ಎ.ಐ.ಸಿ.ಸಿ.ಟಿ.ಯು. ನ ೨ನೇ ಜಿಲ್ಲಾ ಸಮ್ಮೇಳನ ಯಶಸ್ವಿ

0

Get real time updates directly on you device, subscribe now.


ಗಂಗಾವತಿ: ಕೊಪ್ಪಳ ಜಿಲ್ಲೆ ಗಂಗಾವತಿ ನಗರದ ಮಹಾಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎ.ಐ.ಸಿ.ಸಿ.ಟಿ.ಯು) ಕೊಪ್ಪಳ ಜಿಲ್ಲಾ ೨ನೇ ಜಿಲ್ಲಾ ಸಮ್ಮೇಳನ ನಡೆಯಿತು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಹಿರಿಯ ಕಾರ್ಮಿಕ ಮುಖಂಡ ಜೆ. ಭಾರದ್ವಾಜ್‌ರವರು ಕೇಂದ್ರ ಸರ್ಕಾರ ೪೪ ಕಾರ್ಮಿಕ ಕಾನೂನುಗಳ ಬದಲಾಗಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿ, ಕಾರ್ಪೊರೇಟ್ ಬಂಡವಾಳಕ್ಕೆ ದೇಶದ ಸಂಪನ್ಮೂಲವನ್ನು ಧಾರೆಯೆರೆಯುತ್ತಾ, ಕಾರ್ಮಿಕ ವರ್ಗದ ವಿನಾಶಕ್ಕೆ ಹಾದಿಯನ್ನು ಸುಗಮಗೊಳಿಸುತ್ತಲಿದೆ. ಕಾರ್ಮಿಕರು ತನ್ನ ವರ್ಗ ಮತ್ತು ಹಕ್ಕುಗಳು ಹಾಗೂ ಕಾನೂನುಗಳನ್ನು ರಕ್ಷಿಸಿಕೊಳ್ಳಲು ಜೀವನ್ಮರಣದ ಹೋರಾಟಗಳಿಗೆ ಹೆಗಲೊಡ್ಡಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಎಐಸಿಸಿಟಿಯು ರಾಜ್ಯ ಉಪಾಧ್ಯಕ್ಷೆ ಮೈತೀಯಿ ಕೃ?ನ್ ಮಾತನಾಡಿ ಕೇಂದ್ರದ ಆರ್‌ಎಸ್‌ಎಸ್ ನೇತೃತ್ವದ ಫ್ಯಾಸಿಸ್ಟ್ ಆಳ್ವಿಕೆಯಿಂದ ಕಾರ್ಮಿಕ ವರ್ಗದ ಹಕ್ಕುಗಳು, ಕಾನೂನುಗಳನ್ನು ಮರೆ ಮಾಚುತ್ತಿವೆ. ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ಏರ್ಪಾಡನ್ನು ಮೋದಿ ಆಡಳಿತ ಸಿದ್ದಮಾಡಿಕೊಳ್ಳುತ್ತಿದೆ. ಕಾರ್ಮಿಕರ ಹಕ್ಕುಗಳಿಗಾಗಿ ಐಕ್ಯದಿಂದ ಹೋರಾಟ ತೀವ್ರಗೊಳಿಸಬೇಕೆಂದು ಎಂದರು. ಎಐಸಿಸಿಟಿಯು ರಾಜ್ಯ ಸಮಿತಿ ಸದಸ್ಯರಾದ ವಿಜಯ್ ದೊರೆರಾಜ್, ನಾಗರಾಜ ಪೂಜಾರ್ ಇತರರು ಮಾತನಾಡಿದರು.
ಪೌರಕಾರ್ಮಿಕರು, ಘನ ತ್ಯಾಜ್ಯ ವಿಲೇವಾರಿ ವಾಹನ ಚಾಲಕರು, ಕಟ್ಟಡ ಕಾರ್ಮಿಕರು, ಆಟೋ, ಹಮಾಲಿ, ಬೀದಿಬದಿ ವ್ಯಾಪಾರಿ ಸೇರಿದಂತೆ ಕಾರ್ಮಿಕರನ್ನೊಳಗೊಂಡು ಜಿಲ್ಲೆಯ ಏಳು ತಾಲೂಕುಗಳ ಕಾರ್ಮಿಕ, ಕಾರ್ಮಿಕರ ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.
ಸಮ್ಮೇಳನದಲ್ಲಿ ೨೨ ಜನರ ಎಐಸಿಸಿಟಿಯು ಕೊಪ್ಪಳ ಜಿಲ್ಲಾ ಸಮಿತಿ ರಚಿಸಿ, ಜಿಲ್ಲಾ ಗೌರವ ಅಧ್ಯಕ್ಷರನ್ನಾಗಿ ಭಾರಧ್ವಾಜ್, ಜಿಲ್ಲಾಧ್ಯಕ್ಷರನ್ನಾಗಿ ವಿಜಯ್ ದೊರರಾಜ್, ಕಾರ್ಯದರ್ಶಿಯಾಗಿ ಕೇಶವ ನಾಯಕ್‌ರವರು ಆಯ್ಕೆಗೊಂಡರು.
ಇದೆ ಸಂದರ್ಭದಲ್ಲಿ ಸಣ್ಣ ಹನುಮಂತಪ್ಪ ಹುಲಿಹೈದರ, ಪರುಶುರಾಮ, ಭೀಮಣ್ಣ, ಚಾಂದ್‌ಪಾ?, ಮಾಯಮ್ಮ, ಪಾರ್ವತಮ್ಮ, ಬುರಾನ್ನುದ್ದಿನ್, ರೇಣುಕಮ್ಮ, ಕೆ. ದುರುಗಪ್ಪ, ಹುಲ್ಲೇಶ, ಮಂಜುನಾಥ, ಜಡಿಯಪ್ಪ ಇನ್ನಿತರರು ಇದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!