೌಕರರ ಭವನದಲ್ಲಿ ಸಾಹಿತಿ ಗವಿಸಿದ್ದ ಎನ್ ಬಳ್ಳಾರಿ ವೇದಿಕೆ, ತಳಮಳ ಪ್ರಕಾಶನದಿಂದ ನಡೆದ ಕವಿ ಗವಿಸಿದ್ದ ಎನ್ ಬಳ್ಳಾರಿ ಸಾಹಿತ್ಯೋತ್ಸವ ಸಮಾರಂಭ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಇಂದು ಕನ್ನಡ ಶಾಲೆ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸರ್ಕಾರವೇ ಆಂಗ್ಲ ಶಾಲೆ ಆರಂಭ ಮಾಡುತ್ತಿದೆ. ಭಾರತೀಯ ಶಿಕ್ಷಣ ಕುಸಿಯುತ್ತಿದೆ. ಕನ್ನಡ ಭಾಷೆ ಕರ್ನಾಟಕದಲ್ಲೇ ಕುಸಿಯುತ್ತಿದೆ. ನಾವು ಕನ್ನಡ ಕಟ್ಟದಿದ್ದರೆ ಕನ್ನಡ ಮುಂದೊAದು ದಿನ ಮಾತನಾಡಲು ಮಾತ್ರ ಉಳಿಯುತ್ತೆ. ಕನ್ನಡ ಉಳಿಸುವ ಮಾರ್ಗವೇನು ಎನ್ನುವುದು ನಾವು ತಿಳಿಯಬೇಕು. ನಾವು ವಲಸಿಗರ ಜೊತೆ ಕನ್ನಡ ಬಿಟ್ಟು ಅವರ ಭಾಷೆಯಲ್ಲಿಯೇ ಮಾತನಾಡುತ್ತೇವೆ. ಅವರಿಗೆ ಕನ್ನಡ ಬರವಣಿಗೆ ಬರಹ ಕಲಿಸುವುದು ಇರಲಿ, ಕನಿಷ್ಟ ಅವರಿಗೆ ಕನ್ನಡ ಮಾತನಾಡುವುದನ್ನು ಕಲಿಸಬೇಕು. ಅಂದಾಗ ಕನ್ನಡ ಉಳಿಯಲು ಸಾಧ್ಯವಿದೆ ಎಂದರು.
ಕರ್ನಾಟಕದ ಏಕೀಕರಣದ ವೇಳೆ ೨೨ ಭಾಗಗಳಾಗಿ ಹೊಡೆದು ಹೋಗಿದೆ. ಈ ನೆಲದವರು ಹೋರಾಟ ಮಾಡಿದ ಬೆವರು ಇನ್ನೂ ಆರಿಲ್ಲ. ಈ ಹೊತ್ತಿನಲ್ಲಿ ಪ್ರತ್ಯೇಕತೆ ಕೂಗು ಕಾಣುತ್ತಿವೆ. ಈಗಾಗಲೇ ಕರ್ನಾಟಕ ವಿವಿಧ ಭಾಷೆಗಳ ಹೆಸರಲ್ಲಿ ವಿಭಾಗ ಆಗಿದೆ. ಈ ದೇಶಕ್ಕೆ ಸ್ವಾತಂತ್ರ÷್ಯ ದೊರೆತ ಮೇಲೆ ದೇಶ ಕಟ್ಡಿದ, ದೇಶಕ್ಕಾಗಿ ಹೋರಾಡಿದ ಗಾಂಧಿಯ ತತ್ವ ಅನುಕರಣೆ ಮಾಡಿದ ಜನರನ್ನು ನಾನು ನೋಡಿ ಹತ್ತಿರದಿಂದ ಬೆಳೆದವನು. ಈ ನೆಲದಲ್ಲಿ ೭೦-೮೦ರ ಸಂಕೇತವಾಗಿ ಜನಪರ ಚಳುವಳಿಯಲ್ಲಿ ಬೆಳೆದರು. ಆಗ ಗವಿಸಿದ್ದ ಬಳ್ಳಾರಿ ಈ ಜನಪರ ಚಳುವಳಿಯಿಂದ ಸಾಹಿತ್ಯ ಕಟ್ಟಿ ಬೆಳೆಸಿದವರು. ಅವರಲ್ಲಿ ಕಾವ್ಯದ ಒಳಗುಟ್ಟು ಗೊತ್ತಿತ್ತು. ಕಾವ್ಯದ ಸೂಕ್ಷ÷್ಮಗಳು ಗೊತ್ತಿದ್ದವು. ಹಾಗಾಗಿ ಅವರಲ್ಲಿ ಗಟ್ಟಿ ಸಾಹಿತ್ಯ ಹೊರ ಹೊಮ್ಮಿತು ಎಂದರು.
ದೇಶಕ್ಕೆ ಸ್ವಾತಂತ್ರö್ಯ ತಂದುಕೊಟ್ಟ ಗಾಂಧಿ ಹಾಗೂ ಅವರೊಡಗೂಡಿ ಹೋರಾಡಿದವರ ನೋಡಿ ಕಲಿತವರು ನಾವು, ಬೆಳೆದವರು ನಾವು. ಉಯಲಿಗೋಳ ನಾರಾಯಣ ರಾವ್ ಅವರು ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂದು ಹಾಡು ಬರೆದವರು. ಆ ಹಾಡಿಗೆ ಈಗ ನೂರು ವರ್ಷ. ಈ ವರ್ಷವನ್ನು ಸರ್ಕಾರ ಸಂಭ್ರಮದಿAದ ಆಚರಿಸಲಿ ಎಂದು ಸರ್ಕಾರಕ್ಕೂ ಮನವಿ ಮಾಡಿದ್ದೇನೆ. ಗಾಂಧೀಜಿ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾದ ನೆಲವಿದು. ಈ ಹಾಡಿಗೂ ಗಾಂಧಿಗೂ ಸಂಪರ್ಕ ಮಾಡಿ ಸರ್ಕಾರ ಸಂಭ್ರಮ ಆಚರಿಸಲಿ ಎಂದು ಮನವಿ ಮಾಡಿದ್ದೇನೆ ಎಂದರು.
