ಅಹಿಂಸಾ ತತ್ವಗಳ ಪ್ರತಿಪಾದಕ ಭಗವಾನ್ ಮಹಾವೀರ

0

Get real time updates directly on you device, subscribe now.

ಕೊಪ್ಪಳ ಏ. ೧೨:ಜಗತ್ತಿಗೆ ಅಹಿಂಸಾ ತತ್ವಗಳನ್ನು ಪ್ರತಿಪಾದಿಸಿದವರು ಭಗವಾನ್ ಮಹಾವೀರರು.ಪರಿಶುದ್ಧವಾದ ಬ್ರಹ್ಮಚರ್ಯ, ವೃತಗಳ ಆಚರಣೆಯಿಂದಮನುಷ್ಯನಿಗೆ ಮುಕ್ತಿದೊರೆಯುತ್ತದೆಎಂದುಸಾರಿದ ವರ್ಧಮಾನ ಮಹಾವೀರರ ಸಂ

 
 

ದೇಶಗಳು ಇಂದಿನ ಕಲುಷಿತ ಸಮಾಜಕ್ಕೆತೀರಾಅವಶ್ಯವೆಂದುಕನ್ನಡಉಪನ್ಯಾಸಕರಾದ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್‌ಅವರು ನುಡಿದರು. ಅವರು ಹುಲಿಗಿ ಗ್ರಾಮದಲ್ಲಿಜೈನಸಮಾಜದಿಂದ ಪಾರ್ಶ್ವನಾಥದಿಗಂಬರಜೈನಬಸದಿಯಲ್ಲಿ ಭಗವಾನ್ ಮಹಾವೀರರಜನ್ಮಕಲ್ಯಾಣಕಾರ್ಯಕ್ರಮದಲ್ಲಿ ಮಾತನಾಡಿದರು. ಮುಂದುವರೆದು ಮಹಾವೀರರು ಸಮ್ಯಕ್‌ದರ್ಶನ, ಸಮ್ಯಕ್‌ಜ್ಞಾನ, ಸಮ್ಯಕ್‌ಚಾರಿತ್ರ್ಯ ಹೊಂದಿದಲ್ಲಿಮನುಷ್ಯನು ಪರಿಪೂರ್ಣನಾಗುತ್ತಾನೆ. ಪೂಜೆಅಥವಾ ಪ್ರಾರ್ಥನೆಗಳಿಂದ ಪಾಪ ತೊಲಗುವುದಿಲ್ಲ, ಸದ್ಗುಣ ನಡವಳಿಕೆಗಳಿಂದ ಮಾತ್ರಮನುಷ್ಯನಿಗೆ ಮುಕ್ತಿ ದೊರೆಯುತ್ತದೆ ಎಂಬ ಸಂದೇಶವನ್ನು ಮಹಾವೀರರು ಸಾರಿದ್ದಾರೆಂದು ನುಡಿದರು. ಪ್ರಾರಂಭದಲ್ಲಿಜೈನಸಮಾಜದಅಧ್ಯಕ್ಷರಾದಡಾ.ಚಂದ್ರನಾಥತವನಪ್ಪನವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಿ ಸಮಾಂತ ಪಾಟೀಲ್ ಹಾಗೂ ವಿವಾಂತ ಪಾಟೀಲ್ ಪ್ರಾರ್ಥನೆಗೈದರೆ, ಸುಹಾಸ ಇಜಾರಿಕಾರ್ಯಕ್ರಮದ ನಿವಾರ್ಹಣೆ ಮಾಡಿದರು. ಕೊನೆಗೆ ಪುಷ್ಪದಂತ ಪಾಟೀಲ್ ವಂದಿಸಿದರು. ಮೊದಲು ದಿ|| ಬಾಲನಗೌಡ್ರು ಪಾಟೀಲರವರ ಮನೆಯ ಬಾವಿಪೂಜೆ, ಮಹಾವೀರರಿಗೆ ಪಂಚಾಮೃತಅಭಿಷೇಕದ ನಂತರಭಗವಾನ್ ಮಹಾವೀರರ ಭಾವಚಿತ್ರದೊಂದಿಗೆಮಹಿಳೆಯರ ಕುಂಭ, ವಾದ್ಯಗಳ ಮೆರವಣಿಗೆ ಮೂಲಕ ಬಸದಿಗೆ ಆಗಮಿಸಲಾಯಿತು. ಬಸದಿಯಲ್ಲಿಭಗವಾನ್‌ಮಹಾವೀರ ಮತ್ತುತೀರ್ಥಂಕರರ ಬಿಂಬಗಳಿಗೆ ಪೂಜೆ ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಮಾಜದ ಅನೇಕ ಮುಖಂಡರು, ಊರಿನ ಹಿರಿಯರು ಉಪಸ್ಥಿತರಿದ್ದರು.

 

Get real time updates directly on you device, subscribe now.

Leave A Reply

Your email address will not be published.

error: Content is protected !!