ಕೊಪ್ಪಳದಲ್ಲಿ ೧೯೮೦-೯೦ರ ಕಾಲಘಟ್ಟದಲ್ಲಿ ಜನರ ಚಳುವಳಿ ಆರಂಭವಾದವು. ಆ ಚಳುವಳಿ ಮೂಲಕ ಸಾಹಿತ್ಯದ ಮಾಂತ್ರಿಕರಾದ ಕೊಪ್ಪಳದ ಕವಿ ಗವಿಸಿದ್ದ ಬಳ್ಳಾರಿ ಈ ನೆಲದ ಪರಿಸರ ಸಾಹಿತ್ಯವನ್ನು ದೂರದ ಜನರಿಗೆ ತಿಳಿಸಿ ಕೊಟ್ಟವರು. ಅವರನ್ನ ಈ ನೆಲದ ಕವಿ ಎನ್ನುವಲ್ಲಿ ಎರಡು ಮಾತಿಲ್ಲ ಎಂದರು.
ಕೊಪ್ಪಳ ವಿವಿ ಉಪ ಕುಲಪತಿ ಡಾ. ಬಿ ಕೆ ರವಿ ಮಾತನಾಡಿ, ಗವಿಸಿದ್ದ ಎನ್ ಬಳ್ಳಾರಿ ಕವಿ, ಸಾಹಿತಿ, ಓರ್ವ ಪತ್ರಕರ್ತರು ಹೌದು. ಅವರು ಈ ನೆಲಕ್ಕೆ ಕೊಟ್ಟ ಸಾಹಿತ್ಯದ ಕೊಡುಗೆ ಅಪಾರ. ಕೊಪ್ಪಳ ಜಿಲ್ಲೆಯಾಗಬೇಕು ಎಂದು ಚಳುವಳಿ ರೂಪಿಸಿದ ಕೀರ್ತಿ ಬಳ್ಳಾರಿ ಅವರಿಗೆ ಸಲ್ಲುತ್ತದೆ. ಇಂದು ಸಮಾಜಮುಖಿ ಕೆಲಸ ಮಾಡುವುದು ತುಂಬ ಕಡಿಮೆ. ಬಳ್ಳಾರಿ ಅವರ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಸಾಹಿತ್ಯದಲ್ಲಿ ಸೃಜನಶೀಲತೆ, ಸಾಹಿತ್ಯ ಭಾಷೆ ಮುಖ್ಯ ಆಗುತ್ತದೆ. ಬಳ್ಳಾರಿ ಅವರಿಗೆ ಆ ಶಕ್ತಿ ಇತ್ತು ಎನ್ನುವುದು ಅವರ ಕೃತಿಗಳ ಮೂಲಕ ನಮಗೆ ಗೊತ್ತಾಗುತ್ತದೆ. ಸಾಹಿತ್ಯವು ನಮ್ಮ ಯೋಚನಾ ಲಹರಿಯಲ್ಲಿ ಮುಳುಗಿಸುತ್ತದೆ. ಸಾಹಿತಿಯ ಕಾವ್ಯವು ತರ್ಕಕ್ಕೆ ಹಚ್ಚುತ್ತದೆ. ಅಂಥ ಗವಿಸಿದ್ದ ಎನ್ ಬಳ್ಳಾರಿ ಅವರ ಸಾಹಿತ್ಯದ ಕಂಪನ್ನು ಅವರ ಮಕ್ಕಳು ಇಂದಿಗೂ ಮುಂದುವರೆಸಿ ಅವರ ಹೆಸರಿನಲ್ಲಿ ಸಾಹಿತ್ಯೋತ್ಸವ ಮಾಡುತ್ತಿದ್ದು ಸಂತಸ ತರಿಸಿದೆ ಎಂದರು.
ವಾರ್ತಾ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಡೊಳ್ಳಿನ್ ಮಾತನಾಡಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕöÈತರಾದ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಹೆಚ್.ಎಸ್.ಪಾಟೀಲ್, ಬಸವರಾಜ ಬಳ್ಳೊಳ್ಳಿ, ರವಿ ಹಂಪಿ, ಚನ್ನಪ್ಪ ಅಂಗಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಆರು ಸಾಧಕರಿಗೆ ಸನ್ಮಾನ ನೆರವೇರಿತು. ಚನ್ನಪ್ಪ ಅಂಗಡಿ ಅವರ ಇನ್ನು ಕೊಟ್ಟೆನಾದೊಡೆ ಹಾಗೂ ನಾಗೇಶ ನಾಯಕ್ ಅವರ ಮನುಷ್ಯರಿಲ್ಲದ ನೆಲ ಎಂಬ ಕೃತಿಗಳು ಲೋಕಾರ್ಪಣೆಗೊಂಡವು.
Comments are closed.